ಹೆಮ್ಮಾಡಿ( ಡಿ.19): ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪುರಸ್ಕ್ರತ ಶ್ರೀ ಉದಯ್ ಕುಮಾರ್ ಹಟ್ಟಿಯಂಗಡಿಯವರನ್ನು ವೆಲಾಸಿಟಿ ಅಕಾಡೆಮಿ ಇಂಡಿಯಾ ಕರಾಟೆ ತರಭೇತಿ ಸಂಸ್ಥೆಯ ಮುಖ್ಯಸ್ಥರಾದ ಅಕ್ಷಯ ಹೆಮ್ಮಾಡಿಯವರು ತಮ್ಮ ಸಂಸ್ಥೆಯ ವತಿಯಿಂದ ಡಿಸೆಂಬರ್ 15 ರಂದು ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗೀಶ್ ಗುಡ್ರಿ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಹೆಮ್ಮಾಡಿ: ವೆಲಾಸಿಟಿ ಅಕಾಡೆಮಿ ಇಂಡಿಯಾ ಬ್ಲಾಕ್ ಬೆಲ್ಟ್ ಪ್ರಧಾನ ಹಾಗೂ ಸಾಧಕರಿಗೆ ಸನ್ಮಾನ
ಹೆಮ್ಮಾಡಿ(ಡಿ.19): ವೆಲಾಸಿಟಿ ಅಕಾಡೆಮಿ ಇಂಡಿಯಾ ಇದರ ಮುಖ್ಯಸ್ಥರಾದ ಅಕ್ಷಯ್ ಹೆಮ್ಮಾಡಿ ಇವರಲ್ಲಿ ತರಬೇತಿ ಪಡೆದು ಕರಾಟೆ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪ್ರಧಾನ ಕಾರ್ಯಕ್ರಮವು ಡಿಸೆಂಬರ್ 15 ರಂದು ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಂಗಣದಲ್ಲಿ ನೆರವೇರಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗೀಶ್ ಗುಡ್ರಿ ವಹಿಸಿಕೊಂಡರು. ಕಾರ್ಯಕ್ರಮದ ಪ್ರಾರಂಭದಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಹಲವಾರು ಪ್ರಶಸ್ತಿ ಪುರಸ್ಕಾರವನ್ನು ಮುಡಿಗೇರಿಸಿಕೊಂಡಂತಹ ಕೊಳಲುವಾದಕರಾದ ಮಾಸ್ಟರ್ ಶ್ಯಾಮ್ ಇವರಿಂದ ಕೊಳಲುವಾದನ ನಡೆಯಿತು. […]
ಸರಸ್ವತಿ ವಿದ್ಯಾಲಯದಲ್ಲಿ ಎಸ್. ವಿ. ಪಿ. ಎಲ್ ಕ್ರಿಕೆಟ್ ಪಂದ್ಯಾಟ
ಗಂಗೊಳ್ಳಿ(ಡಿ ,17) : ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳುವ ಪಂದ್ಯಾಟಗಳು ವಿದ್ಯಾರ್ಥಿಗಳನ್ನು ಉನ್ನತ ಸಾಧನೆಗಳನ್ನು ಮಾಡುವಲ್ಲಿ ಬಹಳ ದೊಡ್ಡ ಪ್ರೇರಣೆಯನ್ನು ನೀಡುತ್ತವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗಂಗೊಳ್ಳಿಯ ಖ್ಯಾತ ಉದ್ಯಮಿ ವಿಠಲ ಶೆಣೈ ಅವರು ಅಭಿಪ್ರಾಯ ಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಎಸ್ ವಿ ಪಿ ಎಲ್ ಕ್ರಿಕೆಟ್ ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಜಿ.ಎಸ್.ವಿ.ಎಸ್ […]
ರಾಜಧಾನಿಯಲ್ಲಿ ಹೆಜ್ಜೆ ಗುರುತು ಮೂಡಿಸಿದ ಕ್ರಿಯೇಟಿವ್ ಪುಸ್ತಕ ಮನೆ
ಬೆಂಗಳೂರು( ಡಿ,15): ಪುಸ್ತಕ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ 6 ಪುಸ್ತಕಗಳ ಅನಾವರಣ ಹಾಗೂ ‘ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ-2024’ ಪ್ರದಾನ ಸಮಾರಂಭದಲ್ಲಿ ಖ್ಯಾತ ಬರಹಗಾರ ಪದ್ಮರಾಜ್ ದಂಡಾವತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ನ ಶ್ರೀಕೃಷ್ಣರಾಜ ಪರಿಷತ್ ಮಂದಿರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳಾದ ಜೋಗಿ, ಬಿ. ಆರ್. ಲಕ್ಷ್ಮಣ್ […]
ರಾಷ್ಟ್ರೀಯ ಮಟ್ಟದ ಟಿ20 ಕ್ರಿಕೆಟ್ : ಮೂಡ್ಲಕಟ್ಟೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ವಿದ್ಯಾರ್ಥಿಯ ಸಾಧನೆ
ಕುಂದಾಪುರ ( ಡಿ ,15): ಇಂಡಿಯನ್ ಡೆಫ್ ಕ್ರಿಕೆಟ್ ಅಸೋಸಿಯೇಷನ್’ ಆಯೋಜನೆಯ ಅಡಿಯಲ್ಲಿ ಆಂಧ್ರಪ್ರದೇಶದ ಅನಂತಪುರದಲ್ಲಿ ನವೆಂಬರ್ 25 ರಿಂದ 28 ರವರೆಗೆ ನಡೆದ ರಾಷ್ಟ್ರೀಯ ಮಟ್ಟದ 19 ವರ್ಷದೊಳಗಿನ ಟಿ20 ಕ್ರಿಕೆಟ್ ಪಂದ್ಯಕೂಟದಲ್ಲಿ ಐಎಂಜೆ ಪದವಿ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ಸನಿತ್ ಶೆಟ್ಟಿ ಒಡಿಶಾ ತಂಡವನ್ನು ಪ್ರತಿನಿಧಿಸಿ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಂದ್ಯಕೂಟದ ಫೈನಲ್ ನಲ್ಲಿ ಒಡಿಶಾ ತಂಡ ಹರಿಯಾಣ […]
ಬಿ. ಬಿ. ಹೆಗ್ಡೆ ಕಾಲೇಜು : ಅಕ್ಷರ-ಅಕ್ಕರೆಯ ಹೊನಲು–ವಿಶೇಷ ಉಪನ್ಯಾಸ
ಕುಂದಾಪುರ (ಡಿ.03): ನಮ್ಮ ದೇಶಕ್ಕೆ ಇಂದು ಅಗತ್ಯವಿರುವುದು ಬರಿಯ ವಿದ್ಯಾವಂತರಲ್ಲ, ಪ್ರಾಮಾಣಿಕರು, ಸತ್ಯವಂತರು, ಸಚ್ಚಾರಿತ್ರ್ಯವುಳ್ಳವರ ಅಗತ್ಯವಿದೆ. ಇದು ಶಿಕ್ಷಣದಿಂದ ಸಾಧ್ಯವಾದಾಗ ಮಾತ್ರ ಶಿಕ್ಷಣ ನಿಜವಾದ ಅರ್ಥವಂತಿಕೆಯಿಂದ ಇರಲು ಸಾಧ್ಯ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಬಸವ ಕುಮಾರ ಪಾಟೀಲ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಹಾಗೂ ಕುಂದಗನ್ನಡ ಸಂಘ ಆಯೋಜಿಸಿದ ‘ಅಕ್ಷರ-ಅಕ್ಕರೆಯ ಹೊನಲು’ ವಿಶೇಷ ಉಪನ್ಯಾಸ […]
ಕುಂದಾಪುರ : ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ವಿಜೇತ ಎಚ್.ಎಮ್.ಎಮ್ ಶಾಲೆಯ ಸದ್ವಿನ್
ಕುಂದಾಪುರ (ಡಿ.12) : ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಮತ್ತು ಗ್ಲಾಡಿಯೇಟರ್ಸ್ ಬಾಕ್ಸಿಂಗ್ ಅಕಾಡೆಮಿ (ರಿ). ಜಂಟಿ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಇಂಟರ್ ಕ್ಲಬ್ ಬಾಕ್ಸಿಂಗ್ ಚಾಂಪಿಯನ್ ಶಿಪ್ 2024ರಲ್ಲಿ ಕುಂದಾಪುರದ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ 7ನೇ ತರಗತಿ ವಿದ್ಯಾರ್ಥಿ ಸದ್ವಿನ್ ಶೆಟ್ಟಿ 48ರಿಂದ 50ಕೆ.ಜಿ ಕಬ್ಸ್ ವಿಭಾಗದ ಬಾಕ್ಸಿಂಗ್ ನಲ್ಲಿ ಭಾಗವಹಿಸಿ, ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ […]
ಉಡುಪಿ ಮ್ಯಾರಥಾನ್ : ಕುಂದಾಪುರ ಟ್ರ್ಯಾಕ್ &ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿಯ ನವ್ಯ ಆಚಾರ್ ಗೆ ಬೆಳ್ಳಿ ಪದಕ
ಉಡುಪಿ (ಡಿ. 13): ಉಡುಪಿ ರನ್ನರ್ಸ್ ಕ್ಲಬ್ ಆಯೋಜಿದ ಉಡುಪಿ ಮ್ಯಾರಥಾನ್ ನ 14 ರ ವಯೋಮಾನದ ಒಳಗಿನ ಹುಡುಗಿಯರ ವಿಭಾಗದ 3 ಕಿ .ಮೀ ಮ್ಯಾರಥಾನ್ ನಲ್ಲಿ ಕುಂದಾಪುರ ಟ್ರ್ಯಾಕ್ &ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿಯ ನವ್ಯ ಆಚಾರ್ ಗೆ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.ಇವರಿಗೆ ಕುಂದಾಪುರ ಟ್ರ್ಯಾಕ್ &ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿಯ ಮುಖ್ಯಸ್ಥರಾದ ಶ್ರೀ ಪ್ರಶಾಂತ್ ಶೆಟ್ಟಿ ತರಬೇತಿ ನೀಡಿರುತ್ತಾರೆ.
ಹೆಮ್ಮಾಡಿಯಲ್ಲಿ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನವೀಕರಣ ಹಾಗೂ ನೋಂದಾವಣೆ ಅಭಿಯಾನ
ಹೆಮ್ಮಾಡಿ (ಡಿ,016): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ [ರಿ.] ಅಂಬಲಪಾಡಿ, ಉಡುಪಿ ಮತ್ತು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಮಾಹೆ- ಮಣಿಪಾಲ ಇವರ ಸಹಯೋಗದೊಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಆಕರ್ಷಕ ಯೋಜನೆಯಾದ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯ ನವೀಕರಣ ಹಾಗೂ ನೋಂದಾವಣೆ ಅಭಿಯಾನ ಡಿಸೆಂಬರ್ 17 ರಿಂದ ಜನವರಿ 10 ರ ತನಕ ಹೆಮ್ಮಾಡಿಯ ಬಸ್ ನಿಲ್ದಾಣ ದ ಸಮೀಪದ ಮೀನುಗಾರರ […]
ಗೋವಾ ಬಂಟರ ಸಂಘ ರಜತ ಸಂಭ್ರಮದ ಲಾಂಛನ ಬಿಡುಗಡೆ
ಪಣಜಿ(ಡಿ, 05): ಗೋವಾ ಬಂಟರ ಸಂಘದ ವತಿಯಿಂದ 2025 ರ ಜನವರಿ 19ರಂದು ನಡೆಯಲಿರುವ ರಜತ ಸಂಭ್ರಮ ಕಾರ್ಯಕ್ರಮದ ಲಾಂಛನ ಬಿಡುಗಡೆ ಡಿಸೆಂಬರ್ 01 ರಂದು ನಡೆದ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕಾವಡಿ ಸದಾಶಿವ ಶೆಟ್ಟಿ ಅನಾವರಣ ಮಾಡಿದರು. ಗೋವಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸುನಿಲ್ ಶೆಟ್ಟಿ ಬೆಳ್ಳಂಪಳ್ಳಿ, ಕೋಶಾಧಿಕಾರಿ ಶ್ರೀ ಪ್ರಶಾಂತ್ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಶ್ರೀ ವಿಜಯೇಂದ್ರ ಶೆಟ್ಟಿ ಕಬ್ಯಾಡಿ, […]