ಶಿವಮೊಗ್ಗ ( ಏ .02): ನಗರದ ಪ್ರತಿಷ್ಠಿತ ರೈನ್ ಬೋ ಸ್ಕಿನ್ ಹೇರ್ ಕ್ಲಿನಿಕ್’ನಲ್ಲಿ ಮಹಿಳೆಯರಿಗಾಗಿ ಕಾಸ್ಮೆಟಿಕ್ ಗೈನಾಕಾಲಜಿ ವಿಭಾಗವನ್ನು ಉದ್ಘಾಟಿಸಲಾಗಿದ್ದು, ನಗರದ ಮಹಿಳೆರಿಗೆ ವಿಶಿಷ್ಠ ಸೇವೆ ನೀಡಲು ಮುಂದಾಗಿದೆ. ಮಹಿಳೆಯರ ಆರೋಗ್ಯ, ಸೌಂದರ್ಯ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಹೊಸ ಘಟಕವನ್ನು ಪ್ರಾರಂಭಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೆಎಎಸ್’ಒಜಿಎ ಮುಖ್ಯ ಪೋಷಕರು, ಎಸ್’ಒಜಿಎಸ್ ಸಂಸ್ಥಾಪಕ ಸದಸ್ಯರು ಹಾಗೂ ಹಿರಿಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರೂ ಆದ ಡಾ.ಎಚ್. ನಾಗರಾಜ್, […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಡಾl ಬಿ.ಬಿ ಹೆಗ್ಡೆ ಕಾಲೇಜು : ಪ್ರಾಕ್ತನ ವಿದ್ಯಾರ್ಥಿಗಳೊಂದಿಗೆ ಸಂವಾದ
ಕುಂದಾಪುರ (ಮಾ. 20): ಇಲ್ಲಿನ ಡಾ ಬಿ .ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ರ್ಯಾಂಕ್ ವಿಜೇತ ಪ್ರಾಕ್ತನ ವಿದ್ಯಾರ್ಥಿಗಳಾದ ಸುಹಾನಿ ಹಾಗೂ ಶ್ರದ್ದಾ ಯವರು ಕಾಲೇಜಿಗೆ ಆಗಮಿಸಿ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಿ. ಬಿ. ಎ ಪದವಿಯ ಪ್ರಯೋಜನಗಳು ಹಾಗೂ ಭವಿಷ್ಯದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗುವ ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾರೈ ಹಾಗೂ […]
ಇನ್ಸ್ಪಾಯರ್ ಅವಾರ್ಡ್ ಗೆ ಸುಜನ್ ಪೂಜಾರಿ ಮತ್ತು ಸಂದೇಶ ಪೂಜಾರಿ ಆಯ್ಕೆ
ಕುಂದಾಪುರ ( ಮಾ .20): ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ (NIF) ಜಂಟಿಯಾಗಿ ಆಯೋಜಿಸುವ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಗೆ ನಾವುಂದದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸುಜನ್ ಪೂಜಾರಿ ಮತ್ತು ಸಂದೇಶ ಪೂಜಾರಿ ಆಯ್ಕೆ ಆಗಿರುತ್ತಾರೆ. ಇವರಿಗೆ ಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸಾವಿತ್ರಿ ಎಸ್ ಇವರು ಮಾರ್ಗದರ್ಶನ ಮಾಡಿದ್ದರು.ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ […]
ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಿ-ಗ್ರೋ 2026 ವಾಣಿಜ್ಯ ಹಬ್ಬ ಸಂಪನ್ನ
ಕುoದಾಪುರ (ಮಾರ್ಚ್ 20): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಿಂದ ಆಯೋಜಿಸಲಾದ ವಿ-ಗ್ರೋ 2026 ಬಿಸಿನೆಸ್ ಡೇ ವಾಣಿಜ್ಯ ಹಬ್ಬವು ಯಶಸ್ವಿಯಾಗಿ ಸಂಪನ್ನಗೊoಡಿತು. ಅಂತಿಮ ಹಾಗೂ ದ್ವಿತೀಯ ಬಿ.ಕಾಂ. ವಿದ್ಯಾರ್ಥಿಗಳಿಗೆ ಆಯೋಜಿಸಿದ ಈ ಅಂತರ್-ತರಗತಿ ಸ್ಪರ್ಧೆಯನ್ನು ಮೂರು ಹಂತಗಳಲ್ಲಿ ಆಯೋಜಿಸಲಾಯಿತು. ಮೊದಲನೇ ಹಂತದಲ್ಲಿ ವ್ಯವಹಾರ ಯೋಜನೆಯ ಪ್ರಸ್ತುತಿ, ಎರಡನೇ ಹಂತದಲ್ಲಿ ವ್ಯವಹಾರ ಮೇಳದ ಭಾಗವಾಗಿ ವಿದ್ಯಾರ್ಥಿಗಳೇ ತಯಾರಿಸಿದ ಉತ್ಪನ್ನಗಳೊಂದಿಗೆ ಇತರ ವಸ್ತುಗಳ ಮಾರಾಟ, ಹಾಗೂ […]
ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಶಾಲೆಗಳಲ್ಲಿ ಭವಿಷ್ಯದ ತಾರೆಗಳ ಮೊದಲ ಪದವಿ ಸಂಭ್ರಮ
ಕುಂದಾಪುರ(ಮಾ.7) : ಮಕ್ಕಳನ್ನು ಮೊಬೈಲ್ ದಾಸರನ್ನಾಗಿ ಮಾಡಬೇಡಿ, ಸಾಧ್ಯವಾದಷ್ಟು ಅವರನ್ನು ಹೊರಗಡೆ ಆಟವಾಡಲು ಬಿಡಿ, ಆಟವಾಡುವಾಗ ಎದ್ದು ಬಿದ್ದು ಕಲಿತ ಪಾಠವೇ ಅವರ ಜೀವನವನ್ನು ರೂಪಿಸಬಲ್ಲುದೇ ಹೊರತು ಮೊಬೈಲ್ ನೋಡುವುದರಿಂದ ಅಲ್ಲ, ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿಶ್ರೀ ಪವನ್ ಕುಮಾರ್ ಶೆಟ್ಟಿ ಹೇಳಿದರು. ಅವರು ಕುಂದಾಪುರ ಎಜುಕೇಶನ್ ಸೊಸೈಟಿ (ರಿ) ಪ್ರವರ್ತಿತ ಎಚ್. ಎಮ್. ಎಮ್. ಪೂರ್ವ ಪ್ರಾಥಮಿಕ ವಿಭಾಗದ ʼಗ್ರ್ಯಾಜುಯೇಷನ್ ಡೇ ʼಯ ಮುಖ್ಯ ಅತಿಥಿಯಾಗಿ ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರ ವನ್ನು […]
ಬಿ.ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಂದ ಅಧ್ಯಯನ ಭೇಟಿ
ಕುಂದಾಪುರ (ಮಾರ್ಚ್ 7): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ಕೋಟದಲ್ಲಿರುವ ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಭೇಟಿ ನೀಡಿದರು. ವಿದ್ಯಾರ್ಥಿಗಳು ಥೀಮ್ ಪಾರ್ಕ್ ನಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳ ಕುರಿತು ಮಾಹಿತಿ ಪಡೆದರು. ಕಾರಂತರ ಸಾಹಿತ್ಯ ಕೃಷಿಯ ಕುರಿತು ಉಪನ್ಯಾಸಕರ ಜೊತೆ ಸಂವಾದ ನಡೆಸಿದರು. ಈ ಸಂದರ್ಭ ಸಂಸ್ಥೆಯ ಉಪ-ಪ್ರಾಂಶುಪಾಲ […]
ಬಿ. ಬಿ. ಹೆಗ್ಡೆ ಕಾಲೇಜು: ಮಾರ್ಚ್ 14 ರಿಂದ ‘ವಿ-ಗ್ರೋ’ಬ್ಯುಸಿನೆಸ್ ಡೇ
ಕುಂದಾಪುರ (ಮಾರ್ಚ್ 09): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಿ-ಗ್ರೋ ಬ್ಯುಸಿನೆಸ್ ಡೇ ಕಾರ್ಯಕ್ರಮ ಮಾರ್ಚ್ 14, 17 ಮತ್ತು 20 ರಂದು ಮೂರು ಹಂತದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಜೊತೆಗೆ, ಉದ್ಯಮಶೀಲತಾ ಕೌಶಲ್ಯಗಳನ್ನು ಬೆಳೆಸಿಕೊಂಡು ಜಾಗತಿಕ ಮಾರುಕಟ್ಟೆಯ ಪ್ರಾಯೋಗಿಕ ಜ್ಞಾನವನ್ನು ಪಡೆದರೆ ಭವಿಷ್ಯದಲ್ಲಿ ದೊಡ್ಡ ಉದ್ಯಮಿಗಳಾಗಬಹುದು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮೊದಲನೇ ಹಂತ ವ್ಯವಹಾರ […]
ರಾಷ್ಟ್ರ ಮಟ್ಟದ UCEED ಪರೀಕ್ಷೆ-ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿಗೆ 179 ರ್ಯಾoಕ್
ಹೆಮ್ಮಾಡಿ(ಮಾ.10) : ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಐಐಟಿ ಬಾಂಬೆ ನಡೆಸುವ ಬ್ಯಾಚುಲರ್ ಆಫ್ ಡಿಸೈನ್ (B.Des) ಕೋರ್ಸ್ ಪ್ರವೇಶ ಪಡೆಯಲು ನಡೆಯುವ ಯುಸೀಡ್ (UCEED) 2026 ಪ್ರವೇಶ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ಸುಜಲ್ ತೋಳಾರ್ ಅಮೋಘ ಸಾಧನೆ ಮಾಡಿದ್ದಾರೆ. ಜನವರಿ 2026 ರಲ್ಲಿ ನಡೆದ ಈ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಸುಜಲ್ ತೋಳಾರ್ ಪ್ರಥಮ ಪ್ರಯತ್ನದಲ್ಲೇ ರಾಷ್ಟ್ರಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 179ನೇ Rank ಪಡೆದು […]
ಪದವಿ ಫಲಿತಾಂಶ : ಬಿ. ಬಿ. ಹೆಗ್ಡೆ ಕಾಲೇಜಿಗೆ 4 ರ್ಯಾಂಕ್ ಗಳು
ಕುಂದಾಪುರ (ಮಾ.03): ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಯಲ್ಲಿ ಒಟ್ಟು 4 ರ್ಯಾಂಕ್ಗಳನ್ನು ಗಳಿಸುವ ಮೂಲಕ ಉತ್ಕೃಷ್ಟ ಸಾಧನೆಗೈದಿದ್ದಾರೆ. ಕೊಲ್ಲೂರು ಸಮೀಪದ ಮುದೂರಿನ ಶ್ರೀ ಶೀನ ಪೂಜಾರಿ ಹಾಗೂ ಶ್ರೀಮತಿ ವಿಶಾಲು ದಂಪತಿಗಳ ಪುತ್ರಿ ಶ್ರೇಯಾ ಬಿ.ಕಾಂ. ಪದವಿಯಲ್ಲಿ 2ನೇ ರ್ಯಾಂಕ್, ಕೋಣಿಯ ಶ್ರೀ ಶಂಕರ್ ಮೊಗವೀರ ಹಾಗೂ […]
ಸಿಎ ಅಂತಿಮ ಪರೀಕ್ಷೆಯಲ್ಲಿ ಅಕ್ಷಯ ಶೆಟ್ಟಿ ಉತ್ತೀರ್ಣ
ಕುಂದಾಪುರ ( ಮಾ .02): ದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ ನೆಡೆಸಿದ 2026 ರ ಸಿಎ ಅಂತಿಮ ಪರೀಕ್ಷೆಯಲ್ಲಿ ಹುಂಚನಿ ಹೆಮ್ಮಕ್ಕಿ ವಸಂತಿ ಶೆಟ್ಟಿ ಮತ್ತು ಉಳ್ಳೂರು 74 ರ ಕರುಣಾಕರ ಶೆಟ್ಟಿಯವರ ಪುತ್ರ ಅಕ್ಷಯ ಶೆಟ್ಟಿ ಯವರು ಉತ್ತೀರ್ಣರಾಗಿರುತ್ತಾರೆ. ಇವರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಹಿಂದಿನ ವಿದ್ಯಾರ್ಥಿ










