ಬೈಂದೂರು(ಅ,10): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಬೈಂದೂರು – ಶಿರೂರು ಘಟಕದ ನೇತೃತ್ವದಲ್ಲಿ ನಾಡೋಜ ಡಾ. ಜಿ. ಶಂಕರ್ ಜನ್ಮದಿನದ ಪ್ರಯುಕ್ತ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ ಉಡುಪಿ ಮತ್ತು ಕೆ ಎಮ್ ಸಿ ಮಣಿಪಾಲ ಇವರ ಸಹಯೋಗದಲ್ಲಿ ಚರ್ಮ, ಕಿವಿ, ಮೂಗು ಹಾಗೂ ಗಂಟಲಿನ ಉಚಿತ ತಪಾಸಣಾ ಶಿಬಿರ ಅ .09 ರಂದು ಸಂಪನ್ನಗೊಂಡಿತು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುನ್ನೂರಕ್ಕೂ ಹೆಚ್ಚು ಫಲಾನುಭವಿಗಳು ಸದುಪಯೋಗವನ್ನು ಪಡೆದುಕೊಂಡರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಶ್ರೀ ಬಿ. ಎಮ್. ಸುಕುಮಾರ್ ಶೆಟ್ಟಿ ನೆರವೇರಿಸಿದರು.ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ರವಿರಾಜ್ ಚಂದನ್ ಕಳವಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘದ ಶಾಖಾಧ್ಯಕ್ಷರಾದ ಶ್ರೀ ಉದಯಕುಮಾರ್ ಹಟ್ಟಿಯಂಗಡಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಹಾಗೂ ಮೊಗವೀರ ಯುವ ಸಂಘಟನೆಯ ಗೌರವ ಸಲಹೆಗಾರರಾದ ಶ್ರೀ ರಾಮ ಎನ್. ಮೊಗವೀರ ಅಳ್ವೆಗದ್ದೆ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲಾ ಎಸ್. ಕುಂದರ್, ಉಪ್ಪುಂದ ಗ್ರಾ. ಪಂ. ಸದಸ್ಯರಾದ ಶ್ರೀ ಜಗನ್ನಾಥ ಎಂ. ಕರ್ಕಿಕಳಿ, ಜಿಲ್ಲಾ ಸಂಘಟನೆಯ ಪರವಾಗಿ ಉಪಾಧ್ಯಕ್ಷರಾದ ಶ್ರೀ ಕೃಷ್ಣ ಬೈಂದೂರು, ಶ್ರೀ ರಮೇಶ್ ಟಿಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ರವೀಶ್ ಎಸ್. ಕೊರವಡಿ, ಹಾಗೂ ಕೆ. ಎಂ. ಸಿ. ಮಣಿಪಾಲದ ವೈದ್ಯಕೀಯ ಅಧೀಕ್ಷಕರ ಪರವಾಗಿ ಡಾ. ಅನುಷಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮೊಗವೀರ ಯುವ ಸಂಘಟನೆಯ ಕಟ್ಟಡ ನಿರ್ಮಾಣಕ್ಕೆ ಎರಡು ಎಕರೆ ನಿವೇಶನ ಮಂಜೂರು ಮಾಡಿಸುವ ಭರವಸೆಯನ್ನು ನೀಡಿದರು. ಸಂಘಟನೆಯ ಪರವಾಗಿ ಶಾಸಕರನ್ನು ಹಾಗೂ ಮೊಗವೀರ ಮಹಾಜನ ಸೇವಾ ಸಂಘದ ಬಗ್ವಾಡಿ ಹೋಬಳಿಯ ಅಧ್ಯಕ್ಷರಾದ ಶ್ರೀ ಉದಯಕುಮಾರ್ ಹಟ್ಟಿಯಂಗಡಿಯವರನ್ನು ಗೌರವಿಸಲಾಯಿತು.
ಜಿಲ್ಲಾ ಸಂಘಟನೆಯ ಉಪಾಧ್ಯಕ್ಷ ಕೃಷ್ಣ ಬೈಂದೂರು ಸ್ವಾಗತಿಸಿ, ಬೈಂದೂರು ಘಟಕದ ಕೋಶಾಧಿಕಾರಿ ಸೋಮಶೇಖರ ಪಡುವರಿ ವಂದಿಸಿದರು. ಬೈಂದೂರು ಘಟಕದ ಉಪಾಧ್ಯಕ್ಷರಾದ ಪಾಂಡುರಂಗ ಅಳ್ವೆಗದ್ದೆ ಕಾರ್ಯಕ್ರಮ ನಿರೂಪಿಸಿದರು.