ಪುತ್ತೂರು(ಫೆ. 03): ತಾಲೂಕಿನ ಪೋಳ್ಯ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠದ ರಥೋತ್ಸವವು ಫೆಬ್ರವರಿ 4ರಂದು ವಿಜೃಂಭಣೆಯಿಂದ ನಡೆಯಲಿದೆ. ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯ”ಎರಡನೇ ತಿರುಪತಿ” ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.ಇಲ್ಲಿ ಪ್ರಧಾನ ದೇವರು ಶ್ರೀ ಲಕ್ಷ್ಮೀ ವೆಂಕಟ್ರಮಣ, ಜೊತೆಗೆ ಭವಾನಿಶಂಕರ, ದೇವಿ, ಮತ್ತು ಮೂರು ವಿಭಿನ್ನ ಶಕ್ತಿಯುಳ್ಳ ಗಣಪತಿ ಸೇರಿದಂತೆ ಪಂಚ ದೇವತೆಗಳನ್ನು ಆರಾಧಿಸಲಾಗುತ್ತದೆ. ಸ್ಥಳ ದೈವಗಳಾಗಿ ಧೂಮಾವತಿ ಮತ್ತು ಗುಳಿಗ ದೈವಗಳೂ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಬ್ರಹ್ಮಾವರ: ಅಭಿಮತ ಸಂಭ್ರಮ ಕಚೇರಿ ಉದ್ಘಾಟನೆ
ಬ್ರಹ್ಮಾವರ(ಫೆ,02): ಅಭಿಮತ ಸಂಭ್ರಮ ಈ ಬಾರಿ ಬ್ರಹ್ಮಾವರದಲ್ಲಿ ಆಕೃತಿಗೊಳ್ಳುತ್ತಿರುವುದು ಸಂತಸ ತಂದಿದೆ. ಅಭಿಮತ ಸಂಭ್ರಮದ ಕಂಪು ರಾಜ್ಯ ಹಾಗೂ ದೇಶ ಮಟ್ಟದಲ್ಲಿಯೂ ಪಸರಿಸಲಿ ಎಂದು ನೀಲಾವರ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿಯವರು ಶುಭ ಹಾರೈಸಿದರು. ಅಭಿಮತ ಸಂಭ್ರಮವನ್ನು ಹೊಸ ಬಗೆಯ ಸಾಧ್ಯತೆಯೊಂದಿಗೆ ಬ್ರಹ್ಮಾವರದಲ್ಲಿ ವಿನೂತನವಾಗಿ ಆಯೋಜಿಸುವ ಕುರಿತು ಬ್ರಹ್ಮಾವರದ ಸ್ವರ್ಣ ನಗರದಲ್ಲಿ ಫೆಬ್ರವರಿ 02 ರಂದು ಹಮ್ಮಿಕೊಂಡ ಅಭಿಮತ ಸಂಭ್ರಮದ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ […]
ರಾಷ್ಟ್ರಮಟ್ಟದ ಈಜು ಸ್ಪರ್ಧೆ : ಶಿಕ್ಷಕ ನಾಗರಾಜ ಖಾರ್ವಿಯವರಿಗೆ ಕಂಚಿನ ಪದಕ
ಕುಂದಾಪುರ( ಫೆ.02): ತಪಸ್ಯ ಫೌಂಡೇಶನ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಐ.ಡಿ.ಎಫ್.ಸಿ. ಫಸ್ಟ್ ಬ್ಯಾಂಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಟ್ರೆಯಥ್ಲಾನ್ ಸ್ಪರ್ಧೆಯ ಒಂದು ಕಿ.ಮೀ. ಸಮುದ್ರ ಈಜು ವಿಭಾಗದಲ್ಲಿ ಮುಲ್ಲಕಾಡು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಪ್ರಾಥಮಿಕ ಶಿಕ್ಷಕ ನಾಗರಾಜ ಖಾರ್ವಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು, ಬೀಗ ಜಡಿದು ಸಮುದ್ರದಲ್ಲಿ ಈಜಿದ […]
ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆ : ಜ್ಞಾಪಕ ಶಕ್ತಿ ಕಾರ್ಯಾಗಾರ
ಕುಂದಾಪುರ (ಫೆ.01): ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ಆಸಕ್ತಿ ಮತ್ತು ಆಳವಾದ ಚಿಂತನೆ ಇರಬೇಕು, ಕೇವಲ ಪರೀಕ್ಷೆಗಾಗಿ ಅಭ್ಯಾಸ ಮಾಡಬಾರದು. ಜ್ಞಾನಕ್ಕಾಗಿ ಓದಿದರೆ, ಜ್ಞಾಪಕ ಶಕ್ತಿ ಹೆಚ್ಚಾಗಿರುತ್ತದೆ ಎಂದು ಮೈಂಡ್ ಪವರ್ ಲರ್ನಿಂಗ್ ಸಂಸ್ಥೆಯ ಸ್ಥಾಪಕರು ಹಾಗೂ ನಿರ್ದೇಶಕರೂ ಆಗಿರುವ ಎಸ್. ಪ್ರಶಾಂತ್ ತಿಳಿಸಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಆಯೋಜಿಸಿದ […]
ಕೋಟದಲ್ಲಿ ಕಲೋತ್ಸವ ಉದ್ಘಾಟನೆ
ಕೋಟ (ಜ,31): “ಇಂದಿನ ಕಾಲ ಘಟ್ಟದಲ್ಲಿ ಯುವ ಜನತೆ ಕಲೆ ಸಾಹಿತ್ಯದತ್ತ ಆಸಕ್ತಿವಹಿಸಬೇಕಾದ ಅಗತ್ಯವಿದೆ. ಮಕ್ಕಳಲ್ಲಿ ಬಿತ್ತಿದ ಬೀಜ ಮುಂದೆ ಒಳ್ಳೆಯ ಬೆಳೆಯಾಗಿ ಬೆಳೆಯಲಿದೆ. ಸಾಲಿಗ್ರಾಮ ಮಕ್ಕಳ ಮೇಳ ಸುಮಾರು ಐವತ್ತು ವರ್ಷಗಳಿಂದ ಕೋಟ ಪರಿಸರದ ಮಕ್ಕಳಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿರುವುದು ಅಭಿನಂದನೀಯ. ಎರಡು ದಿನಗಳ ಕಲೋತ್ಸವ ಯಶಸ್ವಿಯಾಗಲಿ” ಎಂದು ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿಯವರು ಹೇಳಿದರು. ಕೋಟ ಪಟೇಲರ ಮನೆಯಲ್ಲಿ ಆಯೋಜಿಸಿದ ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ […]
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ: ಎಂ ಬಿ ಎ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ
ಕುಂದಾಪುರ(ಫೆ.01): ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂ ಬಿ ಎ ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ವಿಷಯದ ಕುರಿತಾಗಿ ವಿಶೇಷ ತರಬೇತಿ ಕಾರ್ಯಕ್ರಮ ಜನವರಿ 29 ರಂದು ಆಯೋಜಿಸಲಾಗಿತ್ತು . ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನಿಟ್ಟೆಯ ಪ್ರೊಫೆಸರ್ ಡಾ. ನಿಧೀಶ್ ರಾವ್ ಇವರು ಡಿಜಿಟಲ್ ಮಾರ್ಕೆಟಿಂಗ್ ಕುರಿತಾಗಿ ಮಾರ್ಗದರ್ಶನ ನೀಡಿದರು ,ಡಿಜಿಟಲ್ ಮಾರ್ಕೆಟಿಂಗ್ ಮಹತ್ವ, ಎಸ್ ಇ ಒ ತಂತ್ರಗಳು,ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್,ಪೇ ಪರ್ […]
ಫೆ.01 ರಿಂದ ಕಲರ್ಸ್ ಕನ್ನಡದಲ್ಲಿ ‘ಬಾಯ್ಸ್ v/s ಗರ್ಲ್ಸ್’ ಹಾಗೂ ‘ಮಜಾ ಟಾಕೀಸ್’ ಶೋಗಳು
ಮಂಗಳೂರು(ಫೆ,1 ): ಟಿವಿ ಚಾನೆಲ್ ಕಲರ್ಸ್ ಕನ್ನಡವು ಎರಡು ಹೊಸ ರಿಯಾಲಿಟಿ ಶೋಗಳನ್ನು ಪ್ರಾರಂಭಿಸುತ್ತಿದೆ. ‘ಬಾಯ್ಸ್ v/s ಗರ್ಲ್ಸ್’ ಎಂಬ ಗೇಮ್ ಶೋ ಮತ್ತು ಕಚಗುಳಿಯಿಟ್ಟು ನಗಿಸುವ ‘ಮಜಾ ಟಾಕೀಸ್’ ಶೋಗಳು ಫೆಬ್ರವರಿ .1ರಿಂದ ಪ್ರಸಾರ ಆರಂಭಿಸಲಿವೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ‘ಬಾಯ್ಸ್ ವಿ/ಎಸ್ ಗರ್ಲ್ಸ್’ ಹಾಗೂ ರಾತ್ರಿ 9 ಗಂಟೆಗೆ ʼಮಜಾ ಟಾಕೀಸ್ʼ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ. ಹೊಸ ರೀತಿಯ ರಿಯಾಲಿಟಿ ಶೋಗಳಿಗೆ ಕಲರ್ಸ್ […]
ಶ್ರೀ ಹೋರ್ ಬೊಬ್ಬರ್ಯ ,ಕಲ್ಲುಕುಟ್ಟಿಗ ಸಪರಿವಾರ ದೈವಸ್ಥಾನ ಕಮ್ಮರ್ ಕಲ್ಲು : ಪುನರ್ ಪ್ರತಿಷ್ಠಾಪನೆ ಕಲಶಾಭಿಷೇಕ ಮತ್ತು ನವೀಕೃತ ಶಿಲಾಮಯ ಗರ್ಭಗುಡಿಯ ಲೋಕಾರ್ಪಣೆ
ಕುಂದಾಪುರ (ಫೆ,01): ಶ್ರೀ ಹೋರ್ ಬೊಬ್ಬರ್ಯ ,ಕಲ್ಲುಕುಟ್ಟಿಗ ಸಪರಿವಾರ ದೈವಸ್ಥಾನ ಕಮ್ಮರ್ ಕಲ್ಲು, ಇಡೂರು ಕುಂಜ್ಞಾಡಿ ಈ ದೈವಸ್ಥಾನದ ಪುನರ್ ಪ್ರತಿಷ್ಠಾಪನೆ ಕಲಶಾಭಿಷೇಕ ಮತ್ತು ನವೀಕೃತ ಶಿಲಾಮಯ ಗರ್ಭಗುಡಿಯ ಲೋಕಾರ್ಪಣೆ ಕಾರ್ಯಕ್ರಮ ಇದೇ ಫೆಬ್ರವರಿ 2ರಿಂದ 4 ರ ತನಕ ನಡೆಯಲಿದೆ. ಆ ಪ್ರಯುಕ್ತ ಧೈವಿಕ,ಧಾರ್ಮಿಕ, ಸಾಂಸ್ಕೃತಿಕ,ಅನ್ನ ಪ್ರಸಾದ, ಸಭಾ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಯಲಿದೆ. ಸಧ್ವಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ನಂಬಿದವರ ಮತ್ತು ಗ್ರಾಮಸ್ಥರ ಪರವಾಗಿ ಆಡಳಿತ ಮೊಕ್ತೆಸರಾದ […]
ಕಲರ್ಸ್ ಕನ್ನಡ ಚಾನೆಲ್ ನ ಎರಡು ಹೊಸ ಧಾರಾವಾಹಿಗಳು…
ಮಂಗಳೂರು(ಜ. 29): ಕನ್ನಡ ವೀಕ್ಷಕರ ಮನಸ್ಸಿಗೆ ಲಗ್ಗೆಯಿಡುವ ಕಥೆಗಳನ್ನು ಹೇಳುತ್ತಾ ಬಂದಿರುವ ಪ್ರತಿಷ್ಟಿತ ಕಲರ್ಸ್ ಕನ್ನಡ ಚಾನೆಲ್ ಮತ್ತೆರೆಡು ಹೊಸ ಧಾರಾವಾಹಿಗಳನ್ನು ನಿಮ್ಮ ಮುಂದೆ ತರಲು ಸಜ್ಜಾಗಿದೆ. ‘ವಧು’ ಮತ್ತು ‘ಯಜಮಾನ’ ದೈನಿಕ ಧಾರಾವಾಹಿಗಳು ಜನವರಿ 27ರಂದು ಜೋಡಿ ಕಥೆಗಳಾದ ಡಿವೋರ್ಸ್ ಲಾಯರ್ ಮದುವೆ ಕಥೆ ‘ವಧು’ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಕಾಂಟ್ರಾಕ್ಟ್ ಮದುವೆಯ ಕಥೆ ‘ಯಜಮಾನ’ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ಸಂಬಂಧಗಳನ್ನು ಪ್ರೀತಿಸುವ ಹಾಗೂ ಗೌರವಿಸುವ ‘ವಧು’ […]
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ 76ನೇ ಗಣರಾಜ್ಯೋತ್ಸವ
ಕುಂದಾಪುರ (ಜ.26): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ. ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಇಂದು ಭಾರತದ 76ನೇ ಗಣರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಸಂಸ್ಥೆಯ ಅಕಾಡೆಮಿಕ್ ಕೋ ಆರ್ಡಿನೇಟರ್ ಆಗಿರುವ ಶ್ರೀಮತಿ ವಿಲ್ಮಾ ಡಿ.ಸಿಲ್ವ, ಮಹಾತ್ಮಾ ಗಾಂಧೀಜಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೆ […]










