ಕಾರ್ಕಳ(ಜೂ,26): ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟçಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್ನಲ್ಲಿ ಸಾವಿರದೊಳಗಿನ ರ್ಯಾಂಕುಗಳು ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಕೆ.ಆರ್ ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ್ಯಾಂಕ್ ತನ್ನದಾಗಿಸಿಕೊಂಡಿದ್ದಾರೆ. ಸರ್ವಜಿತ್ ಕೆ.ಆರ್ 90ನೇ ರ್ಯಾಂಕ್,ಆಕಾಶ್ ಎಚ್. ಪ್ರಭು 312ನೇ ರ್ಯಾಂಕ್ (ಕೆಟಗರಿಯಲ್ಲಿ 42ನೇ ರ್ಯಾಂಕ್), ತನ್ಮಯ್ ಜಿ.ಎಸ್ 383ನೇ ರ್ಯಾಂಕ್, […]
Author: KundaVahini Editor
ಕ್ರಿಯೇಟಿವ್ ಕಾಲೇಜಿನ 26 ವಿದ್ಯಾರ್ಥಿಗಳಿಗೆ ಐಐಎಸ್ಇಆರ್ನಲ್ಲಿ ಅರ್ಹತೆ
ಉಳಿದಂತೆ ಎಂ. ಮಂಜುನಾಥ್ 1457, ಚೇತನ್ ಗೌಡ ಎನ್.ಎಸ್ 1718 ( ಕೆಟಗರಿ ರ್ಯಾಂಕ್ 314 ), ತೇಜಸ್ ವಿ ನಾಯಕ್ 2423 ( ಕೆಟಗರಿ ರ್ಯಾಂಕ್ 460), ಶ್ರೀರಕ್ಷಾ 3127, ವೀರೇಂದ್ರ ಮುಟ್ಟೂರು 3960, ಹರ್ಷಿತ್ ರಾಜು ಎಚ್. ಎಂ 6961, ಎನ್. ಸುದರ್ಶನ್ ಕಾಮತ್ 7322, ತ್ರಿಶ್ಲಾ ಗಾಂಧಿ 9190 ( ಕೆಟಗರಿ ರ್ಯಾಂಕ್ 667), ಮೋನಿಕಾ ಕೆ.ಪಿ 9470 (ಕೆಟಗರಿ ರ್ಯಾಂಕ್ 30), ಸ್ನೇಹ ಬಸವರಾಜ್ […]
ಹೆಮ್ಮಾಡಿಯ ಜನತಾ ಪಿ ಯು ಕಾಲೇಜಿನ ಸಿಂಚನಾ ಜಿ.ಭಟ್ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಕುಂದಾಪುರ ( ಜೂ,26): ನಾಡಪ್ರಭು ಕೆಂಪೇಗೌಡ ಜನ್ಮ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯವರು ಆಯೋಜಿಸಿದ ತಾಲೂಕು ಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿದ್ಯಾರ್ಥಿನಿ ಸಿಂಚನಾ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ತನ್ವಿತಾ ತೃತೀಯ ಸ್ಥಾನ ಪಡೆದಿರುತ್ತಾಳೆ. ಸಾಧಕ ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಹೆಮ್ಮಾಡಿ: ಜನತಾ ಪಿ. ಯು ಕಾಲೇಜಿನಲ್ಲಿ ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಮಾಹಿತಿ ಕಾರ್ಯಕ್ರಮ
ಹೆಮ್ಮಾಡಿ( ಜೂ,27): ಜನತಾ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಕಂಡ್ಲೂರು ಪೋಲಿಸ್ ಠಾಣೆಯ ಢಾಣಾಧಿಕಾರಿಗಳಾಗಿರುವ ಶ್ರೀ ಭೀಮಾಶಂಕರ್ ರವರು ಮಾದಕ ವ್ಯಸನದ ವಿರುದ್ಧದ ಕುರಿತಾಗಿ ಮಾಹಿತಿ ನೀಡಿದರು. ಇಂದಿನ ಈ ಯುಗದಲ್ಲಿ ಆರೋಗ್ಯಕ್ಕೆ ಹಾನಿಯುಂಟುಮಾಡುವ ಮಾದಕ ವ್ಯಸನಗಳು ತುಂಬಾ ಸುಲಭವಾಗಿ ಕೈಗೆ ಸಿಗುತ್ತಿದ್ದು,ಅವೆಲ್ಲವನ್ನೂ ಸ್ವೀಕರಿಸಬೇಡಿ ಆರೋಗ್ಯದ ಕುರಿತಾಗಿ ಜಾಗ್ರತಿ ವಹಿಸಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಠಾಣಾ ಸಿಬ್ಬಂದಿಗಳು,ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. […]
ಕಂಡ್ಲೂರು : ಜೂನ್, 29 ರ ಆದಿತ್ಯವಾರದಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕಂಡ್ಲೂರು(ಜೂ, 27): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಕುಂದಾಪುರ ಘಟಕ,ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ಶ್ರೀರಾಮ ಭಜನಾ ಮಂದಿರ ಹಳೆಕೋಟೆ, ಶ್ರೀ ಗಣೇಶೋತ್ಸವ ಸಮಿತಿ ಕಂಡ್ಲೂರು,ಶ್ರೀ ವೀರ ಮಾರುತಿ ಭಜನಾ ಮಂಡಳಿ ಹಳನಾಡು, ಶ್ರೀ ಶಾರದೋತ್ಸವ ಸಮಿತಿ, ಕನ್ನಿಕಾ ಫ್ರೆಂಡ್ಸ್ ಕಂಡ್ಲೂರು ಶ್ರೀ ಮಹಾಗಣಪತಿ ಭಜನಾ ಮಂಡಳಿ ಹಳನಾಡು ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ ಇವರ ಸಹಯೋಗದೊಂದಿಗೆ […]
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಕಾರ್ಕಳ (ಜೂ,22): ಯೋಗವು ನಮ್ಮ ಆತ್ಮಗಳನ್ನು ದೈವಿಕತೆಯೊಂದಿಗೆ ಒಟ್ಟುಗೂಡಿಸುತ್ತದೆ. ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಯೋಗದಿಂದ ದೈಹಿಕ, ಮಾನಸಿಕ, ಭಾವನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗವು ಒಂದು ದಿನದ ಆಚರಣೆ ಆಗಿರದೆ ಜೀವನದ ಭಾಗವಾಗಿ ಸ್ವೀಕರಸೋಣ ಎಂದು ಸಹಜ ಯೋಗ ತರಬೇತುದಾರರಾದ ಶ್ರೀಮತಿ ಸವಿತಾ ಉಧ್ಭವ್ ಅವರು ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ […]
ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ‘ಮನಃಶಾಂತಿಗೆ ಯೋಗ’ ಕಾರ್ಯಕ್ರಮ
ಕಾರ್ಕಳ (ಜೂ,22): ಯೋಗ ದಿನಾಚರಣೆಯ ಪ್ರಯುಕ್ತ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ 21 ಜೂನ್ 2025 ರಂದು ‘ಮನಃಶಾಂತಿಗೆ ಯೋಗ’ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ 2 ಗಿನ್ನಿಸ್ ದಾಖಲೆ ಸೃಷ್ಟಿಸಿ, 9 ವಿಶ್ವದಾಖಲೆ ನಿರ್ಮಿಸಿದ ಅದ್ಭುತ ಪ್ರತಿಭೆ ಉಡುಪಿಯ ಸೈಂಟ್ ಸಿಸಿಲಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ತನುಶ್ರೀರವರು ‘ತನು ಯೋಗ ಭೂಮಿ’ ಮುಖಾಂತರ ಯೋಗ ಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ […]
ಗಂಗೊಳ್ಳಿ : ಸಾಧಕ ವಿದ್ಯಾರ್ಥಿನಿ ಮನಾಲಿಗೆ ಸನ್ಮಾನ
ಗಂಗೊಳ್ಳಿ(ಜೂ ,20) : ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ, ವೈಷ್ಣವಿ ಇವೆಂಟ್ಸ್ ಗಂಗೊಳ್ಳಿ ಮತ್ತು ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿಯ ವತಿಯಿಂದ ಕಳೆದ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರಾಂಕ್ ಪಡೆದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಮನಾಲಿ ಎಂ ಇವರನ್ನು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಸಭಾಂಗಣದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೈಷ್ಣವಿ ಇವೆಂಟ್ಸ್ ಮಾಲೀಕರಾದ ಗೋಪಾಲ ಚಂದನ್, […]
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ : ಅಂತರಾಷ್ಟ್ರೀಯ ಯೋಗ ದಿನಾಚರಣೆ
ಮೂಡ್ಲಕಟ್ಟೆ ( ಜೂ,21): ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 20 ಜೂನ್ 2025 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಎಸ್ ಬಿಜೂರು ಇವರು ಉಪಸ್ಥಿತರಿದ್ದು ಯೋಗದಿಂದಾಗುವ ಉಪಯೋಗಗಳ ಬಗ್ಗೆ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ತಿಳಿಸಿದರು. ಯೋಗವು ಮನುಷ್ಯನ ಆಂತರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಹಾಯ ಮಾಡುತ್ತದೆಂದು ತಿಳಿಸಿದರು. ಯೋಗದ […]
ಅಭಯಹಸ್ತ ಉಡುಪಿ ಸಂಸ್ಥೆಗೆ ಗೌರವದ ಸನ್ಮಾನ
ಮಣಿಪಾಲ್ (ಜು ,18): ಕಸ್ತೂರಬಾ ಆಸ್ಪತ್ರೆ ಮಣಿಪಾಲ ವತಿಯಿಂದ ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಸಹಕಾರದಲ್ಲಿ ಡಾ. ಟಿ.ಎಂ.ಪೈ ಹಾಲ್ ಕೆಎಂಸಿ ಮಣಿಪಾಲ್ ಇಲ್ಲಿ ಜೂನ್ 14 ರಂದು ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಸಭಾ ಕಾರ್ಯಕ್ರಮವನ್ನು ನಾಡೋಜ ಡಾ. ಜಿ.ಶಂಕರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ ಉಡುಪಿ ಹಾಗೂ ಮೊಗವೀರ ಯುವ ಸಂಘಟನೆ ರಿ.ಉಡುಪಿ ಇದುವರೆಗೆ 1,30,000 ಯೂನಿಟ್ ರಕ್ತವನ್ನು ಸಂಗ್ರಹಿಸಿ ಉಡುಪಿ […]










