ಉಡುಪಿ (ಸೆ,20): ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವಿದ್ಯಾರ್ಥಿಗಳಾದ ನವೀನ್ ಹೆಗ್ಡೆ, ಹರ್ಷವರ್ಧನ ಎನ್. ಸೌರವ್ .ಕೆ ,ಮಹಮ್ಮದ್ ನೌಫಾಲ್ ರವರು ಅಭಿವೃದ್ಧಿ ಪಡಿಸಿದ ಮಣ್ಣಿನ ತೇವಾಂಶ ಹಾಗೂ ತೇವಾಂಶ ಹಿಡಿದಿಡುವ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ ಉಪಯೋಗಿಸಿ ಅಳೆಯುವ ಸಾಧನಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ “ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ” ದೊರಕಿದೆ. ಸಿವಿಲ್ ವಿಭಾಗದ ಪ್ರೊ. ಸುನಿಲ್ ಹಲ್ದಂಕರ್ ಹಾಗೂ […]
Category: ರಾಜ್ಯ ಸುದ್ದಿ
ಸುದ್ದಿ ಸಮಾಚಾರ — > ರಾಜ್ಯ ಸುದ್ದಿ
ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತ ನೀತಿ – ಡಾ. ಕರುಣಾಕರ್. ಎ.ಕೋಟೆಗಾರ್
ಕುಂದಾಪುರ (ಸೆ,16): ರಾಷ್ಟ್ರೀಯ ಶಿಕ್ಷಣ ನೀತಿ 2021 – 22 ವಿದ್ಯಾರ್ಥಿ ಕೇಂದ್ರಿತ ನೀತಿಯಾಗಿದ್ದು, ಇದರಲ್ಲಿನ ಪ್ರತಿ ಅಂಶವನ್ನೂ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ರೂಪಿಸಲಾಗಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಆಸಕ್ತಿ-ಕೌಶಲ್ಯ ಆಧಾರಿತ ಕಲಿಕೆ ಹಾಗೂ ದೇಶದ ಮಾನವ ಸಂಪನ್ಮೂಲದ ಸದ್ಬಳಕೆ ನಿಜಾರ್ಥದಲ್ಲಿ ಆಗಲಿದೆ ಎಂದು ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಕರುಣಾಕರ ಕೊಟೇಗಾರ್ ಹೇಳಿದರು. ಅವರು ಗುರುವಾರ ಕುಂದಾಪುರದ ಡಾ. […]
ಮಲ್ಪೆ: ಮೀನುಗಾರರ ತುರ್ತು ಆರೋಗ್ಯ ಸೇವೆಗೆ ಕೆಪಿಸಿಸಿ ವತಿಯಿಂದ ಆಂಬುಲೆನ್ಸ್ ಸೇವೆ -ಹಸ್ತಾಂತರ ಕಾರ್ಯಕ್ರಮ
ಮಲ್ಪೆ (ಸೆ,11): ಕೆಪಿಸಿಸಿ ವತಿಯಿಂದ ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರಾದ ಮಲ್ಪೆಯ ಮೀನುಗಾರರ ತುರ್ತು ಆರೋಗ್ಯ ಸೇವೆಗೆ ಆಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು .ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಮಲ್ಪೆಗೆ ಹಿಂದೊಮ್ಮೆ ಆಗಮಿಸಿದಾಗ ಮೀನುಗಾರ ಸಮುದಾಯದವರು ಆಂಬ್ಯುಲೆನ್ಸ್ನ ಬೇಡಿಕೆ ಇಟ್ಟಿದ್ದರು. ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಭವನದ ಮುಂಭಾಗ ಆಂಬುಲೆನ್ಸ್ ನ ಕೀಯನ್ನು ಮಲ್ಪೆಯ ಸಮಾಜ ಸೇವಕ […]
ಗಣೇಶ್ ಗಂಗೊಳ್ಳಿ ಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
ಕುಂದಾಪುರ (ಸೆ.2): ಕನ್ನಡ ನಾಡಿನ ಖ್ಯಾತ ಜಾನಪದ ಗಾಯಕ, ಜಾನಪದ ಚಿಂತಕ ಹಾಗೂ ಸಂಘಟಕ ಕುಂದಾಪುರ ಮೂಲದ ಗಣೇಶ್ ಗಂಗೊಳ್ಳಿ ಯವರಿಗೆ ತಮಿಳುನಾಡಿನ ಪ್ರತಿಷ್ಠಿತ ಇಂಡಿಯನ್ ಎಂಪೆಯರ್ ವಿಶ್ವ ವಿದ್ಯಾಲಯ ಹಾಗೂ ಯುನಿವರ್ಸಲ್ ಅಕಾಡೆಮಿಕ್ ಕೌನ್ಸಿಲ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಆಗಸ್ಟ್ 28ರಂದು ತಮಿಳುನಾಡಿನ ಹೊಸೂರು ಕ್ಲಾರೇಶ್ವ ಸಭಾಂಗಣದಲ್ಲಿ ಗೌರವ ಡಾಕ್ಟರೇಟ್ ನ್ನು ಪ್ರಧಾನ ಮಾಡಲಾಯಿತು .ಯು ಜಿ ಸಿ ವೈಸ್ ಚೇರ್ಮನ್ ಡಾ.ಕೆ ಪ್ರಭಾಕರ್ , […]
ಧಾರವಾಡ : ಕೋಚ್ ಆರ್.ಎಸ್ ಮೊಕಾಶಿ ಯವರ ಹುಟ್ಟುಹಬ್ಬದ ಸಂಭ್ರಮಾಚರಣೆ
ಧಾರವಾಡ (ಆ, 24)) : ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ದ ಬಾಸ್ಕೆಟ್ ಬಾಲ್ ಕೋಚ್ ಆರ್.ಎಸ್ ಮೊಕಾಶಿ ಯವರ ಹುಟ್ಟುಹಬ್ಬವನ್ನು ಸ್ಪೆಷಲ್ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಥಿಗಳ ವತಿಯಿಂದ ಧಾರವಾಡದ ಸಾಯಿ ಹಾಸ್ಟೆಲ್ ತ್ರೋಬಾಲ್ ಸ್ಟೇಡಿಯಂನಲ್ಲಿ ಆಚರಿಸಲಾಯಿತು. ತರಬೇತುದಾರ ಮೋಕಾಶಿಯವರಿಗೆ ವಿದ್ಯಾರ್ಥಿಗಳು ಜನ್ಮದಿನದ ಶುಭಾಶಯವನ್ನು ಕೋರಿದರು.
ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕ : ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಮಂಗಳೂರು (ಆ, 24) : ರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಸ್ಥೆಯಾದ ವಿಜ್ಞಾನ ಭಾರತಿ ಯ ಕರ್ನಾಟಕದ ಘಟಕವಾದ ಸ್ವದೇಶಿ ವಿಜ್ಞಾನ ಆಂದೋಳನ – ಕರ್ನಾಟಕ’ ಸಂಸ್ಥೆ ಇದೇ ಸೆಪ್ಟೆಂಬರ್ 15 ರಿಂದ 17ರ ವರೆಗೆ 16ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಮಂಗಳೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಕಾರದೊಂದಿಗೆ, ಮಂಗಳ […]
ಹರೀಶ್ ಬಂಗೇರ ತಾಯ್ನಾಡಿಗೆ ಆಗಮನ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು ಬೆಂಗಳೂರು ಏರ್ಪೋರ್ಟ್
ಬೆಂಗಳೂರು (ಆ,18): ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಪಟ್ಟಿದ್ದ ಕುಂದಾಪುರ ಮೂಲದ ಹರೀಶ್ ಬಂಗೇರ ಬೆಂಗಳೂರು ಏರ್ಪೋರ್ಟ್ ತಲುಪಿದ್ದಾರೆ. ಸೌದಿ ದೊರೆಯ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರೆಂದು ಆರೋಪ ಎದುರಿಸಿರುವ ಹರೀಶ್ ನಿರಪರಾಧಿ ಎಂದು ತಿಳಿದ ಮೇಲೆ ಸೌದಿ ಅರೇಬಿಯಾ ಸರಕಾರ ಇವರನ್ನು ಬಿಡುಗಡೆಗೊಳಿಸಿದ್ದು,ಇದೀಗ ಕುಂದಾಪುರ ಪರಿಸರದ ಜನತೆಗೆ ಸಂತೋಷ ತಂದಿದೆ. ಬೆಂಗಳೂರಿಗೆ ಆಗಮಿಸಿದ ಹರೀಶ್ ಬಂಗೇರರನ್ನು ಲೋಕೇಶ್ ಅಂಕದಕಟ್ಟೆ ಮತ್ತು ತಂಡ ಬೆಂಗಳೂರಿನ ಏರ್ಪೋರ್ಟ್ನಲ್ಲಿ ಬರಮಾಡಿಕೊಂಡರು.
ಸಂಸದ ಶ್ರೀ ಬಿ. ವೈ. ರಾಘವೇಂದ್ರ ರಿಗೆ ಜನ್ಮದಿನದ ಶುಭಾಶಯ ಕೋರಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ
ಶಿವಮೊಗ್ಗ (ಆ, 16) : ಶಿವಮೊಗ್ಗ ಲೋಕ ಸಭಾ ಕ್ಚೇತ್ರದ ಸಂಸದ ಶ್ರೀ ಬಿ. ವೈ. ರಾಘವೇಂದ್ರರವರ ಹುಟ್ಟು ಹಬ್ಬದ ದಿನದಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರು ಶಿಕಾರಿಪುರದ ಸಂಸದರ ನಿವಾಸಕ್ಕೆ ತೆರಳಿ ಶುಭಾಶಯ ತಿಳಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ರವರು ಬೈಂದೂರು ಕ್ಷೇತ್ರದ ಬಗ್ಗೆ ತೋರಿದ ವಾತ್ಸಲ್ಯದಿಂದಾಗಿ ಹಿಂದುಳಿದ ಕ್ಷೇತ್ರವೊಂದು ಅಭಿವೃದ್ಧಿಯತ್ತ ದಾಪುಗಾಲು ಇಡುವಂತಾಗಿದೆ. ನಾನು ಚುನಾವಣೆಯ ಸಂದರ್ಭದಲ್ಲಿ ಹೇಳಿದಂತೆ […]
ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ- ಬೈಂದೂರು-ಶಿರೂರು ಘಟಕ : ಸ್ವತಂತ್ರ ದಿನದ ಅಮೃತೋತ್ಸವದ ಸಂಭ್ರಮ
ಬೈಂದೂರು (ಆ, 15) : ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಬೈಂದೂರು-ಶಿರೂರು ಘಟಕದ ಸ್ವತಂತ್ರ ದಿನದ ಅಮೃತೋತ್ಸವದ ಸಂಭ್ರಮವು ಸಂಘಟನೆಯ ಆಡಳಿತ ಕಛೇರಿಯಲ್ಲಿ ಆಗಸ್ಟ್ 15, ರಂದು ಜರುಗಿತು. ಕಾರ್ಯಕ್ರಮದ ಅಂಗವಾಗಿ ಧ್ವಜವಂದನೆ ಹಾಗೂ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಧ್ವಜಾರೋಹಣ ವನ್ನು ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲಾ ಕುಂದರ್ ನೆರವೇರಿಸಿದರು. ಅರಣ್ಯ ಇಲಾಖೆಯು ಪ್ರಾಯೋಜಿಸಿದ ಸಸಿಗಳನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಂಗಾಧರ […]
ಶ್ರೀ ಕೃಷ್ಣನ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಉಡುಪಿ (ಆ, 13) : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉಡುಪಿಯ ಶ್ರೀ ಕೃಷ್ಣನ ದರ್ಶನ ಪಡೆದರು. ನಂತರ ಪರ್ಯಾಯ ಶ್ರೀಗಳ ಜೊತೆ ಸಮಾಲೋಚನೆ ನಡೆಸಿ ಶ್ರೀಗಳ ಆಶೀರ್ವಾದ ಪಡೆದರು. ಪರ್ಯಾಯ ಮಠಾಧೀಶರು ಮುಖ್ಯಮಂತ್ರಿಗಳಿಗೆ ಮಠದ ವತಿಯಿಂದ ಗೌರವ ಸಮರ್ಪಿಸಿದರು.










