ಉಡುಪಿ (ಸೆ,21): ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ (ರಿ ).ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಒಕ್ಕೂಟ ನೀಡುವ ರಾಜ್ಯ ಮಟ್ಟದ “ ಶಿಕ್ಷಕ ರತ್ನ” ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಪಿ.ಆರ್.ಎನ್.ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದ ಉಪ ಮುಖ್ಯೋಪಧ್ಯಾಯರಾದ ಶ್ರೀ ಮಹೇಶ್ ಹೈಕಾಡಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗೆ ರಾಜ್ಯದಲ್ಲಿನ ಎಲ್ಲಾ ಖಾಸಗಿ ಶಾಲೆಯ ಶಿಕ್ಷಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಗಳಿಂದ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಬಂಟಕಲ್ಲಿನ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿ
ಉಡುಪಿ (ಸೆ,20): ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವಿದ್ಯಾರ್ಥಿಗಳಾದ ನವೀನ್ ಹೆಗ್ಡೆ, ಹರ್ಷವರ್ಧನ ಎನ್. ಸೌರವ್ .ಕೆ ,ಮಹಮ್ಮದ್ ನೌಫಾಲ್ ರವರು ಅಭಿವೃದ್ಧಿ ಪಡಿಸಿದ ಮಣ್ಣಿನ ತೇವಾಂಶ ಹಾಗೂ ತೇವಾಂಶ ಹಿಡಿದಿಡುವ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ ಉಪಯೋಗಿಸಿ ಅಳೆಯುವ ಸಾಧನಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ “ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ” ದೊರಕಿದೆ. ಸಿವಿಲ್ ವಿಭಾಗದ ಪ್ರೊ. ಸುನಿಲ್ ಹಲ್ದಂಕರ್ ಹಾಗೂ […]
ನರೇಶ್ ಶೆಟ್ಟಿ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ
ಕುಂದಾಪುರ (ಸೆ,21); ಜೂನ್ 2021ರ ಚಾರ್ಟರ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಹುಯ್ಯಾರು ಹೆಬ್ಬಾಗಿಲು ಮನೆ ನರೇಶ್ ಶೆಟ್ಟಿ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರಿನ ಟಿ.ಆರ್. ಚಡ್ಡಾ ರವರಲ್ಲಿ ಆರ್ಟಿಕಲ್ ಶಿಪ್ ಮಾಡಿರುವ ನರೇಶ್ ಶೆಟ್ಟಿ ಶ್ರೀ ಚಂದ್ರಶೇಖರ ಶೆಟ್ಟಿ ಹಾಗೂ ಹುಯ್ಯಾರು ಹೆಬ್ಬಾಗಿಲು ಮನೆ ಶ್ರೀಮತಿ ವಸಂತಿ ಶೆಟ್ಟಿ ಯವರ ಪುತ್ರ.
ಎಕ್ಸಲೆಂಟ್ ಕಾಲೇಜು ಕುಂದಾಪುರ: ಸಿಇಟಿ ಪರೀಕ್ಷೆಯಲ್ಲಿ ರಿಷಿ ಮಯೂರ ಕುಂದಾಪುರ ತಾಲೂಕಿಗೆ ಅಗ್ರಸ್ಥಾನ
ಕುಂದಾಪುರ(ಸೆ,21): ಸುಜ್ಞಾನ ಎಜುಕೇಶನ್ ಟ್ರಸ್ಟ್ ಮೂಡುಬಿದರಿ ಇದರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಕ್ಸಲೆಂಟ್ ಕಾಲೇಜು ಸಿಇಟಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಕಾಲೇಜುಗಳಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿ ರಿಷಿ ಮಯೂರ 224 ನೇ ರ್ಯಾಂಕ್ ಸಿಇಟಿ ಯಲ್ಲಿ ಪಡೆಯುವುದರ ಮೂಲಕ ಕಾಲೇಜು ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 694 ಬಿ ಎನ್ ವೈ ಎಸ್ 731, ಪಶುವೈದ್ಯಕೀಯದಲ್ಲಿ 731, 224 ಅಗ್ರಿಕಲ್ಚರಲ್ ಬಿ.ಎಸ್ಸಿ ವಿಭಾಗದಲ್ಲಿ ರ್ಯಾಂಕ್ ಗಳಿಸಿರುತ್ತಾರೆ. ಈ […]
ಚಲನ್ ಚಂದ್ರ ಶೆಟ್ಟಿ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ
ಕುಂದಾಪುರ (ಸೆ,21): ಕುಂದಾಪುರ ಮೂಲದ ಚಲನ್ ಚಂದ್ರ ಶೆಟ್ಟಿಯವರು ಜೂನ್ 2021ರ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಉಡುಪಿಯ ಶ್ರೀ ಸುರೇಂದ್ರ ನಾಯಕ್ ರವರಲ್ಲಿ ಆರ್ಟಿಕಲ್ ಶಿಪ್ ಮಾಡಿರುವ ಚಲನ್ ಚಂದ್ರ ಶೆಟ್ಟಿ ಯವರು ಅಧ್ಯಾಪಕರಾದ ಬಿಲ್ಲಾಡಿಮನೆ ಶ್ರೀ ಚಂದ್ರಶೇಖರ ಶೆಟ್ಟಿ ಮಣಿಗೇರಿ ಹಾಗೂ ಶಿರೂರು ಹೈಕಾಡಿಮನೆ ಶ್ರೀಮತಿ ಶ್ಯಾಮಲಾ ಸಿ ಶೆಟ್ಟಿ ಯವರ ಪುತ್ರ.
ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿಎ ಇಂಟರ್ಮೀಡಿಯೇಟ್ ರ್ಯಾಂಕ್ ವಿಜೇತೆ ವೈಷ್ಣವಿ ಎಂ.ವಿ ಯವರಿಗೆ ಸನ್ಮಾನ
ಕುಂದಾಪುರ (ಸೆ,20): ಇಲ್ಲಿನ ಕುಂದೇಶ್ವರ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ ಸಿಎಸ್/ ಸಿಎಮ್ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಭಾರತಕ್ಕೆ 29ನೇ ರ್ಯಾಂಕ್ ಪಡೆದ ವೈಷ್ಣವಿ ಎಂ ವಿ ಯವರನ್ನು ಸನ್ಮಾನಿಸಲಾಯಿತು. ಅತ್ಯಂತ ಕಠಿಣ ಪಠ್ಯಕ್ರಮ ಪರೀಕ್ಷೆಯಲ್ಲೊಂದಾದ ಸಿಎ ಪರೀಕ್ಷೆಯಲ್ಲಿ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಇಂತಹ ಸಾಧನೆ […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅಖಿಲ ಭಾರತ 29ನೇ ರ್ಯಾಂಕ್
ಕುಂದಾಪುರ(ಸೆ,19): ಇಲ್ಲಿನ ಕುಂದೇಶ್ವರ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್(ಸ್ಪೇಸ್) ಸಿಎ/ಸಿಎಸ್/ಸಿಎಮ್ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಅವರು 543 ಅಂಕ ಗಳಿಸುವುದರೊಂದಿಗೆ ಅಖಿಲ ಭಾರತಕ್ಕೆ 29ನೇರ್ಯಾಂಕ್ ಗಳಿಸಿದ್ದಾರೆ. ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳಾದ ರಕ್ಷಿತ್ ಶೆಟ್ಟಿ 246, […]
ಸ್ಪರ್ಧೆಗಳ ಮೂಲಕ ವ್ಯಕ್ತಿತ್ವ ವಿಕಸನ ವೃದ್ಧಿ-ಡಾ| ಹೆರಾಲ್ಡ್ ಐವನ್ ಮೋನಿಸ್
ಶಿರ್ವ(ಸೆ,18) : ಪ್ರತಿಯೊಂದು ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚುತ್ತಿರುವ ಕಾರಣ ಕಂಪ್ಯೂಟರ್ ಕಲಿಕೆಯ ಅವಶ್ಯಕತೆ ಇಂದು ಅಗತ್ಯವಾಗಿದೆ .ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಕಂಪ್ಯೂಟರ್ ಗಳನ್ನು ಹೆಚ್ಚಾಗಿ ಬಳಸಿಕೊಂಡು ಸಮಾಜಕ್ಕೆ ಬೇಕಾಗುವ ತಂತ್ರಜ್ಞಾನವನ್ನು ರೂಪಿಸಿ,ಸಂಶೋಧನಾ ಮನಸ್ಥಿತಿ ಬೆಳೆಸಿಕೊಂಡು ಉತ್ತಮ ಉದ್ಯೋಗ ಪಡೆದುಕೊಳ್ಳಬೇಕೆಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಹೇಳಿದರು. ಅವರು ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ಐಟಿ ಕ್ಲಬ್ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಕಾರ್ಯಾಗಾರ
ಬಂಟಕಲ್ (ಸೆ, 17) : ಇಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ಐಎಸ್ ಟಿಇ ಶಿಕ್ಷಕರ ಘಟಕದ ಸಹಯೋಗದೊಂದಿಗೆ ವಿಶ್ವ ಒಝೋನ್ ದಿನದ ಅಂಗವಾಗಿ “ಒಝೋನ್ ಪದರದ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವುದು” ಎಂಬ ವಿಷಯದ ಬಗ್ಗೆ ತಾಂತ್ರಿಕ ಕಾರ್ಯಾಗಾರವನ್ನು 16 ಸಪ್ಟೆಂಬರ್ 2021ರಂದು ಆಯೋಜಿಲಾಗಿತ್ತು. ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಬಾಲಕೃಷ್ಣ ಕೇಶವ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. […]
ವರಸಿದ್ದಿವಿನಾಯಕ ಪಿಯು ಕಾಲೇಜು ಕೆರಾಡಿ : ಫ್ರೇಶರ್ಸ್ ಡೇ ಕಾರ್ಯಕ್ರಮ
ಕೆರಾಡಿ (ಸೆ, 17) : ಇಲ್ಲಿನ ವರಸಿದ್ದಿವಿನಾಯಕ ಪಿಯು ಕಾಲೇಜಿ ನಲ್ಲಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಫ್ರೇಶರ್ಸ್ ಡೇ ಕಾರ್ಯಕ್ರಮವನ್ನು ಸಪ್ಟೆಂಬರ್ 15ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಉಪನ್ಯಾಸಕರಾದ ಅಭಿಜಿತ್ ಹೆಮ್ಮಾಡಿ, ನೇಹಾ ಶೆಟ್ಟಿ ಮತ್ತು ಶ್ವೇತಾ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಭು ಸ್ವಾಗತಿಸಿ, ಧನುಶ್ ರಾಜ್ ವಂದಿಸಿದರು. ಉಪನ್ಯಾಸಕರಾದ ಅಭಿಜಿತ್ ಹೆಮ್ಮಾಡಿ ಮತ್ತು […]










