ಹೆಮ್ಮಾಡಿ(ಸೆ.25): ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪದವಿಪೂರ್ವ ವಿಭಾಗದ ಜಿಲ್ಲಾ ಮಟ್ಟದ ಟೆನ್ನಿಕ್ವಾಯಿಟ್ ಪಂದ್ಯದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ರಿಮೇಶ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
Author: KundaVahini Editor
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ವಿ.ಕೆ.ಆರ್. ವಿದ್ಯಾರ್ಥಿಗಳು ವಲಯ ಮಟ್ಟಕ್ಕೆ ಆಯ್ಕೆ
ಕುಂದಾಪುರ (ಸೆ .19): ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರ ಅಧ್ಯಕ್ಷತೆಯ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಡೇರಹೋಬಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿಜೇತರಾಗಿ ವಲಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯ ಆಯೋಜಿಸಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 10ನೇ ತರಗತಿಯ ಗಾರ್ಗಿ ದೇವಿ ಭರತನಾಟ್ಯದಲ್ಲಿ, ಅದಿತಿ […]
ಹಾರ್ಡ್ ಬಾಲ್ ಕ್ರಿಕೆಟ್ : ಎಚ್.ಎಮ್.ಎಮ್. ಮತ್ತು ವಿ.ಕೆ.ಆರ್. ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ
ಕುಂದಾಪುರ (ಸೆ .19) : ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರ ಅಧ್ಯಕ್ಷತೆಯ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಹಾರ್ಡ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ವಿಜೇತರಾಗಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯ ಆಯೋಜಿಸಿದ 17ರ […]
ಧೈರ್ಯ, ಶಿಸ್ತು, ಶೌರ್ಯದಲ್ಲಿ ಭಾರತದ ಸೈನ್ಯಕ್ಕೆ ಪ್ರಪಂಚದ ಯಾವುದೇ ಸೈನ್ಯ ಸರಿಸಾಟಿಯಲ್ಲ-ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ
ಕುಂದಾಪುರ (ಸೆ . 23) : ಸಂಸ್ಥೆಯಲ್ಲಿ ಕಳೆದ ತನ್ನ ಪ್ರಾಥಮಿಕ ಶಿಕ್ಷಣದ ಕ್ಷಣಗಳನ್ನು ಮೆಲುಕು ಹಾಕುತ್ತಾ, ನನ್ನ ಹಿಂದಿನ ಈ ಸಾಧನೆಗೆ ಅಂದಿನ ನನ್ನ ಪ್ರಾಥಮಿಕ ಶಿಕ್ಷಕರು ನೀಡಿದ ಶಿಸ್ತು, ಸಂಯಮ, ಪ್ರೇರಣೆಯೇ ಕಾರಣ. ಧೈರ್ಯ, ಶಿಸ್ತು, ಶೌರ್ಯದಲ್ಲಿ ಭಾರತದ ಸೈನ್ಯಕ್ಕೆ ಪ್ರಪಂಚದ ಯಾವುದೇ ಸೈನ್ಯ ಸರಿಸಾಟಿಯಲ್ಲ ಎಂದು ಇತ್ತೀಚಿಗಷ್ಟೇ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ಸ್ಥಾನ ಪಡೆದಿರುವ ಸಂಸ್ಥೆಯ ಹಳೆ ವಿದ್ಯಾರ್ಥಿ ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ […]
ಬಗ್ವಾಡಿ ಕ್ಷೇತ್ರದಲ್ಲಿ ಗ್ರಾಮ ಸುಭಿಕ್ಷಾ ಕಾರ್ಯಕ್ರಮ
ಹೆಮ್ಮಾಡಿ ( ಸೆ,23): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ. ಬಿ ಸಿ ಟ್ರಸ್ಟ್ ಕುಂದಾಪುರ ತಾಲೂಕು, ತಾಲೂಕು ಜನ ಜಾಗ್ರತಿ ವೇದಿಕೆ ಕುಂದಾಪುರ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಂಡ್ಸೆ ವಲಯ ಇದರ ಸಹಾಭಾಗಿತ್ವದಲ್ಲಿ ಗ್ರಾಮ ಸುಭಿಕ್ಷಾ ಕಾರ್ಯಕ್ರಮ ಸೆಪ್ಟೆಂಬರ್ 22 ರಂದು ಬಗ್ವಾಡಿ ಶ್ರೀ ಮಹಿಷಾಸುರಮರ್ದನಿ ದೇವಸ್ಥಾನದಲ್ಲಿ ನೆಡಯಿತು. ಪ್ರಥಮದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಗ್ರಾಮ ಸುಭಿಕ್ಷೆ ಬಗ್ಗೆ ಪ್ರಾರ್ಥನೆ ಮಾಡಲಾಯಿತು. ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಭಜನಾ […]
ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಏಡ್ಸ್ ಅರಿವು ಆಂದೋಲನ – ಯಕ್ಷಗಾನ ಪ್ರದರ್ಶನ
ಹೆಮ್ಮಾಡಿCಸೆ.23): ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ಎಚ್.ಐ.ವಿ.ಏಡ್ಸ್ ಅರಿವು ಆಂದೋಲನ ಕಾರ್ಯಕ್ರಮದ ಕುರಿತು ಯಕ್ಷಗಾನ ಪ್ರದರ್ಶನ ನಡೆಯಿತು. ಉತ್ತರ ಕನ್ನಡ ಸಿದ್ದಾಪುರದ ಯಕ್ಷಗಾನ ತಂಡದವರಯ ಯಕ್ಷಗಾನ ಪ್ರದರ್ಶನದ ಮೂಲಕ ಏಡ್ಸ್ ಕುರಿತಾಗಿ ಜಾಗ್ರತಿ ಸಂದೇಶವನ್ನು ಸಾರಿದರು.ಕಾರ್ಯಕ್ರಮದಲ್ಲಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು,ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು,ಬೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಬಿ. ಬಿ. ಹೆಗ್ಡೆಕಾಲೇಜು : ‘ಕ್ಯಾಂಪಸ್ ಪ್ಲೇಸ್ಮೆಂಟ್ ’
ಕುಂದಾಪುರ (ಸೆ.20): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕ ಕ್ಯೂ ಸ್ಪೈಡರ್ ಸಂಸ್ಥೆಯ ಸಹಯೋಗದೊಂದಿಗೆ ಉದ್ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ಯೂ ಸ್ಪೈಡರ್ ಸಂಸ್ಥೆಯ ಹೆಚ್.ಆರ್. ಲೀಡ್ ಆಗಿರುವ ಚಂದನಾ ರವರು ಉದ್ಯೋಗ ಶಿಬಿರದ ಬಗ್ಗೆ ಮಾಹಿತಿ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವೃತ್ತಿ […]
ತಾಲೂಕು ದಸರಾ ಚಾಂಪಿಯನ್ಶಿಪ್: ಕುಂದಾಪುರ ಟ್ರ್ಯಾಕ್ ಮತ್ತು ಫೀಲ್ಡ್ ಸಂಸ್ಥೆಯ ಕ್ರೀಡಾಪಟುಗಳ ಸಾಧನೆ
ಕುಂದಾಪುರ (ಸೆ,22): ಕುಂದಾಪುರ ತಾಲೂಕು ದಸರಾ ಚಾಂಪಿಯನ್ಶಿಪ್ ನಲ್ಲಿ ಕುಂದಾಪುರ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾ ಸಂಸ್ಥೆಯ ಕ್ರೀಡಾಪಟುಗಳು ಉತ್ತಮ ಸಾಧನೆಗೈದಿದ್ದಾರೆ. 1500 ಮೀಟರ್ ಓಟದಲ್ಲಿ ನವ್ಯಾ ಆಚಾರ್ ದ್ವಿತೀಯ ಸ್ಥಾನ ಹಾಗೂ 3000 ಮೀಟರ್ ಓಟದಲ್ಲಿ ದ್ವಿತೀಯಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ . ಹಾಗೆಯೇ ರೆನಸ್ಲಿ 200 ಮೀಟರ್ ಓಟದಲ್ಲಿ 3 ನೇ ಸ್ಥಾನ ಪಡೆದಿದ್ದಾರೆ. ಈ ಸಂಸ್ಥೆಯ ಮಹಿಳೆಯರ ತಂಡ 4×100ಮೀಟರ್ ರಿಲೇ […]
ಬಿ. ಬಿ. ಹೆಗ್ಡೆ ಕಾಲೇಜು: ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ (ಸೆ. 20): ವಿದ್ಯಾರ್ಥಿ ದೆಸೆಯಲ್ಲಿ ಸೇವಾ ಮನೋಭಾವವನ್ನು ಬೆಳೆಸುವ ಮಹತ್ವದ ಸಂಸ್ಥೆ ಎನ್.ಎಸ್.ಎಸ್. ಈ ಘಟಕಗಳ ಮೂಲಕ ನಡೆಯುವ ವಿವಿಧ ಕ್ರಿಯಾ ಚಟುವಟಿಕೆಗಳಲ್ಲಿ ಸ್ವಯಂ ಸೇವಕರು ಸಕ್ರಿಯವಾಗಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಸತ್ಪçಜೆಗಳಾಗಲು ಸಾಧ್ಯ. ನಾಯಕತ್ವ ಗುಣಗಳೊಂದಿಗೆ ಬದುಕಿನ ಶಿಕ್ಷಣವನ್ನು ವಿದ್ಯಾರ್ಥಿಗಳು ಈ ಮೂಲಕ ಪಡೆದುಕೊಳ್ಳಬೇಕೆಂದು ಎಂದು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶ್ರೀಮತಿ ಸುಗುಣಾ ಆರ್. ಕೆ. ಹೇಳಿದರು. ಅವರು ಕುಂದಾಪುರದ ಡಾ| ಬಿ. […]
ಕಾರ್ಕಳ ಜ್ಞಾನಸುಧಾದದಲ್ಲಿ ಜಿಲ್ಲಾಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟ ಸಂಪನ್ನ
ಕಾರ್ಕಳ( ಸೆ,22) : ಇತ್ತೀಚೆಗೆ ಬಾಸ್ಕೆಟ್ಬಾಲ್ ಕ್ರೀಡೆಯು ಯುವಮನಸ್ಸುಗಳನ್ನು ಸೆಳೆಯುತ್ತಿದೆ. ಬಾಸ್ಕೆಟ್ಬಾಲ್ ಬಾಕ್ಸ್ನಂತೆ ಕ್ರೀಡಾಳುಗಳ ಪ್ರತಿಭೆಯು ಎತ್ತರಕ್ಕೆ ಏರಬೇಕು. ಸೋತವರು ಬೇಸರ ಪಡದೆ ಗೆದ್ದವರು ಬೀಗದೆ ಬಾಗಿ ನಡೆದು ತೋರುವ ಆದರ್ಶ ವ್ಯಕ್ತಿಗಳಾಗ ಬೇಕು ಎಂದು ಕಾರ್ಕಳದ ಎಸ್.ಎನ್.ವಿ. ಪ.ಪೂ.ಕಾಲೇಜಿನ ಪ್ರಾಂಶುಪಾಲ ಶ್ರೀ ಪ್ರದೀಪ್ ಎನ್. ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ […]










