ಕುಂದಾಪುರ (ಡಿ.06): ಶ್ರೀ ಸಿದ್ಧಿ ವಿನಾಯಕ ಶಾಲೆಯಲ್ಲಿ ಹಟ್ಟಿಅಂಗಡಿಯಲ್ಲಿ ನಡೆದ AICS CBSE ಜಿಲ್ಲಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್- 2023 ರಲ್ಲಿ ಕುಂದಾಪುರದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ಗಳು 5 ಪದಕಗಳನ್ನು ಪಡೆದು ಸಾಧನೆಗೈದಿದ್ದಾರೆ. 17 ವರ್ಷದೊಳಗಿನ ಬಾಲಕಿಯರ ಗುಂಡು ಎಸೆತದಲ್ಲಿ ಹಾಗೂ ನೆಹಾಲ್ ಆರ್ ಹೆಗ್ಡೆ (ಗುರುಕುಲ ಪಬ್ಲಿಕ್ ಸ್ಕೂಲ್) ಚಿನ್ನದ ಪದಕ ಹಾಗೂ ಡಿಸ್ಕಸ್ ಥ್ರೋ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 14 ವರ್ಷದೊಳಗಿನ ಬಾಲಕರ 100 ಮೀ ಓಟದಲ್ಲಿ ರಾನ್ಸ್ಲಿ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಕುಂದಾಪುರ: ಗಮಕ ವಾಚನ ವ್ಯಾಖ್ಯಾನ
ಕುಂದಾಪುರ( ಡಿ,4): ಪುರಾಣ ಹಾಗೂ ಆಧುನಿಕ ಕಾವ್ಯಗಳ ಸುಲಭ ಅರ್ಥೈಸುವಿಕೆಗೆ ಗಮಕ ಕಲೆ ಪೂರಕವಾದುದು. ಕಾವ್ಯಗಳಲ್ಲಿನ ಸಾಂದರ್ಭಿಕವಾದ ಸಾಹಿತ್ಯ ಶ್ರೀಮಂತಿಕೆಗೆ ರಸಬದ್ಧವಾದ ರಾಗಗಳ ಸಂಯೋಜನೆಯಿಂದ ಶೋತೃಗಳಿಗೆ ಹೃದ್ಯವಾಗುತ್ತದೆ. ಮನೆಮನೆಗಳಲ್ಲಿ ಗಮಕ ಕಲೆ ಪ್ರಸ್ತುತಗೊಳ್ಳಬೇಕು ಯುವ ಮನಸುಗಳನ್ನು ಅರಳಿಸಬೇಕು ಎಂದು ಕುಂದಾಪುರದ ಖ್ಯಾತ ನ್ಯಾಯವಾದಿ ಎ ಎಸ್ ಎನ್ ಹೆಬ್ಬಾರ್ ಅಭಿಪ್ರಾಯಪಟ್ಟರು. ಅವರು ಕುಂದಾಪುರದ ‘ನುಡಿ’ ಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕರ್ನಾಟಕ ಗಮಕ ಕಲಾ […]
ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು, ಮೂಡ್ಲಕಟ್ಟೆ- ಸಾಧಕ ವಿದ್ಯಾರ್ಥಿಗೆ ಸನ್ಮಾನ
ಕುಂದಾಪುರ (ಡಿ,1): ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು, ಮೂಡ್ಲಕಟ್ಟೆ, ಕುಂದಾಪುರ ಇದರ ಕಾಮರ್ಸ್ ಅಸೋಸಿಯೇಷನ್ ವೇದಿಕೆಯ ಅಡಿಯಲ್ಲಿ ಸ್ಟೂಡೆಂಟ್ ರೆಕಾಗ್ನಿಷನ್ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಯಿತು. ನವೆಂಬರ್ ತಿಂಗಳಲ್ಲಿ ನೆಡೆದ CSEET ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆಹೊಂದಿದ ಹನ ಶೇಕ್ ದ್ವಿತೀಯ ಬಿ ಕಾಂಮ್ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಿ ಶ್ಲಾಗಿಸಲಾಯಿತು . ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ| ರಾಮಕೃಷ್ಣ ಹೆಗಡೆ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರು, ಐಎಂಜೆ ಇನ್ಸ್ಟಿಟ್ಯೂಷನ್ಸ್, […]
ಡಾIಬಿ. ಬಿ. ಹೆಗ್ಡೆ ಕಾಲೇಜು : ಏಡ್ಸ್ ಅರಿವು- ಜನಜಾಗೃತಿ ಅಭಿಯಾನ
ಕುಂದಾಪುರ (ಡಿ.01) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಯುವ ರೆಡ್ಕ್ರಾಸ್ ಘಟಕದ ಜಂಟಿ ಆಶ್ರಯದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಉಡುಪಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಕಛೇರಿ, ಕುಂದಾಪುರ ಇವರ ಸಹಯೋಗದೊಂದಿಗೆ ವಿಶ್ವ ಏಡ್ಸ್ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿಯಿಂದ ಜ್ಯೂನಿಯರ್ ಕಾಲೇಜಿನವರೆಗೆ ಜಾಥಾ ಹಮ್ಮಿಕೊಳ್ಳಲಾಯಿತು. […]
ಕ್ರಿಯೇಟಿವ್ ಆವಿರ್ಭವ-2023 ಕಾಲೇಜು ವಾರ್ಷಿಕೋತ್ಸವ
ಉಡುಪಿ (ಡಿ,04): ಇಲ್ಲಿನ ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭ “ವಸುಧೈವ ಕುಟುಂಬಕಂ” ಎಂಬ ಕಲ್ಪನೆಯಲ್ಲಿ ಮೂಡಿಬಂದಿತು. ಸಮಾರಂಭದಲ್ಲಿ ಮಿಲಾಗ್ರಿಸ್ ಚರ್ಚ್ನ ಧರ್ಮಗುರುಗಳಾದ ವಲೇರಿಯನ್ ಮೆಂಡೊನ್ಸಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಜವಾಬ್ದಾರಿಯುತವಾದ ಒಂದು ಸಮುದಾಯವನ್ನು ನಿರ್ಮಾಣ ಮಾಡುವ ಕನಸು ಕಂಡು ಉತ್ತಮ ರೀತಿಯಿಂದ ಮುನ್ನಡೆಯುತ್ತಿದೆ ಎಂದು ಹೇಳಿದರು. ಉಡುಪಿ ಪ್ರಾಂತ್ಯದಲ್ಲಿ ಕ್ರಿಯೇಟಿವ್ನ ಹೆಸರು ಇತ್ತೀಚೆಗೆ ಎಲ್ಲ ಕಡೆ ಕೇಳಲಾರಂಭಿಸಿದೆ. ಉನ್ನತವಾದ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು: ಸಂವಿಧಾನ ದಿನಾಚರಣೆ
ಕುಂದಾಪುರ (ನ,26): ಕಾಲೇಜಿನ ಎನ್ .ಎಸ್ . ಎಸ್ ಘಟಕ ಹಾಗೂ ರೋವರ್ಸ ಮತ್ತು ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ .ಕೆ. ಉಮೇಶ್ ಶೆಟ್ಟಿ,ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ ಉಪಸ್ಥಿತರಿದ್ದರು. ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹ ಪ್ರಾಧ್ಯಾಪಕ ಪ್ರವೀಣ್ ಮೊಗವೀರ ಗಂಗೊಳ್ಳಿ ಮಾತನಾಡಿ ದೇಶದ ಮೂಲಭೂತ ಕಾನೂನಾದ ಸಂವಿಧಾನವನ್ನು ಶಾಸನಬದ್ಧವಾಗಿ ಸಮರ್ಪಿಸಿಕೊಂಡ ನವಂಬರ್ 26ನೇ ದಿನವನ್ನು ದೇಶದಾದ್ಯಂತ […]
ಕುಂದಾಪುರ ತಾಲೂಕು ಯುವ ಬಂಟರ ಸಂಘ(ರಿ): ನ,30 ರಂದು 10 ಮಂದಿ ಮಹಿಳಾ ಸಾಧಕೀಯರಿಗೆ ಹೊಂಗಿರಣ ಪ್ರಶಸ್ತಿ ಪ್ರಧಾನ
ಕುಂದಾಪುರ(ನ, 29.): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನವೆಂಬರ್ 30 ರಂದು ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, 10 ಮಂದಿ ಮಹಿಳಾ ಸಾಧಕೀಯರಿಗೆ ಹೊಂಗಿರಣ ಪ್ರಶಸ್ತಿ ಪ್ರಧಾನ ಹಾಗೂ ವಿಕಲಚೇತನ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ವಿನಯ ಆಸ್ಪತ್ರೆಯ ಆಡಳಿತ ನಿರ್ದೇಶಕ ಖ್ಯಾತ ಪ್ರಸೂತಿ ತಜ್ಞ ಡಾ. ರಂಜಿತ್ ಕುಮಾರ್ ಶೆಟ್ಟಿ ಉದ್ಘಾಟನೆ […]
ವೈಷ್ಣವಿ ಖಾರ್ವಿಗೆ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ
ಕುಂದಾಪುರ ( ನ.29): ಬೆಂಗಳೂರಿನಲ್ಲಿ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಇಕ್ಯುಪ್ಡ್ ಬೆಂಚ್ ಪ್ರೆಸ್ ಸ್ಪರ್ಧೆಯ 69 ಕೆಜಿ ಸಬ್ ಜೂನಿಯರ್ ವಿಭಾಗದಲ್ಲಿ ಗಂಗೊಳ್ಳಿಯ ವೈಷ್ಣವಿ ಖಾರ್ವಿ ಗಂಗೊಳ್ಳಿ ಇವರು ತೃತೀಯ ಸ್ಥಾನವನ್ನು ಪಡೆದು ಕಂಚಿನ ಪದಕವನ್ನು ಗಳಿಸಿರುತ್ತಾರೆ. ಈಕೆ ಕುಂದಾಪುರದ ನ್ಯೂ ಹರ್ಕ್ಯುಲೆಸ್ ಜಿಮ್ (ರಿ )ಹಾಗೂ ಕಿಂಗ್ ಫಿಷರ್ ಸ್ಪೋರ್ಟ್ಸ್ ಕ್ಲಬ್( ರಿ ) ಈ ಸಂಸ್ಥೆಯ ಸದಸ್ಯರಾಗಿದ್ದು ಗಂಗೊಳ್ಳಿಯ […]
ಡಾ|ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ,1 ರಿಂದ 3 ರ ತನಕ ಅoತರ್ ಕಾಲೇಜು ಮಟ್ಟದ ಚೆಸ್ ಸ್ಪರ್ಧೆ
ಕುಂದಾಪುರ (ನ,21) : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಅಶ್ರಯದಲ್ಲಿ ಪುರುಷರ ಮತ್ತು ಮಹಿಳೆಯರ ಅಂತರ್ ಕಾಲೇಜು ಮಟ್ಟದ ಚೆಸ್ ಸ್ಪರ್ಧೆಯು ಡಿಸೆಂಬರ್ 01, 02 ಮತ್ತು 03ರಂದು ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಉಡುಪಿ, ದಕ್ಷಿಣಕನ್ನಡ, ಕೊಡಗು ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ […]
ಸರಸ್ವತಿ ವಿದ್ಯಾಲಯ ಪಿ ಯು ಕಾಲೇಜು ಗಂಗೊಳ್ಳಿ :ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಸಂಪನ್ನ
ಗಂಗೊಳ್ಳಿ ( ನ,21): ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ ಮತ್ತು ಸಾಮಾಜಿಕ ಕಳಕಳಿ ಉಂಟು ಮಾಡುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಾ ಇಂತಹ ಯೋಜನೆಗಳು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ವಂಡ್ಸೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲಕರಾದ ರಾಜೀವ್ ನಾಯ್ಕ್ ಅಭಿಪ್ರಾಯಪಟ್ಟರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೊಲ್ಲೂರಿನ ಧರ್ಮಪೀಠದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಎಂ ಸಿ ರವರು […]










