ಕುಂದಾಪುರ(ನ,26): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮದ ಪ್ರಯುಕ್ತ ” ಯಶಸ್ಸಿನ ಗುಟ್ಟು” ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆರ್ಟ್ ಆಫ಼್ ಲಿವಿಂಗ್ ಇದರ ಪ್ರತಿನಿಧಿ ಶ್ರೀ ಪ್ರಶಾಂತ್ ಪೈ ಆಗಮಿಸಿದ್ದರು. “ ವಿದ್ಯಾರ್ಥಿಗಳ ಯಶಸ್ಸಿಗೆ ಮನಸ್ಸು ಬಹಳ ಪ್ರಮುಖ ಪಾತ್ರ ವಹಿಸುತ್ತದೆ, ಮನಸ್ಸಿನ ಸ್ಪಷ್ಟತೆ, ಏಕಾಗ್ರತೆ, ಬದ್ಧತೆ ಹಾಗೂ ಆತ್ಮವಿಶ್ವಾಸ ಈ ನಾಲ್ಕು ವಿಚಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ […]
Author: KundaVahini Editor
ಮೂಡ್ಲಕಟ್ಟೆ ಎಂ ಐ ಟಿ: ಇoಡಕ್ಷನ್ ಮತ್ತು ಓರಿಯಂಟೇಶನ್ ಕಾರ್ಯಕ್ರಮ
ಕುಂದಾಪುರ(ನ,24): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಮತ್ತು ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆರ್.ಏನ್. ಶೆಟ್ಟಿ ಪಿಯು. ಕಾಲೇಜು ಕುಂದಾಪುರ ಇದರಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಕೃಷ್ಣಮೂರ್ತಿ ಆಗಮಿಸಿದ್ದರು. “ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶಿಕ್ಷಣದ ಜೊತೆಗೆ ಶಿಸ್ತು ಸಂಯಮವನ್ನು ಅಳವಡಿಸಿಕೊಳ್ಳಬೇಕು, ಪದವಿ ಜೊತೆಗೆ ಕ್ರಿಯಾಶೀಲರಾಗಿರುವುದನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ವಿಧ್ಯಾರ್ಥಿಗಳು ಶ್ರಮ ತ್ಯಾಗ, ಪ್ರಾರ್ಥನೆ ,ಪ್ರಯತ್ನ […]
ನಿರಂತರ ಪರಿಶ್ರಮದಿಂದ ಕಲಾಸಾಧನೆ ಸಾಧ್ಯ: ಡಾ.ಗಣೇಶ್ ಗಂಗೊಳ್ಳಿ ಅಭಿಮತ
ಉಡುಪಿ (ನ,26): ಕಲೆಯು ಯಾವಾಗಲೂ ಓರ್ವ ಸಾಧಕನ ಸ್ವತ್ತು. ತನ್ನ ಆಯ್ದ ಕ್ಷೇತ್ರದಲ್ಲಿ ಸಾಧನೆಗೈಯಲು ಶೃದ್ಧೆ, ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ವಿನಮ್ರತೆ ಅಗತ್ಯ. ಜೀವನದಲ್ಲಿ ಬರುವ ಅಡೆತಡೆಗಳನ್ನೆದುರಿಸಿ ಸಾಧನೆಯ ಹಾದಿಯಲ್ಲಿ ದೃಢ ಸಂಕಲ್ಪದೊಂದಿಗೆ ಹೆಜ್ಜೆಯಿಡಬೇಕು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸೂರ್ಯ ಚೈತನ್ಯ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಕನ್ನಡ ಜಾನಪದ ಪರಿಷತ್ ನ ಉಡುಪಿ ಜಿಲ್ಲಾಧ್ಯಕ್ಷ , ಖ್ಯಾತ ಜಾನಪದ ಗಾಯಕ ಡಾ. ಗಣೇಶ್ […]
ಕುಂದಾಪುರ ಪ್ರಧಾನ ಅಂಚೆ ಕಚೇರಿ:ರೈಲ್ವೆ ಟಿಕೇಟ್ ಬುಕಿಂಗ್ ಸೇವೆ ಲಭ್ಯ
ಕುಂದಾಪುರ (ನ,26): ತಾಂತ್ರಿಕ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರೈಲ್ವೆ ಟಿಕೇಟ್ ಬುಕಿಂಗ್ ಸೇವೆಯನ್ನು ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಮತ್ತೆ ಪ್ರಾರಂಭಗೊಂಡಿದೆ. ಹಲವು ದಿನಗಳಿಂದ ಟಿಕೇಟ್ ಬುಕಿಂಗ್ ಸೇವೆಯಿಂದ ವಂಚಿತರಾಗಿದ್ದ ಪ್ರಯಾಣಿಕರು ಟಿಕೇಟ್ ಬುಕಿಂಗ್ ಪುನರಾರಂಭಗೊಂಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.
ಗಂಗೊಳ್ಳಿ: ಸವಿ ಪ್ರತಿಭಾ ಶೋಧ ಬಹುಮಾನ ವಿತರಣೆ
ಗಂಗೊಳ್ಳಿ(ನ,24); ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಮತ್ತು ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಆಸುಪಾಸಿನ ಆಯ್ದ ಪ್ರೌಢಶಾಲೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸವಿ ಪ್ರತಿಭಾ ಶೋಧ ಶೈಕ್ಷಣಿಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಗಂಗೊಳ್ಳಿಯ ಜಿ.ಎಸ್. ವಿ.ಎಸ್ […]
ಗ್ರಾಮ ವಿಕಾಸ ಸಮಿತಿ ಪಡು ಗೋಪಾಡಿ : ಮನೆ ಮನೆ ಭಜನೆ ಕಾರ್ಯಕ್ರಮ
ಗೋಪಾಡಿ(ನ,25): ಗ್ರಾಮ ವಿಕಾಸ ಸಮಿತಿ ಪಡು ಗೋಪಾಡಿ ಆಯೋಜನೆಯಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕುಟುಂಬ ಪ್ರಬೋಧನ ಪ್ರಮುಖ್ ಗುರುರಾಜ್ ರಾವ್. ಕೋಟೇಶ್ವರ ರವರು ಇತ್ತೀಚೆಗೆ ಚಾಲನೆ ನೀಡಿದ್ದು, ಭಜನೆಯ ಮೂಲಕ ಜನರಲ್ಲಿ ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆಯನ್ನು ಉದ್ದೀಪನಗೊಳಿಸುವ ನೆಲೆಯಲ್ಲಿ ಗೋಪಾಡಿ ಪಡು ಗ್ರಾಮ ವಿಕಾಸ ಸಮಿತಿಯ ಸಂಚಾಲಕ ಸುರೇಂದ್ರ ಸಂಗಮ್ ರವರ ನೇತೃತ್ವದಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಯಾವುದೇ ರೀತಿಯ ಹಣ […]
ಸಿಎಸ್ಇಇಟಿ ಪರೀಕ್ಷಾ ಫಲಿತಾಂಶ: ಡಾ. ಬಿ.ಬಿ. ಹೆಗ್ಡೆ ವಿದ್ಯಾರ್ಥಿಗಳ ಉತ್ಕ್ರಷ್ಟ ಸಾಧನೆ
ಕುಂದಾಪುರ(ನ,25): ಇತ್ತೀಚೆಗೆ ನಡೆದ ಸಿ.ಎಸ್.ಇ.ಇ.ಟಿ. ಪರೀಕ್ಷೆಯಲ್ಲಿ ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು 87% ಫಲಿತಾಂಶ ಪಡೆದಿದ್ದಾರೆ. ಒಟ್ಟು 23 ವಿದ್ಯಾರ್ಥಿಗಳು ಸಿ.ಎಸ್. ಪರೀಕ್ಷೆ ಬರೆದಿದ್ದು 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಇದರ ಅಧ್ಯಕ್ಷರು ಹಾಗೂ ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿಯವರು ಶುಭ ಹಾರೈಸಿದರು. ದ್ವಿತೀಯ ಬಿ.ಕಾಂ.ನ ತೇಜಸ್ 84.5% ಹಾಗೂ ಧ್ವನಿ ಶೆಟ್ಟಿ 84.5% ಅಂಕಗಳೊಂದಿಗೆ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಸಿಎಸ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕುಂದಾಪುರ(ನ,22): ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಬೆನ್ನಟ್ಟಿ ನಿರಂತರ ಪ್ರಯತ್ನ ನಡೆಸಿದರ ಅಸಾಧ್ಯವಾದುದು ಯಾವುದೂ ಇಲ್ಲ .38 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳು ಸಿಎಸ್ ಫೌಂಡೇಶನ್ (ಸಿಎಸ್ಇಇಟಿ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಸುಲಭದ ಮಾತಲ್ಲ. ವಿದ್ಯಾರ್ಥಿಗಳನ್ನು ಈ ಮಟ್ಟಿಗೆ ಸಿದ್ಧಗೊಳಿಸಿದ ಶಿಕ್ಷ ಪ್ರಭಾ ಅಕಾಡೆಮಿ ಮತ್ತು ಸಾಧಕ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಸಿಎಸ್ ರಮ್ಯ ರಾವ್ ಹೇಳುದರು. ಅವರು ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ/ ಸಿಎಸ್ ತರಬೇತಿ ಸಂಸ್ಥೆಯಲ್ಲಿ […]
ಸಂಜಯಗಾಂಧಿ ಪ್ರೌಢ ಶಾಲೆ ಅಂಪಾರು:-ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ
ಅಂಪಾರು (ನ,22): ಕನ್ನಡ ಜಾನಪದ ಪರಿಷತ್, ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಕನ್ನಡ ಜಾನಪದ ಪರಿಷತ್ ಕುಂದಾಪುರ ತಾಲೂಕು ಘಟಕ, ಸಂಜಯ್ ಗಾಂಧಿ ಪ್ರೌಢ ಶಾಲೆ ಅಂಪಾರು, ಸಂಜಯ್ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಪಾರು ಹಾಗೂ ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ವಲಯ ಪ್ರಾಂತ್ಯ ಜಿಲ್ಲೆ317ಸಿ ಇವರ ಸಂಯುಕ್ತ ಆಶ್ರಯದಲ್ಲಿ ಜನರೆಡೆಗೆ ಹೋಗೋಣ, ಜಾನಪದ ಉಳಿಸೋಣ,ಜಾನಪದವೇ ಸತ್ಯ,ಜಾನಪದವೇ […]
ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು: ನ,26 ರಂದು ಡಾ. ಗಣೇಶ್ ಗಂಗೊಳ್ಳಿಯವರಿಗೆ ಸನ್ಮಾನ ಮತ್ತು ಗೀತಗಾಯನ ಕಾರ್ಯಕ್ರಮ
ಕುತ್ಯಾರು(ನ,22): ಇಲ್ಲಿನ ಸೂರ್ಯ ಚೈತನ್ಯ ಹೈಸ್ಕೂಲ್ ಆಶ್ರಯದಲ್ಲಿ ನವೆಂಬರ್ 26 ರಂದು ಕನ್ನಡ ಜಾನಪದ ಪರಿಷತ್ ಉಡುಪಿ ಇದರ ಜಿಲ್ಲಾಧ್ಯಕ್ಷರು ಹಾಗೂ ಖ್ಯಾತ ಜನಪದ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಯವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡ ಜಾನಪದ ಕೋಗಿಲೆ ಬಿರುದಾಂಕಿತ ಡಾ.ಗಣೇಶ್ ಗಂಗೊಳ್ಳಿಯವರು ಕನ್ನಡ ನಾಡಿನ ಜನಪದ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸಿನಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡುತ್ತಿರುವ ಕಲಾಸಾಧಕ. ಕರ್ನಾಟಕ ಜನಪದ ಸಾಹಿತ್ಯ ಸೇವೆಗಾಗಿ ಅವರಿಗೆ […]










