ಕುಂದಾಪುರ.(ಡಿ, 7): ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ ಪ್ರಯುಕ್ತ ಡಿಸೆಂಬರ್ 30ರಂದು ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿರುವ ಬಂಟರ ಯಕ್ಷ ಸಂಭ್ರಮ ಕಾರ್ಯಕ್ರಮದ ಸಂಚಾಲಕರಾಗಿ ಕುಂದಾಪುರದ ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಸುಕುಮಾರ್ ಶೆಟ್ಟಿ ಕಮಲಶಿಲೆ ಆಯ್ಕೆಯಾಗಿರುತ್ತಾರೆ. ತಮ್ಮ ವಿದ್ಯಾರ್ಥಿ ಜೀವನದ ಬದುಕಿನಲ್ಲಿ ಅಪಾರವಾದ ಯಕ್ಷಗಾನ ಆಸಕ್ತಿ ಹೊಂದಿದ ಇವರು ಶಾಲಾ ಕಾಲೇಜುಗಳಲ್ಲಿ, ಅನೇಕ […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಡಿ. 13 ರಂದು ಇಡೂರು ಕುಂಜ್ಞಾಡಿಯ ಕಂಬಳ
ಕುಂದಾಪುರ( ಡಿ,07): ತಾಲೂಕಿನ ಪ್ರಸಿದ್ಧ ಸಾಂಪ್ರದಾಯಿಕ ಕಂಬಳವಾದ ಇಡೂರು ಕುಂಜ್ಞಾಡಿಯ ಕಂಬಳವು ಡಿಸೆಂಬರ್ 13 ರ ಬುಧವಾರದಂದು ಮಧ್ಯಾಹ್ನ 12 ಗಂಟೆಗೆ ಮಾರಣಕಟ್ಟೆ ಸಮೀಪದ ಶ್ರೀ ಕ್ಷೇತ್ರ ಕುಂಜ್ಞಾಡಿ ಹಾಯ್ಗುಳಿ ದೇವಸ್ಥಾನದ ಕಂಬಳ ಗದ್ದೆಯಲ್ಲಿ ನಡೆಯಲಿದೆ. ಸಾರ್ವಜನಿಕರು ಹಾಗೂ ಕಂಬಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕಂಬಳ ಗದ್ದೆ ಕುಟುಂಬದವರು, ಸಂಘಟಕರು,ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ವರದಿ : ರಾಘವೇಂದ್ರ ಹರ್ಮಣ್
ಹೆಮ್ಮಾಡಿ : ಜಿ.ಶಂಕರ್ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಪ್ರಾರಂಭ
ಹೆಮ್ಮಾಡಿ ( ಡಿ,06): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ [ರಿ.] ಅಂಬಲಪಾಡಿ, ಉಡುಪಿ ಮತ್ತು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಮಾಹೆ-ಮಣಿಪಾಲ ಇವರ ಸಹಯೋಗದೊಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಆಕರ್ಷಕ ಯೋಜನೆಯಾದ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯ ನವೀಕರಣ ಹಾಗೂ ನೋಂದಾವಣೆ ಅಭಿಯಾನ ಡಿಸೆಂಬರ್ 05 ರಿಂದ ಡಿಸೆಂಬರ್ 25 ರ ತನಕ ಹೆಮ್ಮಾಡಿಯ ಬಸ್ ನಿಲ್ದಾಣ ದ ಸಮೀಪದ […]
ಕುಂದಾಪುರ ತಾಲೂಕು ಯುವ ಬಂಟರ ಸಂಘ(ರಿ): ನ,30 ರಂದು 10 ಮಂದಿ ಮಹಿಳಾ ಸಾಧಕೀಯರಿಗೆ ಹೊಂಗಿರಣ ಪ್ರಶಸ್ತಿ ಪ್ರಧಾನ
ಕುಂದಾಪುರ(ನ, 29.): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನವೆಂಬರ್ 30 ರಂದು ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, 10 ಮಂದಿ ಮಹಿಳಾ ಸಾಧಕೀಯರಿಗೆ ಹೊಂಗಿರಣ ಪ್ರಶಸ್ತಿ ಪ್ರಧಾನ ಹಾಗೂ ವಿಕಲಚೇತನ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ವಿನಯ ಆಸ್ಪತ್ರೆಯ ಆಡಳಿತ ನಿರ್ದೇಶಕ ಖ್ಯಾತ ಪ್ರಸೂತಿ ತಜ್ಞ ಡಾ. ರಂಜಿತ್ ಕುಮಾರ್ ಶೆಟ್ಟಿ ಉದ್ಘಾಟನೆ […]
ಮೊಗವೀರ ಯುವ ಸಂಘಟನೆ -ಸಾಂಸ್ಕೃತಿಕ ಸ್ಪರ್ಧೆ: ಹೆಮ್ಮಾಡಿ ಘಟಕಕ್ಕೆ ಸಮಗ್ರ ಪ್ರಶಸ್ತಿ
ಕುಂದಾಪುರ (ನ.27): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ನೇತೃತ್ವದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ಅಂಬಲಪಾಡಿ ಸಹಯೋಗದಲ್ಲಿ ಕುಂದಾಪುರ ಘಟಕದ ಆತಿಥ್ಯದಲ್ಲಿ ಕುಂದಾಪುರದ ಮೊಗವೀರ ಭವನದಲ್ಲಿ ನವೆಂಬರ್ 26 ರಂದು ನಡೆದ ಜಿಲ್ಲಾ ವ್ಯಾಪ್ತಿಯ ಅಂತರ್ ಘಟಕಗಳ ಸಾಂಸ್ಕೃತಿಕ ಸ್ಪರ್ಧೆ-ಸಂಗಮ ದಲ್ಲಿ ಹೆಮ್ಮಾಡಿ ಘಟಕವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನಿಮ್ಮ ಆಯ್ಕೆ ವಿಭಾಗದಲ್ಲಿ ಪ್ರಥಮ ಸ್ಥಾನ, ಸಿನಿಮಾ ನ್ರತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಪ್ರಹಸನ ವಿಭಾಗದಲ್ಲಿ ದ್ವೀತಿಯ ಸ್ಥಾನವನ್ನು […]
ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ ಅಥ್ಲೆಟಿಕ್ಸ್ ಕುಂದಾಪುರದ ಪ್ರಶಾಂತ್ ಶೆಟ್ಟಿ ಅತ್ಯುತ್ತಮ ಸಾಧನೆ
ಕುಂದಾಪುರ (ನ,06): ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ಆಶ್ರಯದಲ್ಲಿ ಧಾರವಾಡದ ಆರ್ ಎನ್ ಎಸ್ ಕ್ರೀಡಾಂಗಣದಲ್ಲಿ ನವೆಂಬರ್ 4 ಮತ್ತು 5 ರಂದು ನಡೆದ ಕರ್ನಾಟಕ ಓಪನ್ ನ್ಯಾಷನಲ್ ಅಟ್ಲಾಟೆಕ್ಸ್ ನಲ್ಲಿ ಶಿಕ್ಷಕ ಹಾಗೂ ಕುಂದಾಪುರ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ರೀಡಾ ತರಬೇತಿ ಸಂಸ್ಥೆಯ ತರಬೇತುದಾರರಾದ ಪ್ರಶಾಂತ್ ಶೆಟ್ಟಿಯವರು ಅತ್ಯುತ್ತಮ ಸಾಧನೆಗೈದಿದ್ದಾರೆ 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ, 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ಟ್ರಿಪಲ್ […]
ಎಚ್.ಎಮ್. ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ
ಕುಂದಾಪುರ (ನ.1) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತುವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಇಂದು ಬಹಳ ಅರ್ಥಪೂರ್ಣವಾಗಿ ಕರ್ನಾಟಕ ರಾಜ್ಯೋತ್ಸವವನ್ನುಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ತಾಯಿಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ಸಂಜಿತ್ ಹೆಗ್ಡೆ ದಿನದಮಹತ್ವವನ್ನು ತಿಳಿಸಿದರು. ಶಿಕ್ಷಕ ರವಿಚಂದ್ರರವರ ಕನ್ನಡ ಹಿರಿಮೆಯನ್ನು ಬಿತ್ತರಿಸುವ […]
ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ( ನ.03): ಕುಂದಾಪುರ ತಾಲೂಕು ಯುವ ಬಂಟರ ಸಂಘವು ಪ್ರಸ್ತುತ ವರ್ಷದಲ್ಲಿ ದಶಮ ಸಂಭ್ರಮವನ್ನು ಆಚರಿಸುತ್ತಿದ್ದು 2023ನೇ ವರ್ಷದ ಉಡುಪಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ. ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ ನವಂಬರ್ 1 ರಂದು ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಶ್ರೀಮತಿ ಲಕ್ಷ್ಮೀ […]
ವಕ್ವಾಡಿ: ಉಚಿತ ನೇತ್ರ ತಪಾಸಣಾ ಶಿಬಿರ ಸಂಪನ್ನ
ವಕ್ವಾಡಿ( ಆ,31): ಕರ್ನಾಟಕ ಸರಕಾರ , ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ,ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊರ್ಗಿ ಮತ್ತು ಉಪಕೇಂದ್ರ ವಕ್ವಾಡಿ , ಗ್ರಾಮಪಂಚಾಯತ್ ಕಾಳಾವರ, ಯುವಶಕ್ತಿ ಮಿತ್ರ ಮಂಡಳಿ (ರಿ) ಹೆಗ್ಗಾರ್ ಬೈಲ್ ವಕ್ವಾಡಿ ಹಾಗೂ ಕೆ.ಎಂ.ಸಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 31 ರಂದು ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 […]
ಮೊಗವಿರ್ಸ್ ಬಹ್ರೈನ್ ನ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ
ಉಚ್ಚಿಲ(ಆ,30): ಮೊಗವೀರ್ಸ್ ಬಹ್ರೈನ್ ನ ವತಿಯಿಂದ ಮಂಗಳೂರು, ಬಾರ್ಕೂರು ಹಾಗೂ ಬಗ್ವಾಡಿ ಹೋಬಳಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಮೊಗವೀರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿಶೇಷ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಕ್ಟೋಬರ್ 30 ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶ್ರೀ ಮಹಾಲಕ್ಷ್ಮೀ ಅನ್ನ ಛತ್ರ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಉಚ್ಚಿಲದ ಗೌರವ ಸಲಹೆಗಾರ […]










