ಕುಂದಾಪುರ (ಆ,15): ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 78 ನೇ ಸ್ವಾತಂತ್ರ್ಯೋತ್ಸವ ನೆರವೇರಿತು. ಧ್ವಜಾರೋಹಣಗೈದು ಭಾರತೀಯ ಗಡಿ ಭದ್ರತಾ ಪಡೆಯ ನಿವೃತ್ತ ಯೋಧ ಶ್ರೀ. ಗಣಪತಿ ಖಾರ್ವಿ ಇವರು ಮಾತನಾಡಿ “ದೇಶಾಭಿಮಾನ ನಮ್ಮ ವಿದ್ಯಾರ್ಥಿಗಳ ಮನ ಮನೆಯಲ್ಲಿ ನೆಲೆಯಾಗಬೇಕು. ದೇಶ ನನಗೇನು ಕೊಟ್ಟಿದೆ ಎಂದು ಪ್ರಶ್ನಿಸದೆ ದೇಶಕ್ಕಾಗಿ ನಾನೇನು ಕೊಡಬೇಕಾಗಿದೆ ಎಂದು ಯೋಚಿಸಬೇಕು” ಎಂಬ ಸಂದೇಶ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ವತಿಯಿಂದ ನಿವೃತ್ತ ಯೋಧ ಶ್ರೀ ದಿನೇಶ್ ಆಚಾರ್ಯ ಆಲೂರು ರವರಿಗೆ ಗೌರವಾರ್ಪಣೆ
ಹೆಮ್ಮಾಡಿ(ಆ,15): ಮೊಗವೀರ ಯುವ ಸಂಘಟನೆಯ [ರಿ.] ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಉಡುಪಿ, ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ 78ನೇ ಸ್ವಾತಂತ್ರೋತ್ಸವ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡ ”ಸೈನಿಕರಿಗೊಂದು ಗೌರವಾರ್ಪಣೆ” ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ನಿವ್ರತ್ತ ಯೋಧ ಶ್ರೀ ದಿನೇಶ್ ಆಚಾರ್ಯ ಆಲೂರು ಇವರನ್ನು ಸ್ವಗ್ರಹದಲ್ಲಿ ಅಗಸ್ಟ್ 15 ರಂದು ಸನ್ಮಾನಿಸಿ ಗೌರವಿಸಲಾಯಿತು. ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಕಾಂಚನ್ ಬಾಳಿಕೆರೆ ಕಾರ್ಯಕ್ರಮದ […]
ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಸೈಬರ್ ಸೆಕ್ಯೂರಿಟಿಯ ಕುರಿತು ಕಾರ್ಯಗಾರ
ಮೂಡ್ಲಕಟ್ಟೆ(ಆ,14): ಇಲ್ಲಿನ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ದೀಕ್ಷಾರಂಭ ಕಾರ್ಯಕ್ರಮದ ಎರಡನೇ ದಿನ ಸೈಬರ್ ಸೆಕ್ಯೂರಿಟಿ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪೃಥ್ವಿ ವಿಷನ್ ಸ್ಥಾಪಕರಾದ ಶ್ರೀ ಪೃಥ್ವಿಶ್ ರವರು “ಸೈಬರ್ ಸೆಕ್ಯೂರಿಟಿಯ ಮಹತ್ವ, ವಿಶೇಷತೆ, ಅನ್ವಯಗಳ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿಯ ಕುರಿತು ಇರುವ ಸಂದೇಹಗಳಿಗೆ ಸೂಕ್ತ ಮಾಹಿತಿ ನೀಡಿ ವಾಸ್ತವಿಕ ಸಮಸ್ಯೆಗಳ ಅರಿವು ಮೂಡಿಸಿ, ತಾಂತ್ರಿಕ ಅರಿವಿನ ಕೊರತೆಯ […]
ಕುಂದಾಪುರ ತಾಲೂಕು ಯುವ ಬಂಟರ ಸಂಘ: ಗೌರವಾಧ್ಯಕ್ಷರಾಗಿ ಶ್ರೀಮತಿ ವತ್ಸಲಾ ದಯಾನಂದ ಶೆಟ್ಟಿ ಆಯ್ಕೆ
ಕುಂದಾಪುರ(ಆ,14): ಕುಂದಾಪುರ ತಾಲೂಕು ಯುವ ಬಂಟರ ಸಂಘದ 2024 – 26 ನೇಯ ಸಾಲಿನ ಗೌರವಾಧ್ಯಕ್ಷರಾಗಿ ಅಂಕದಕಟ್ಟೆಯ ಮಂಜುಶ್ರೀ ಕನ್ಸ್ಟ್ರಕ್ಷನ್ ನ ಆಡಳಿತ ಪಾಲುದಾರರಾದ ಶ್ರೀಮತಿ ವತ್ಸಲಾ ದಯಾನಂದ ಶೆಟ್ಟಿ ಆಯ್ಕೆ ಆಗಿರುತ್ತಾರೆ. ಕಳೆದ ಹತ್ತು ವರ್ಷಗಳಿಂದ ಯುವ ಬಂಟರ ಸಂಘದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಇವರು ದತ್ತಿನಿಧಿ ಪೋಷಕರಾಗಿ, ದಶಮಾನೋತ್ಸವದ ಗೌರವ ಮಹಾಪೋಷಕರಾಗಿ, ಪ್ರಸ್ತುತ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸತೀಶ್ ಸಾಲ್ಯಾನ್ ಮಣಿಪಾಲ್ ಹುಟ್ಟುಹಬ್ಬಕ್ಕೆ ದಾಖಲೆಯ ರಕ್ತದಾನ
ಉಡುಪಿ (ಆ,14): ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ಅಭಿಮಾನಿ ಬಳಗ ಉಡುಪಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಮತ್ತು ಉತ್ತರ ಕನ್ನಡ, ಡಿ ಡಿ ಗ್ರೂಫ್ ನಿಟ್ಟೂರು, ಶೌರ್ಯ ವಿಪತ್ತು ಘಟಕ , ಬಾರ್ಕೂರು,ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಾಷ್ಟ್ರೀಯ ಮೀನುಗಾರರ ಸಂಘ ರಿ. ಕರ್ನಾಟಕ , ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ಅವರ […]
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ: ವಿದ್ಯಾರ್ಥಿ ಪ್ರೇರಣಾ ಕಾರ್ಯಕ್ರಮ
ಕೋಡಿ(ಆ,14): ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ “ವಿದ್ಯಾರ್ಥಿ ಪ್ರೇರಣಾ ಕಾರ್ಯಕ್ರಮ”ವನ್ನು ಆಗಸ್ಟ್ .14 ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀಕಾಳಾವರ ಉದಯ ಕುಮಾರ್ ಶೆಟ್ಟಿ ಮಾತನಾಡಿ ಯೋಚನೆ ಹಾಗೂ ಯೋಜನೆಗಳಿದ್ದಲ್ಲಿ ಯಾವುದೇ ಸಾಧನೆಗೆ ಹಿನ್ನಡೆಯಿಲ್ಲ, ಒಂದು ಸಂಸ್ಥೆ ಬೆಳೆಯಬೇಕಾದರೆ ಐದು ಅಂಶಗಳು ಮುಖ್ಯ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಪೋಷಕರು, ಬೋಧಕರು ಮತ್ತು ಹಳೆ ವಿದ್ಯಾರ್ಥಿಗಳು ಇವರ […]
ಬಿ. ಬಿ. ಹೆಗ್ಡೆ ಕಾಲೇಜು :ಕೈಗಾರಿಕಾ ಭೇಟಿ
ಕುಂದಾಪುರ (ಆ, 10): ಕುಂದಾಪುರದ ಪ್ರತಿಷ್ಠಿತ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ಬೈಂದೂರು ಮಾಜಿ ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿಯವರ ಕೈಗಾರಿಕೆಗಳಾದ ಮುಳ್ಳುಗುಡ್ಡೆ ಸೌಪರ್ಣಿಕ ಹೆಂಚಿನ ಕಾರ್ಖಾನೆ, ಸೌಪರ್ಣಿಕ ಡೆಕೋರೇಟಿವ್ ಟೈಲ್ಸ್, ಸೌಪರ್ಣಿಕ ಗೇರುಬೀಜ ಕಾರ್ಖಾನೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಪದವಿಪೂರ್ವ ಹಂತದಲ್ಲಿ ವಾಣಿಜ್ಯೇತರ ವಿಭಾಗಗಳಲ್ಲಿ ತೇರ್ಗಡೆಗೊಂಡು ಪ್ರಸ್ತುತ ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದಲ್ಲಿ ಪ್ರವೇಶಾತಿ ಪಡೆದ […]
ಆರ್. ಎನ್.ಶೆಟ್ಟಿ ಪಿ ಯು ಕಾಲೇಜಿನ ಉಪಪ್ರಾಂಶುಪಾಲರಾಗಿ ಶ್ರೀ ಪ್ರೀತೇಶ್ ಶೆಟ್ಟಿ ಅಧಿಕಾರ ಸ್ವೀಕಾರ
ಕುಂದಾಪುರ (ಆ.14): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಕುಂದಾಪುರದ ಆರ್. ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾಗಿ ಶ್ರೀ ಪ್ರೀತೇಶ್ ಶೆಟ್ಟಿ ಅಧಿಕಾರ ಸ್ವೀಕರಿಸಿದ್ದಾರೆ. ರಸಾಯನ ಶಾಸ್ತ್ರ ವಿಷಯದಲ್ಲಿ ಎಮ್. ಎಸ್.ಸಿ ವ್ಯಾಸಂಗ ಮಾಡಿರುವ ಇವರು ಕಳೆದ 22 ವರ್ಷಗಳಿಂದ ಸಹ ಸಂಸ್ಥೆಯಾದ ವಿ.ಕೆ. ಆರ್. ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನೂತನ ಉಪಪ್ರಾಂಶುಪಾಲರಾಗಿ ನೇಮಕಗೊಂಡ ಶ್ರೀ ಪ್ರೀತೇಶ್ ಶೆಟ್ಟಿಯವರನ್ನು ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್. […]
ಬಿ. ಬಿ. ಹೆಗ್ಡೆ ಕಾಲೇಜು: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ‘ಪ್ರೇರಣಾ’- ಪರಿಚಯ ಕಾರ್ಯಕ್ರಮ
ಕುಂದಾಪುರ (ಆ, 12): ಪದವಿ ಪ್ರವೇಶಿಸಿದ ವಿದ್ಯಾರ್ಥಿಗಳು ಮೊಟ್ಟ ಮೊದಲು ಆಯ್ಕೆ ಮಾಡಿಕೊಂಡ ವಿಷಯವನ್ನು ಮತ್ತು ಸಂಸ್ಥೆಯನ್ನು ಪ್ರೀತಿಸಿ, ಆ ಮೂಲಕ ಕೇಳಿ ಕಲಿಯಲು ಆರಂಭಿಸುತ್ತೀರಿ. ಈ ಆರಂಭ ಹೊಸ ಆಲೋಚನೆಗಳನ್ನು ಹುಟ್ಟು ಹಾಕುವ ಮೂಲಕ ಸೃಜನಾತ್ಮಕವಾಗಿ ಬೆಳೆಯುವಿರಿ. ಆಗ ಪಡೆದ ಪದವಿ ಅರ್ಥಪೂರ್ಣವಾಗುತ್ತದೆ ಎಂದು ಉಡುಪಿಯ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ| ನಾಗರಾಜ್ ಎಸ್. ಹೇಳಿದರು. ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ […]
ಬಸ್ರೂರು ಮ್ಯಾರಥಾನ್ 2024 : ಕುಂದಾಪುರ ಟ್ರ್ಯಾಕ್& ಫೀಲ್ಡ್ ಉತ್ತಮ ಸಾಧನೆ
ಬಸ್ರೂರು (ಆ, 11): ದೇಶದ 77 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಬಸ್ರೂರು (ರಿ.) ವತಿಯಿಂದ ನೀರಿದ್ದರೆ ನರ – ಕಾಡಿದ್ದರೆ ವರ ಎನ್ನುವ ಅಭಿಯಾನದಡಿ ಆಗಸ್ಟ್ 11 ರಂದು ಬಸ್ರೂರಿನಲ್ಲಿ ನಡೆದ ತಾಲೂಕು ಮಟ್ಟದ ಮ್ಯಾರಥಾನ್ ನಲ್ಲಿ ಕುಂದಾಪುರ ಟ್ರ್ಯಾಕ್ &ಫೀಲ್ಡ್ ಕ್ರೀಡಾ ಸಂಸ್ಥೆಯ ವಿದ್ಯಾರ್ಥಿಗಳು ಸಮಗ್ರ 10 ಪದಕಗಳನ್ನು ಪಡೆದುಕೊಂಡು ಸಾಧನೆಗೈದಿದ್ದಾರೆ. 21 ವರ್ಷ ಕೆಳ ವಯಸ್ಸಿನ ಹುಡುಗರ ವಿಭಾಗದಲ್ಲಿ ಶ್ರೀ ಸಿದ್ಧಿ ವಿನಾಯಕ […]