ಹೆಮ್ಮಾಡಿ(ಆ. 09): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳು, ಹೆಮ್ಮಾಡಿ ,ವೆಲಾಸಿಟಿ ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ & ಫಿಟ್ನೆಸ್ ಹೆಮ್ಮಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ ಟ್ರಸ್ಟ್ (ರಿ.) ಕುಂದಾಪುರ ತಾಲೂಕು,ಮೊಗವೀರ ಸ್ತ್ರೀ ಶಕ್ತಿ, ಬಗ್ವಾಡಿ ಹೋಬಳಿ ಹಾಗೂ ರೆಡ್ ಕ್ರಾಸ್ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ನೂತನ ಅಧ್ಯಕ್ಷರಾಗಿ ಲ. ಗಣೇಶ್ ಬೈಂದೂರು ಆಯ್ಕೆ
ಕುಂದಾಪುರ(ಆ.8): ಲಯನ್ಸ್ ಜಿಲ್ಲೆ 317 ಸಿ ವ್ಯಾಪ್ತಿಗೆ ಒಳಪಡುವ ಪ್ರತಿಷ್ಠಿತ ಲಯನ್ ಕ್ಲಬ್ ಗಳಲ್ಲಿ ಒಂದಾದ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಶ್ರೀ ದೇವಿ ಕಂಗನ್ ಸ್ಟೋರ್ ಹಾಗೂ ಶ್ರೀದೇವಿ ಸಿಲ್ವರ್ ನ ಮಾಲೀಕರು, ಕೋಸ್ಟಲ್ ಕ್ಲಬ್ ನ ಸ್ಥಾಪಕ ಸದಸ್ಯರು ಆದ ಲ. ಗಣೇಶ್ ಬೈಂದೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಎಂ ಎಸ್ ರಾಮಯ್ಯ ಕಾಲೇಜಿನಲ್ಲಿ ಎಂಬಿಎ ಪದವೀಧರರಾದ ಇವರು ದಿ. […]
ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಪುಸ್ತಕ ಮನೆ ವೆಬ್ ಸೈಟ್ ನಲ್ಲಿ ಭರ್ಜರಿ ಆಫರ್
ಕಾರ್ಕಳ(ಆ ,07): ಇಲ್ಲಿನ ಜೋಡು ರಸ್ತೆಯಲ್ಲಿರುವ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಮಾನ್ಸೂನ್ ಪ್ರಯುಕ್ತವಾಗಿ ಪುಸ್ತಕಗಳ ವಿಶೇಷ ರಿಯಾಯಿತಿಯೊಂದಿಗೆ ಭರ್ಜರಿ ಮಾರಾಟ ನಡೆಯುತ್ತಿದೆ. ಯಾವುದೇ ಪ್ರಕಾಶನದ 2 ಪುಸ್ತಕಗಳಿಗೆ 20% ರಿಯಾಯಿತಿ, 3 ಪುಸ್ತಕಗಳಿಗೆ 30% ರಿಯಾಯಿತಿ ಹಾಗೂ ಪುಸ್ತಕ ಮನೆ ಪ್ರಕಾಶನದ 5 ಅಥವಾ ಅದಕ್ಕಿಂತ ಹೆಚ್ಚಿನ ಪುಸ್ತಕಗಳಿಗೆ 50% ರಿಯಾಯಿತಿ! ಈ ವಿಶೇಷ ಕೊಡುಗೆ 15 ಆಗಸ್ಟ್ 2026ರವರೆಗೆ ಮಾತ್ರ.ಹೆಚ್ಚಿನ ಮಾಹಿತಿಗಾಗಿ: 9606474296.
ಡಾ. ಬಿ.ಬಿ.ಹೆಗ್ಡೆ ಕಾಲೇಜು :ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ (ಜು.30): ಪದವಿ ಶಿಕ್ಷಣದ ಜೊತೆಗೆ ನಾಯಕತ್ವ, ಸಹಾಯ, ಸಹಕಾರ ಮನೋಭಾವದೊಂದಿಗೆ ದೇಶಪ್ರೇಮವನ್ನು ಬೆಳೆಸಿಕೊಳ್ಳಿ. ಆ ಮೂಲಕ ಮುಂದೆ ದೇಶದ ಒಳ್ಳೆಯ ಪ್ರಜೆಗಳಾಗುವುದರೊಂದಿಗೆ ಭವಿಷ್ಯದ ನಾಯಕರಾಗಿ ಎಂದು ಉಡುಪಿ ಜಿಲ್ಲೆಯ ಅಥ್ಲೇಟಿಕ್ ಅಸೋಸಿಯೇಶನ್ಸ್ ಅಧ್ಯಕ್ಷರಾದ ಲಯನ್ ಹರಿಪ್ರಸಾದ್ ರೈ ಹೇಳಿದರು. ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ಅವರು […]
ನಾಟಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ್ಯಾಂಕ್ನೊಳಗೆ ಸ್ಥಾನ
ಕಾರ್ಕಳ( ಜು ,30): ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ್ದು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಆರ್ಕಿಟೆಕ್ಚರ್ ವಿಭಾಗದಲ್ಲಿ ಉನ್ನತ ರ್ಯಾಂಕ್ ಗಳನ್ನು ಗಳಿಸಿದ್ದಾರೆ. ಕ್ರಿಯೇಟಿವ್ ನ ವಿದ್ಯಾರ್ಥಿಗಳಾದ ಭೂಮಿಕಾ ವೈ ರಾಜ್ಯಕ್ಕೆ 38 ನೇ ಸ್ಥಾನ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಉಳಿದಂತೆ ಕ್ರಮವಾಗಿ ವಿದ್ಯಾರ್ಥಿಗಳಾದ, ಪ್ರಣವ್ ಕುಲಕರ್ಣಿ 79, ಸಮೃದ್ ಪಿ .ಶೆಟ್ಟಿ 91, ಪ್ರಾರ್ಥನಾ […]
ಚೆಸ್ ಪಂದ್ಯಾಟ : ಸಾಧನೆ ಮೆರೆದ ಎಚ್ಎಮ್ಎಮ್ ಹಾಗೂ ವಿ.ಕೆ.ಆರ್ ಶಾಲೆಗಳ ವಿದ್ಯಾರ್ಥಿಗಳು
ಕುಂದಾಪುರ ( ಜು ,31): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಶಾಲೆಗಳ ವಿದ್ಯಾರ್ಥಿಗಳು ಸಿದ್ದಾಪುರದ ಜ್ಞಾನ ಸರಸ್ವತಿ ವಿದ್ಯಾಲಯದಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕೃತಿ ಜಿ. ಖಾರ್ವಿ ಪ್ರಥಮ ಸ್ಥಾನ ಪಡೆದಿದ್ದಾರೆ. 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅದ್ಯಾನ ಜಾವೇದ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. 17 […]
ಬಿ. ಬಿ. ಹೆಗ್ಡೆ ಕಾಲೇಜು: ಪ್ರೇರಣಾ ಶಿಬಿರ -‘ನಡವಳಿಕೆ ಹಾಗೂ ಶಿಸ್ತು’ ಕುರಿತು ವಿಶೇಷ ಉಪನ್ಯಾಸ
ಕುಂದಾಪುರ (ಜು.17): ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ದೃಢ ಸಂಕಲ್ಪವನ್ನು ಹೊಂದಬೇಕು, ಉತ್ತಮ ನಡವಳಿಕೆ ಹಾಗೂ ಶಿಸ್ತನ್ನು ಬದುಕಿನಲ್ಲಿ ಅಳವಡಿಸಿಕೊಂಡು ತಮ್ಮ ಹೆತ್ತವರಿಗೆ, ಕಲಿತ ಶಿಕ್ಷಣ ಸಂಸ್ಥೆಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಸಿದ್ದಾಪುರದ ಜ್ಞಾನ ಸರಸ್ವತಿ ಪದವಿ-ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅಮರೇಶ್ ಹೆಗ್ಡೆ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಐಕ್ಯೂಎಸಿ […]
ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆ: ಚೆಸ್ ನಲ್ಲಿ ಮಿಂಚಿದ ಪುಟಾಣಿ ಪ್ರತಿಭೆ ಶ್ರೀನಿತ್
ಕುಂದಾಪುರ( ಜು ,24): ಇಲ್ಲಿನ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಶಾಲೆಯ ವಿದ್ಯಾರ್ಥಿ ಶ್ರೀನಿತ್ ಶೇಟ್ ಕಾರ್ಕಳದಲ್ಲಿ ನಡೆದ ಕರ್ನಾಟಕ ಚೆಸ್ ಅಸೋಸಿಯೇಷನ್ (KCA) ವತಿಯಿಂದ ಆಯೋಜಿಸಲಾದ 12ನೇ ಅಂತರಜಿಲ್ಲಾ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಟೂರ್ನಿಯ ಅಂಡರ್-9 ವಯೋಮಾನದ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ರಾಪಿಡ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಬ್ಲಿಟ್ಜ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ . […]
ಅಂಗನವಾಡಿ ಕೇಂದ್ರಕ್ಕೆ ಸೀಲಿಂಗ್ ಫ್ಯಾನ್ ಮತ್ತು ಕಲಿಕಾ ಪರಿಕರಗಳ ಕೊಡುಗೆ
ಗಂಗೊಳ್ಳಿ(ಜು,24) : ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ವತಿಯಿಂದ ಇಲ್ಲಿನ ಮ್ಯಾಂಗನೀಸ್ ರಸ್ತೆಯ ಅಂಗನವಾಡಿ ಕೇಂದ್ರಕ್ಕೆ ಸೀಲಿಂಗ್ ಫ್ಯಾನ್ ಮತ್ತು ಮಕ್ಕಳಿಗೆ ಕಲಿಕೆಯ ಪರಿಕರಗಳ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಜನಸೇವಾ ಬಳಗದ ಅಧ್ಯಕ್ಷ ಗೋಪಾಲ ಪೂಜಾರಿ, ಉಪಾಧ್ಯಕ್ಷೆ ಮಮತಾ ಪೂಜಾರಿ, ಪ್ರಧಾನ ಕಾರ್ಯದರ್ಶಿ ಹರ್ಷೇಂದ್ರ ಆಚಾರ್ಯ, ನಾಗಭೂಷಣ ಶೇಟ್, ನರೇಂದ್ರ ಎಸ್ ಗಂಗೊಳ್ಳಿ ಮತ್ತು ಅಂಗನವಾಡಿ ಕೇಂದ್ರದ […]
ಸರ್ಕಾರಿ ಪಿ ಯು ಕಾಲೇಜು ಕುಂದಾಪುರ : ಜ್ಯೂನಿಯರ್ ರೆಡ್ಕ್ರಾಸ್ ಘಟಕ ಉದ್ಘಾಟನೆ
ಕುಂದಾಪುರ ( ಜು,24): ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ಇದರ 2026-27 ನೇ ಸಾಲಿನ ಜ್ಯೂನಿಯರ್ ರೆಡ್ಕ್ರಾಸ್ ಘಟಕವನ್ನು ರೆಡ್ಕ್ರಾಸ್ ಘಟಕ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಜ್ಯೂನಿಯರ್ ರೆಡ್ಕ್ರಾಸ್ನ ಉದ್ದೇಶ ಮತ್ತು ಕಾರ್ಯಗಳನ್ನು ಜ್ಯೂನಿಯರ್ ರೆಡ್ಕ್ರಾಸ್ ಸದಸ್ಯರಿಗೆ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ರವರು ವಹಿಸಿದ್ದರು. ರೆಡ್ಕ್ರಾಸ್ ಘಟಕದ ಸದಸ್ಯರು ಜ್ಯೂನಿಯರ್ ರೆಡ್ಕ್ರಾಸ್ […]










