ಕೊಲ್ಲೂರು( ಜ ,19) : ಸಿಗಂದೂರು ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ 69ನೇ ನ್ಯಾಶನಲ್ ಸ್ಕೋಲ್ ಗೇಮ್ಸ್ 2025-26ರ ನೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕವನ್ನು ಗಳಿಸಿದ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಗಣೇಶ್ ಕೆ ಆರ್ (ಕರ್ನಾಟಕ ತಂಡದ ನಾಯಕ), ನಿರೂಪ್ ಪಿ, ದಿಗಂತ್ ಎಂ.ಡಿ, ರೋಹಿತ್ ಸಿ.ಕೆ, ಯಶಸ್ ಎಂ.ಕೆ ಹಾಗೂ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಜಿ.ಬಿ, ದೈಹಿಕ ಶಿಕ್ಷಣ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಜನತಾ ಪಿಯು ಹೆಮ್ಮಾಡಿ: ರೆಡ್ ಕ್ರಾಸ್ ಕಾರ್ಯಗಾರ
ಹೆಮ್ಮಾಡಿ(ಜ .19): ರೆಡ್ ಕ್ರಾಸ್ ಮಾನವೀಯನೆಲೆಯಲ್ಲಿ ಕೆಲಸ ಮಾಡುವ ದೊಡ್ಡ ಸಂಸ್ಥೆ, ಬೇರೆ ಸಂಸ್ಥೆಗಳಿಂದ ಭಿನ್ನವಾಗಿರುವ ರೆಡ್ ಕ್ರಾಸ್ ದೇಶದ ಉದ್ದಗಲಕ್ಕೂ ಹಲವಾರು ಜನಪರ, ಜನಹಿತ ಕಾರ್ಯಗಳನ್ನು ಮಾಡಿದೆ, ರೆಡ್ ಕ್ರಾಸ್ ಸಂಸ್ಥೆಯ ತತ್ವವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲ್ಲೂಕು ಘಟಕದ ಚೇರ್ ಮೆನ್ ಜಯಕರ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲ್ಲೂಕು ಘಟಕ, […]
ಸುಣ್ಣಾರಿ : ವಿವೇಕೋತ್ಸವ
ಕೋಟೇಶ್ವರ ( ಜ .05): ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಹೊಂಬಾಡಿ-ಮಂಡಾಡಿ (ಸುಣ್ಣಾರಿ) ಇದರ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಶಾಲಾ ವಿವೇಕೋತ್ಸವ ಹಾಗೂ ಶಾಲಾ ಸಂಸ್ಥಾಪಕರಾದ ಕಾಪು ಸಂಜೀವ ಶೆಟ್ಟರ 110 ನೇ ಜನುಮ ದಿನದ ಆರದ ನೆನಪು ಹಾಗೂ ಶಾಲಾ ಸಂಚಾಲಕರಾದ ಸುಣ್ಣಾರಿ ದಿನಕರ ಶೆಟ್ಟರ 5 ನೇ ಪುಣ್ಯ ಸ್ಮರಣೆ ಆಚರಣೆಯು ಕುಂದಾಪುರ ವಿಧಾನ ಸಭಾ ಸದಸ್ಯರಾದ ಕಿರಣ ಕುಮಾರ […]
ಗೋಪಾಡಿ: ಜ.25,26 ರಂದು ಶ್ರೀ ಮಲಸಾವರಿ ಪಂಜುರ್ಲಿ ಪರಿವಾರ ದೈವಸ್ಥಾನದ 12 ನೇ ವಾರ್ಷಿಕ ವರ್ಧಂತ್ಯುತ್ಸವ
ಗೋಪಾಡಿ(ಜ.11): ಕುಂದಾಪುರ ತಾಲೂಕು ಗೋಪಾಡಿ (ಪಡು) ಗ್ರಾಮದ ಶ್ರೀ ಮಲಸಾವರಿ ಪಂಜುರ್ಲಿ(ಹೆಣ್ಣು ದೈವದ ಮನೆ ) ಹಾಗೂ ಪರಿವಾರ ದೈವಸ್ಥಾನದ 12ನೇ ವರ್ಷದ ವರ್ಧಂತ್ಯುತ್ಸವ ಜನವರಿ 25ರ ಆದಿತ್ಯವಾರ ಹಾಗೂ 26 ರ ಸೋಮವಾರದಂದು ನಡೆಯಲಿದೆ. ತಾ. 25-01-2026ನೇ ಆದಿತ್ಯವಾರ ಸಂಜೆ ಗಂಟೆ 4.00ಕ್ಕೆ ಅಯ್ಯಪ್ಪ ಸ್ವಾಮಿ ಭಕ್ತವೃಂದ, ಗೋಪಾಡಿ (ಪಡು) ಇವರಿಂದ ಶ್ರೀ ಮಲಸಾವರಿ ಅಮ್ಮನವರಿಗೆ ಬೆಳ್ಳಿ ಮುಖವಾಡವನ್ನು ಶ್ರೀ ಚಿಕ್ಕು ಅಮ್ಮ ದೈವಸ್ಥಾನದಿಂದ ಪುರಮೆರವಣಿಗೆಯಲ್ಲಿ ಸಾಗಿ ಸಮರ್ಪಿಸಲಾಗುತ್ತದೆ. […]
ಬೆಂಗಳೂರು: ಕ್ಯಾಟರಿಂಗ್, ಹೋಟೆಲ್ ಹಾಗೂ ಬೇಕರಿ ಕಾರ್ಮಿಕರಿಗೆ ಕ್ರಿಕೆಟ್ ಪಂದ್ಯಾಟ
ಬೆಂಗಳೂರು (ಜ. 07): ಇಲ್ಲಿನ ಬಸವೇಶ್ವರ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಸಂದೀಪ್ ನಾಯರಿ ನೇತೃತ್ವದಲ್ಲಿ ಕ್ಯಾಟರಿಂಗ್, ಹೋಟೆಲ್, ಬೇಕರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಮ್ಮಿಲನ ಟ್ರೋಫಿ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾಟ ವನ್ನು ಇತ್ತೀಚೆಗೆ ಆಯೋಜಿಸಲಾಯಿತು. ಈ ಪಂದ್ಯಟದವನ್ನು ತುರುವೆಕೆರೆ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡರಾದ ಶ್ರೀ ಎಂ.ಡಿ.ಲಕ್ಷ್ಮೀನಾರಾಯಣ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಯಕರ್ನಾಟಕ ಮುಖಂಡರಾದ ಪ್ರವೀಣ್ ಶೆಟ್ಟಿ […]
ಕನ್ನಡ ಭಾಷಣ ಸ್ಪರ್ಧೆ : ಕ್ರಿಯೇಟಿವ್ ಕಾಲೇಜಿನ ಆದ್ಯ ಎಸ್. ಪಡ್ರೆ ರಾಜ್ಯ ಮಟ್ಟಕ್ಕೆ ಆಯ್ಕೆ
ಕಾರ್ಕಳ( ಜ ,05): ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಹೆಬ್ರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿತು. ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಸ್ಪರ್ಧೆಗಳಲ್ಲಿನ ಕನ್ನಡ ಭಾಷಣ ವಿಭಾಗದಲ್ಲಿ ಕ್ರಿಯೇಟಿವ್ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆದ್ಯ ಎಸ್. ಪಡ್ರೆ ಅವರು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ […]
ಕೊಂಕಣಿ ಕಂಠಪಾಠ ಸ್ಪರ್ಧೆ : ಸನ್ನಿಧಿ ಖಾರ್ವಿ ದ್ವಿತೀಯ ಸ್ಥಾನ
ಉಡುಪಿ ( ಜ ,03): ಹೆಬ್ರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಪ್ರಾಥಮಿಕ ವಿಭಾಗದ ಕೊಂಕಣಿ ಕಂಠಪಾಠ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಸನ್ನಿಧಿ ಖಾರ್ವಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಅರುಣ್ ಖಾರ್ವಿ ಹಾಗೂ ಭವಾನಿ ಖಾರ್ವಿ ದಂಪತಿಯ ಪುತ್ರಿ.
ಅಂತರ್ ಜಿಲ್ಲಾ ಮಟ್ಟದ ಅತ್ಲೇಟಿಕ್ ಚಾಂಪಿಯನ್ ಶಿಪ್ : ಕುಂದಾಪುರ ಟ್ರ್ಯಾಕ್ & ಫೀಲ್ಡ್ ಸಂಸ್ಥೆಯ ಕ್ರೀಡಾ ಪಟುಗಳಿಂದ ಉತ್ತಮ ಸಾಧನೆ
ಉಡುಪಿ(ಡಿ.29): ಜಿ ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದಲ್ಲಿ ಇತ್ತೀಚೆಗೆ ನಡೆದ ಅಂತರ್ ಜಿಲ್ಲಾ ಮಟ್ಟದ ಅತ್ಲೇಟಿಕ್ ಚಾಂಪಿಯನ್ಶಿಪ್ ನ 14 ವಯೋಮಿತಿಯ ಹುಡುಗರ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಕುಂದಾಪುರ ಟ್ರ್ಯಾಕ್ & ಫೀಲ್ಡ್ ಕ್ರೀಡಾ ಸಂಸ್ಥೆಯ ಕ್ರೀಡಾ ಪಟು ಹಾಗೂಓಕ್ ವುಡ್ ಇಂಡಿಯನ್ ಸ್ಕೂಲ್ ಕುಂದಾಪುರ ಇಲ್ಲಿನ ವಿದ್ಯಾರ್ಥಿ ಧನ್ವಿನ್ ಆರ್ ಪೂಜಾರಿ ಬೆಳ್ಳಿ ಪದಕ ಹಾಗೂ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನ ಸಿದ್ಧಾರ್ಥ್ ಬಿ […]
ಜ.14 ಮತ್ತು 15 ರಂದು ಶ್ರೀ ಹಾಡಿಗರಡಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ
ಕುಂದಾಪುರ (ಜ. 03): ತಾಲೂಕಿನ ನಾಡದ ಶ್ರೀ ಹಾಡಿಗರಡಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು 2026 ರ ಜನವರಿ 14 ಮತ್ತು 15ರಂದು ನಡೆಯಲಿದೆ. ಜ.14 ಮಂಗಳವಾರ ಬೆಳಿಗ್ಗೆ ಸಮಯ 12ಕ್ಕೆ ಮಂಗಳಾರತಿ, ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, 7.30ಕ್ಕೆ ದೈವದರ್ಶನ, ಗೆಂಡಸೇವೆ, 8 ಗಂಟೆಗೆ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, 9.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾವಂತ […]
ಡಾ.ಬಿ. ಬಿ ಹೆಗ್ಡೆ ಕಾಲೇಜು : ಯುವ ರೆಡ್ ಕ್ರಾಸ್ ಘಟಕದಿಂದ ರಕ್ತ ನಿಧಿ ಗೆ ಶೈಕ್ಷಣಿಕ ಭೇಟಿ
ಕುಂದಾಪುರ( ಡಿ.12): ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಲ್ಲಿ ರಕ್ತದಾನದ ಮಹತ್ವವನ್ನು ಅರಿವು ಮೂಡಿಸುವ ಉದ್ದೇಶದಿಂದ ಕುಂದಾಪುರ ರಕ್ತ ನಿಧಿಗೆ ಅಧ್ಯಯನ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಕ್ತ ಸಂಗ್ರಹಣೆ, ರಕ್ತದ ಸಂರಕ್ಷಣೆ, ಅದರ ಪರೀಕ್ಷಾ ವಿಧಾನ ಹಾಗೂ ರಕ್ತ ಘಟಕಗಳ ಪ್ರಕ್ರಿಯೆಗಳ ಕುರಿತು ಸಿಬ್ಬಂದಿಯಾದ ಶ್ರೀ ವೀರೇಂದ್ರ ವಿವರವಾದ ಮಾಹಿತಿ ನೀಡಿ, ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು […]










