ಮಲ್ಪೆ (ನ, 18) : ರಾಜ್ಯದ ಬೃಹತ್ ಮೀನುಗಾರಿಕಾ ಬಂದರಾದ ಮಲ್ಪೆ ಬಂದರಿನಲ್ಲಿ ದಿನನಿತ್ಯ ಕೋಟ್ಯಂತರ ರೂಪಾಯಿ ಮೀನಿನ ವ್ಯವಹಾರ ನಡೆಯುತ್ತದೆ. ನೂರಾರು ಬೋಟುಗಳಲ್ಲಿ ಆಂದ್ರಪ್ರದೇಶ ,ತಮಿಳು ನಾಡು, ಒರಿಸ್ಸಾ ಹೀಗೆ ವಿವಿಧ ರಾಜ್ಯಗಳ ಮೀನುಗಾರರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಮೀನುಗಾರರ ಉದ್ಯೋಗ ನಿಮಿತ್ತ ಮಲ್ಪೆ ಬಂದರನ್ನು ಅವಲಂಬಿದ್ದಾರೆ. ರಾತ್ರಿ ಹಗಲೆನ್ನದೇ ಮೀನುಗಾರಿಕಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವ ಈ ಬಂದರಿನ ನದಿಯಲ್ಲಿ ಆತಿಯಾದ ಹೂಳು ತುಂಬಿದ್ದು ಮೀನುಗಾರರಲ್ಲಿ ಆತಂಕ […]
Author: KundaVahini Editor
ಗಂಗೊಳ್ಳಿಯ ಶ್ಯಾಮ್ ಗೆ ಕರಾಟೆಯಲ್ಲಿ ಬೆಳ್ಳಿ ಪದಕ
ಗಂಗೊಳ್ಳಿ (ನ, 17) : ಶೋರಿನ್ ರಿಯೂ ಕರಾಟೆ ಎಂಡ್ ಕೊಬುಡೊ ಅಸೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಇತ್ತೀಚಿಗೆ ನಡೆದ 18ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯ ಫೈಟ್ ವಿದ್ ಗೋಲ್ಡನ್ ಬ್ರೌನ್ ವಿಭಾಗದಲ್ಲಿ ಗಂಗೊಳ್ಳಿಯ ಶ್ಯಾಮ್ ಜಿ. ಎನ್. ಪೂಜಾರಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕವನ್ನು ಪಡೆದಿರುತ್ತಾನೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯಲ್ಲಿ ಓದುತ್ತಿರುವ […]
ಪುತ್ತೂರು : ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ – ಮಾಹಿತಿ ಕಾರ್ಯಾಗಾರ
ಪುತ್ತೂರು (ನ, 17) : ಇಂಜಿನಿಯರಿಂಗ್ ಶಿಕ್ಷಣವನ್ನು ಮುಗಿಸಿ ಕೆಲಸಕ್ಕಾಗಿ ಹುಡುಕಾಡುವ ಬದಲಿಗೆ ಇತರರಿಗೆ ಉದ್ಯೋಗವನ್ನು ನೀಡುವ ಉದ್ಯಮವನ್ನು ನಿರ್ಮಾಣ ಮಾಡಿ ಸ್ವತಂತ್ರ ಬದುಕನ್ನು ರೂಪಿಸಿಕೊಳ್ಳಿ ಎಂದು ಖಾದಿ ಮತ್ತು ಗ್ರಾಮೋದ್ಯೋಗ ತರಬೇತಿ ಕೇಂದ್ರ ಬೆಂಗಳೂರು ಇದರ ನಿರ್ದೆಶಕ ಡಾ.ಮೋಹನ್ ರಾವ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಉದ್ಯಮಶೀಲತೆ ಅಭಿವೃದ್ಧಿ ಪ್ರಕೋಷ್ಟದ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. […]
ಕೋಟಿಲಿಂಗೇಶ್ವರ ಕಲಾಬಳಗ (ರಿ.) ಕೋಟೇಶ್ವರ : ಕೊಡಿ ಹಬ್ಬದ ಪ್ರಯುಕ್ತ ಯಕ್ಷಗಾನ – ಕೌಸಲ್ಯಾ ವಿವಾಹ
ಕೋಟೇಶ್ವರ (ನ, 17) : ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಳದ ವಾರ್ಷಿಕ ರಥೋತ್ಸವ – ಕೊಡಿ ಹಬ್ಬದ ಅಂಗವಾಗಿ ನ,20 ರ ರಾತ್ರಿ 8 ಗಂಟೆಗೆ ಕೋಟಿಲಿಗೇಶ್ವರ ದೇವಸ್ಥಾನದ ಸದಾನಂದ ರಂಗಮಂಟಪದಲ್ಲಿ ಕೋಟಿಲಿಂಗೇಶ್ವರ ಕಲಾಬಳಗ (ರಿ.) ಇವರಿಂದ ಯಕ್ಷಗಾನ ದಿವಂಗತ ಎಮ್. ಜಿ ಬರವಣಿ ವಿರಚಿತ ಯಕ್ಷಗಾನ ಗುರುಗಳಾದ ಕಡ್ಲೆ ಗಣಪತಿ ಹೆಗ್ಡೆ ನಿರ್ದೇಶನದಲ್ಲಿ –“ಕೌಸಲ್ಯಾ ವಿವಾಹ” ಪ್ರಸಂಗ ಪ್ರದರ್ಶನ ಗೊಳ್ಳಲಿದೆ. ಹಿಮ್ಮೇಳದ ಭಾಗವತಿಕೆಯಲ್ಲಿ ಹೆಸರಾಂತ […]
ಇ ಸಿ ಆರ್ ಕಾಲೇಜು :ಅಭಿವಿನ್ಯಾಸ ಕಾರ್ಯಕ್ರಮ
ಮಧುವನ(ನ,17): ಇಲ್ಲಿನ ಇ ಸಿ ಆರ್ ಕಾಲೇಜು ಸಭಾಂಗಣದಲ್ಲಿ ಪ್ರಥಮ ಪದವಿ ತರಗತಿ ವಿದ್ಯಾರ್ಥಿಗಳಿಗೆ “ಓರಿಯಂಟೇಶನ್” ಕಾರ್ಯಕ್ರಮವನ್ನು ನ,17 ರಂದು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಧು ಟಿ ಭಾಸ್ಕರನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನುದ್ದೇಶಿ ಭವಿಷ್ಯದ ಉದ್ದೇಶಿತ ಯೋಜನೆಗಳನ್ನು ವಿವರಿಸಿದರು. ಆಡಳಿತಾಧಿಕಾರಿಗಳಾದ ಶ್ರೀ ಜೋಬಿನ್ ಜೋಸೆಫ್ ಕಾಲೇಜಿನ ನೀತಿ ನಿಯಮಗಳನ್ನು ತಿಳಿಸಿದರು. ಕಾಲೇಜಿನ ಪ್ರಾಂಶಪಾಲರಾದ ಶ್ರೀ ಆಕಾಶ್ ಸಾವಳಸಂಗ್ ಕಾಲೇಜಿನಲ್ಲಿ ನಡೆಯುವ ಪಠ್ಯ, ಪಠ್ಯೇತರ ಹಾಗೂ ಇತರೇ ಪ್ರೋತ್ಸಾಹಕರ ಚಟುವಟಿಕೆಗಳ […]
ಕoಬದಕೋಣೆ: ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಆರ್. ಕೆ. ಸಂಜೀವರಾಯರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ
ಕoಬದಕೋಣೆ(ನ,16);“ಸ್ವರಾಜ್ಯ ೭೫” ರವರ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಅಭಿಯಾನದ ಪ್ರಯುಕ್ತ ಕoಬದಕೋಣೆಯ ದಿವಂಗತ ಆರ್. ಕೆ. ಸಂಜೀವರಾಯರ ಮನೆಯಲ್ಲಿ ನ,13 ರ ಶನಿವಾರದಂದು ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀ ಜನಾರ್ಧನ್ ಮರವಂತೆ ಯವರು ನಾಮಫಲಕವನ್ನು ಅನಾವರಣ ಮಾಡಿದರು. ನಂತರ ಸರ್ವರು ದಿವಂಗತ ಸಂಜೀವರಾಯ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸಿದರು. ಶ್ರೀ.ಬಿ ಪಿ ಶಿವಾನಂದ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.”ಸ್ವರಾಜ್ಯ75″ ರ ಸಂಚಾಲಕರಾದ ಪ್ರದೀಪ್ ಕುಮಾರ್, ಬಸ್ರೂರು […]
ತಲ್ಲೂರು ಸರಕಾರಿ ಪ್ರೌಢ ಶಾಲೆ: ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಕಾರ್ಯಕ್ರಮ
ತಲ್ಲೂರು(ನ,16): ಪ್ರತಿಷ್ಠಿತ ಇನ್ಪೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಯುವಾ ಬ್ರಿಗೇಡ್ ನ ಬೃಹತ್ ಯೋಜನೆಯಾದ ಕೈ ಹಿಡಿದು ನಡೆಸೆನ್ನನು ಎನ್ನುವ ಯೋಜನೆಯಡಿ ರಾಜ್ಯದ 50 ಆಯ್ದ ಸರಕಾರಿ ಶಾಲೆಯ ಮಕ್ಕಳಿಗೆ ಕನ್ನಡದಲ್ಲೇ ಗ್ರಹಿಕೆ ಆಧಾರಿತ ಶಿಕ್ಷಣ ನೀಡುವ ಸಲುವಾಗಿ ಟ್ಯಾಬ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ಪ್ರಯುಕ್ತ ಯುವಾ ಬ್ರಿಗೇಡ್ ಕುಂದಾಪುರದ ವತಿಯಿಂದ ಕುಂದಾಪುರ ತಾಲ್ಲೂಕಿನ ತಲ್ಲೂರು ಸರಕಾರಿ ಪ್ರೌಢ ಶಾಲೆಯ 30 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮುಖ್ಯ […]
ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ ಕಲಾ ಸಂಗಮ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ರೋಟರಾಕ್ಟ್ ಕ್ಲಬ್ ಚಾಂಪಿಯನ್
ಬ್ರಹ್ಮಾವರ(ನ ,17):ರೋಟರಿ ಕ್ಲಬ್ ಬ್ರಹ್ಮಾವರದ ಆಶ್ರಯದಲ್ಲಿ ಅಲ್ಲಿನ ರೋಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಬ್ರಹ್ಮಾವರದ ರೋಟರಿ ಹಾಲ್ ನಲ್ಲಿ ಕಳೆದ ಶನಿವಾರ ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ ಕಲಾ ಸಂಗಮದಲ್ಲಿ ಅತ್ಯುತ್ತಮವಾದ ನಿರ್ವಹಣೆಯನ್ನು ನೀಡುವ ಮೂಲಕ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಎಂಟು ತಂಡಗಳು ಭಾಗವಹಿಸಿದ್ದ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ವಿದ್ಯಾರ್ಥಿಗಳು ನಿರೂಪಣೆಯಲ್ಲಿ ಪ್ರಥಮ […]
ಸಂಜಿತ್ ಎಂ ದೇವಾಡಿಗ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ
ಕಾರ್ಕಳ( ನ ,17): ಕಾರ್ಕಳದ ಅಜೆಕಾರುವಿನ ಶ್ರೀ ರಾಮಮಂದಿರದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ , ಉಡುಪಿ ಜಿಲ್ಲಾ ಪತ್ರಕರ್ತರ ವೇದಿಕೆ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021ರ ಸಮಾರಂಭದಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಬಾಲ ಕಲಾವಿದ ಸಂಜಿತ್ ಎಂ ದೇವಾಡಿಗ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮವನ್ನು ನೀಡಿದರು. ತವಿಲ್ ನಲ್ಲಿ ಗೋಪಾಲ ದೇವಾಡಿಗ, ಮತ್ತು ಹರ್ಷವರ್ಧನ್ ಖಾರ್ವಿ, ತಾಳದಲ್ಲಿ ಮಾಧವ […]
ಸ್ಮಾರ್ಟ್ ಕ್ರೀಯೇಷನ್ಸ್ ಎಜುಕೇಶನ್ ಹೈಕಾಡಿ:ನ,18. ರಂದು ಅಂಚೆ ಕಾರ್ಡು ಪ್ರದರ್ಶನ, ಬಹುಮಾನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ
ಹಾಲಾಡಿ(ನ,17): ಸ್ಮಾರ್ಟ್ ಕ್ರೀಯೇಷನ್ಸ್ ಎಜುಕೇಶನ್ ಹೈಕಾಡಿ ಇವರ ವತಿಯಿಂದ ಅಕ್ಟೋಬರ್ 2 ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಿದ ಅಂಚೆ ಕಾರ್ಡಿನಲ್ಲಿ ಗಾಂಧೀಜಿ ಚಿತ್ರ ಬಿಡಿಸುವ ಸ್ಪರ್ಧೆ- ರಾಜ್ಯಮಟ್ಟದ ಅಂಚೆ ಕುಂಚ ಸ್ಪರ್ಧೆ ‘ ನಮ್ಮ ಬಾಪೂಜಿ’ ಕಾರ್ಯಕ್ರಮದ ವಿವಿಧ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ಮತ್ತು ಅಂಚೆ ಕಾರ್ಡು ಪ್ರದರ್ಶನ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ನವೆಂಬರ್ 18 ರ ಗುರುವಾರ ಮಧ್ಯಾಹ್ನ 2.00 […]










