ಬಂಟಕಲ್(ನ,15): ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿನಿ ಕುಮಾರಿ ಶ್ರೇಯಾ ರವರು ಕಾರ್ಕಳದ ಕೆ.ಡಿ ಕಿಣಿ ಕ್ರೀಡಾಂಗಣದಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನ ರೋಟರಾಕ್ಟ್ ಕ್ಲಬ್ ಆಯೋಜಿಸಿದ ಜಿಲ್ಲಾ ಮಟ್ಟದ ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿರುತ್ತಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ. ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಅಭಿನಂದಿಸಿರುತ್ತಾರೆ.
Author: KundaVahini Editor
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ: ಖ್ಯಾತ ಗಾಯಕ ಡಾ.ಗಣೇಶ್ ಗಂಗೊಳ್ಳಿ ಯವರಿಗೆ ಸನ್ಮಾನ
ಕೋಟೇಶ್ವರ (ನ,14): ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ ಇಲ್ಲಿ ನ,14 ರಂದು ನಡೆದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ರವರ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸಲಾಗುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಶಾಲಾಭಿವೃದ್ಧ ಸಮಿತಿಯ ಮಾಜಿ ಅಧ್ಯಕ್ಷರು, ತಮಿಳುನಾಡು ಹೊಸೂರಿನ ಇಂಡಿಯನ್ ಎಂಪಾಯಾರ್ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪಡೆದ ಖ್ಯಾತ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ […]
ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಸನ್ಮಾನ
ಕುಂದಾಪುರ (ನ,15) : ದುಬೈ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹೆಸರಾಂತ ಹೋಟೆಲ್ ಉದ್ಯಮಿ ಹಾಗೂ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರನ್ನುಕರ್ನಾಟಕ ರಾಜ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ ನಾಗೇಶ್ ರವರು ಸನ್ಮಾನಿಸಿದರು. ಈ ಸಂದರ್ಭ ನಮ್ಮ ಕುಂದಾಪ್ರ ಕನ್ನಡ ಬಳಗದ ಗೌರವಾಧ್ಯಕ್ಷರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಅಧ್ಯಕ್ಷರಾದ ಸಾಧನ್ದಾಸ್, ಉಪಾಧ್ಯಕ್ಷರಾದ ದಿನೇಶ್ ದೇವಾಡಿಗ ನಾಗೂರು,ಕೃಷ್ಣಪ್ರಸಾದ್ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು.
ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು: ಕಾನೂನು ಅರಿವು ಕಾರ್ಯಕ್ರಮ
ಕೆರಾಡಿ(ನ,15): ಕೆರಾಡಿಯ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನಲ್ಲಿ ನ,10 ರಂದು ಕಾನೂನು ಅರಿವು ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾಲೇಜಿನ ಸಂಸ್ಥಾಪಕ ಹಾಗೂ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಇದರ ಧರ್ಮದರ್ಶಿಗಳಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಂಪಾರು ಇದರ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೊಲ್ಲೂರು ಠಾಣಾಧಿಕಾರಿ ಶ್ರೀ ನಾಸಿರ್ ಹುಸೇನ್ ಮಾದಕ ವಸ್ತುಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ […]
•••ಅಲೆಮಾರಿ•••
ಕವಿಸಂಚಾರ ಹೊರಟಿದೆ ಕಾಣದೂರಿಗೆ ನೆನಪ ಮೈಲಿಗಲ್ಲುಗಳ ಜೊತೆಗೆ; ಹರ್ಷೊಲ್ಲಾಸದ ಗಡಿ ಹುಡುಕಿ ನಡಿಗೆ… ನಡೆದಷ್ಟೂ ನಡೆಸುವ ಪಥಕೆ ಹೆಜ್ಜೆಗಳು ಮುನ್ನುಡಿ ಬರೆದಿವೆ,, ಗೀಚಿದಷ್ಟೂ ಜಿನುಗುವ ಭವಕೆಪುಟಗಳು ಸೋಲನೊಪ್ಪಿ ತಿರುಗಿವೆ ..ಅಕ್ಷರವೆಲ್ಲಾ ಮಾಸಿ ಮರೆಯಾಗಿವೆ..!! ದಿಗಂತ ಕಡಲಿನ ನಡುವಿನಲ್ಲಿ ಅನಂತತೆಯ ಹಾಯಿದೋಣಿ…. ಸಾಗುತಿದೆ ನಿರ್ದಿಗಂತವಾಗಿ ಏರಿ ಕವಿಕಲ್ಪನೆಗಳನ್ನ ಅಲ್ಪತೆಗೆ ತೂರಿ!! ಅಲ್ಪಾನಂತತೆಯ ಕದನದಲಿ ಸಕಲತೆಯ ಕಿಡಿ ಉದ್ಭವಿಸಿಧಗಿಸಿತೇ ಧರೆಹೊತ್ತಿ ಜ್ವಾಲೆಯಲಿ?? ಸುಪ್ತ ಮನಸಿನ ಮಿತಿಮೀರಿ…..!! ಸವಿದಷ್ಟೂ ಸವೆಯುತಿದೆ ಜೀವನ ತುಂಬಿದಷ್ಟೂ ಬತ್ತುತಿದೆ […]
ಜೀವ ರಕ್ಷಕ, ಮುಳುಗು ತಜ್ಞ ಸುರೇಶ ಖಾರ್ವಿ ಭಟ್ಕಳ್ (ಕಡಲಾಳದ ಅಂತರಂಗ- ಬದುಕಿನ ಕಥೆ ವ್ಯಥೆ )
ಜೀವ ರಕ್ಷಣೆ ಮತ್ತು ಸಾವು ಅದು ಎಷ್ಟು ಕಠೋರವೆಂದರೆ ಆ ಚಕ್ರವ್ಯೂಹಕ್ಕೆ ಸಿಲುಕಿ ಬದುಕು ಬಂದವರರಿಗೆ ಮಾತ್ರ ಗೊತ್ತು .ಸಾವಿನಂಚಿನ ಕದ ತಟ್ಟಿ ಬದುಕಿ ಬರುವುದೆಂದರೆ ಅದೇನು ಆಟವಲ್ಲಾ.ಅದರ ಪರಿಕಲ್ಪನೆ ಮಾಡುವುದು ಕೂಡ ಕಷ್ಟ, ಅಂತಹ ಪರಿಸ್ಥಿತಿಯಲ್ಲಿ ಇರುವವರನ್ನು ಬದುಕಿಸುವವರೇ ಜೀವ ರಕ್ಷಕರು. ಜೀವರಕ್ಷಕರು ಅಕ್ಷರಶಃ ದೇವರಿಗೆ ಸಮನಾದವರು. ಆದರೆ ಇಂಥ ದೇವರುಗಳು ಮಾತ್ರ ಕಣ್ಣೀರಲ್ಲಿ ಕೈತೊಳೆತ್ತಾ ಇರುವುದು ಮಾತ್ರ ಶೋಚನೀಯ…!ಇವರ ನಿಸ್ವಾರ್ಥ ಸೇವಾ ಕಾರ್ಯವನ್ನು ಗುರುತಿಸಿ ಇವರಿಗೆ ಗೌರವದ […]
ಸರಸ್ವತಿ ವಿದ್ಯಾಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮ
ಗಂಗೊಳ್ಳಿ(ನ,12): ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನಿರ್ದೇಶನದಂತೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಯವಾದಿ ಶರತ್ ಕುಮಾರ್ ಶೆಟ್ಟಿ ಮಾತನಾಡಿ ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಕಾನೂನಿನ ಬಗೆಗಿನ ವಿವಿಧ ವಿಚಾರಗಳ ಪ್ರಾಥಮಿಕ ಅರಿವು ಪ್ರತಿಯೊಬ್ಬ ನಾಗರಿಕನಲ್ಲಿಯೂ ಇರಬೇಕು. ಇಂತಹ ಅರಿವಿನ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಕೂಡ ನಮ್ಮದಾಗಿಸಿಕೊಳ್ಳುವ ಮೂಲಕ ಅಪರಾಧ […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ವಾರ್ಷಿಕ ಕ್ರೀಡಾಕೂಟ (ಕ್ರೀಡಾ ಮನೋಭಾವ ವಿದ್ಯಾರ್ಥಿಗಳ ಮನಸ್ಸನ್ನು ಗಟ್ಟಿಗೊಳಿಸುತ್ತದೆ- ಪಿ.ಎಸ್.ಐ ನಿರಂಜನ್ ಗೌಡ)
ಕುಂದಾಪುರ(ನ,12): ವಿದ್ಯಾರ್ಥಿಗಳು ಜೀವನದಲ್ಲಿ ಕ್ರೀಡಾ ಮನೋಭಾವವನ್ನು ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳ ಮನಸ್ಸು ಗಟ್ಟಿ ಆಗುವುದರ ಜೊತೆಗೆ ಎಂತಹ ಕಠಿಣ ಪರಿಶ್ರಮವನ್ನು ಎದುರಿಸಲು ಕೂಡ ಸಜ್ಜಾಗುತ್ತದೆ ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಿರಂಜನ್ ಗೌಡ ರವರು ಹೇಳಿದರು ಅವರು ಕುಂದಾಪುರದ ಪ್ರತಿಷ್ಠಿತ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿ.ಎ/ಸಿ.ಎಸ್ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಹೇಳಿದರು.ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಕೂಡ ಸ್ವಲ್ಪ […]
ನ,15 ರಿಂದ ಜಿ. ಶಂಕರ್ ಆರೋಗ್ಯಸುರಕ್ಷಾ ಕಾರ್ಡ್ಗಳ ನವೀಕರಣ ಪ್ರಾರಂಭ
ಕುಂದಾಪುರ (ನ,12): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕರಾದ ನಾಡೋಜಾ ಡಾ. ಜಿ. ಶಂಕರ್ ರವರು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಬಡವರ ಅರೋಗ್ಯ ಸ್ವಾಸ್ಥ್ಯಕ್ಕಾಗಿ ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಸಹಯೋಗದೊಂದಿಗೆ ಮಾಹೆ ಮಣಿಪಾಲದ ಸಹಕಾರದಿಂದ ಹಮ್ಮಿಕೊಂಡ ಜಿ. ಶಂಕರ್ ಆರೋಗ್ಯ ವಿಮಾ ಯೋಜನೆ ನವೀಕರಣ ಮತ್ತು ಹೊಸ ಕಾರ್ಡುಗಳ ನೋಂದಾವಣಿ ಅಭಿಯಾನ ಇದೇ ನವೆಂಬರ್ ,15 ರಿಂದ 30 ರ ತನಕ ನಡೆಯಲಿದೆ. 2021ರಲ್ಲಿ ಒಟ್ಟು 52,505 […]
ನ,15 ರಿಂದ ಜಿ. ಶಂಕರ್ ಆರೋಗ್ಯಸುರಕ್ಷಾ ಕಾರ್ಡ್ಗಳ ನವೀಕರಣ ಪ್ರಾರಂಭ
ಕುಂದಾಪುರ (ನ,12): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕರಾದ ನಾಡೋಜಾ ಡಾ. ಜಿ. ಶಂಕರ್ ರವರು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಬಡವರ ಅರೋಗ್ಯ ಸ್ವಾಸ್ಥ್ಯಕ್ಕಾಗಿ ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಸಹಯೋಗದೊಂದಿಗೆ ಮಾಹೆ ಮಣಿಪಾಲದ ಸಹಕಾರದಿಂದ ಹಮ್ಮಿಕೊಂಡ ಜಿ. ಶಂಕರ್ ಆರೋಗ್ಯ ವಿಮಾ ಯೋಜನೆ ನವೀಕರಣ ಮತ್ತು ಹೊಸ ಕಾರ್ಡುಗಳ ನೋಂದಾವಣಿ ಅಭಿಯಾನ ಇದೇ ನವೆಂಬರ್ ,15 ರಿಂದ 30 ರ ತನಕ ನಡೆಯಲಿದೆ. 2021ರಲ್ಲಿ ಒಟ್ಟು 52,505 […]










