ಕುಂದಾಪುರ (ಆ, 5) : ಸಿ ಬಿ ಎಸ್ ಇ ಪಠ್ಯಕ್ರಮದ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ತ್ರಾಸಿ ಡಾನ್ ಬಾಸ್ಕೋ ಸ್ಕೂಲ್ ನ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಗೆ 100 ಶೇಕಡ ಫಲಿತಾಂಶ ಬಂದಿರುತ್ತದೆ. ಐದು ವರ್ಷಗಳಿಂದ ಸತತ ಈ ದಾಖಲೆಯನ್ನು ಶಾಲೆ ಮಾಡುತ್ತಾ ಬಂದಿದೆ. ಈ ಬಾರಿ 29 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ವಿ.ನಿತ್ಯಶ್ರೀ ಶೇ 94.2 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ರೋಟರಿ ಕ್ಲಬ್ ಕುಂದಾಪುರ : ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಕುಂದಾಪುರ (ಆ, 03) : ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ Rtn. ಸಾಲಗದ್ದೆ ಶಶಿಧರ ಶೆಟ್ಟಿ ಪ್ರಾಯೋಜಕತ್ವದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಳೂರು, ತೋಪ್ಲು ಹಾಗೂ ಹಕ್ಲಾಡಿ ಶಾಲಾ ಮಕ್ಕಳಿಗೆ ಅಗಸ್ಟ್ 2 ರಂದು ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ Rtn. ಶಶಿಧರ ಹೆಗ್ಡೆಯವರು ವಹಿಸಿಕೊಂಡು ಶುಭಹಾರೈಸಿ ಮಾತನಾಡಿದರು. ಜಿಲ್ಲಾ ಪ್ರಶಸ್ತಿ ವಿಜೇತ, ಶಿಕ್ಷಕ […]
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಕ್ರಮ
ಕೊಲ್ಲೂರು (ಆ, 03) : ಇಲ್ಲಿನ ಶ್ರೀಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್,03ರಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುವೆಂಪು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಪ್ರೊ ಡಾ. ಜೆ. ಎಸ್. ಸದಾನಂದ ರವರು ಭೇಟಿ ನೀಡಿ, ಹೊಸ ಶಿಕ್ಷಣ ನೀತಿ ಯ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಪ್ರೊ. ಡಾ. ಜೆ ಎಸ್ ಸದಾನಂದ ರವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. […]
ಕರೋನಾ ಹಿನ್ನೆಲೆ- ಮಂಗಳೂರು ವಿ.ವಿ ಎಲ್ಲಾ ಪದವಿ ಪರೀಕ್ಷೆಗಳ ರದ್ದು – ತರಗತಿಗಳು ಮುಂದೂಡಿಕೆ: ದ.ಕ. ಜಿಲ್ಲಾಧಿಕಾರಿ ಆದೇಶ
ಕರೋನಾ ಲಾಕ್ಡೌನ್ ಕಾರಣದಿಂದಾಗಿ ಬಾಕಿಯಾದ ಮಂಗಳೂರು ವಿ. ವಿ. 1, 3, 5 ಸೆಮಿಸ್ಟರ್ ನ ಪರೀಕ್ಷೆಗಳು ಅಗಸ್ಟ್ 2 ರಂದು ಪ್ರಾರಂಭಗೊಂಡಿದ್ದು, ಈಗ ಮತ್ತೆ ಕರೋನಾ ಮೂರನೇ ಅಲೆಯ ಆತಂಕದಿಂದಾಗಿ ಮುಂದೂಡಲಾಗಿದೆ.
ಗುರುಕುಲ ಚಾಣಕ್ಯ ಪ್ರಶಸ್ತಿಗೆ ಬಿ. ಎಸ್. ಬಾಗೇವಾಡಿಮಠ ಆಯ್ಕೆ
ರಾಣಿಬೇನ್ನೂರು (ಆ, 03) : ನಗರದ ಯುವ ಕವಿ ಸಾಹಿತಿ ಹಾಗೂ ಲೇಖಕರಾದ ಹಾವೇರಿ ಜಿಲ್ಲೆಯರಾಣಿಬೆನ್ನೂರಿನ ಬಸವರಾಜ .ಎಸ್ . ಬಾಗೇವಾಡಿಮಠ ರವರು ಸಾಹಿತ್ಯ, ಸಮಾಜ ಸೇವೆ, ಹಾಗೂ ಇವರ ಮಾನವೀಯ ಸೇವೆಗಳನ್ನು ಗುರುತಿಸಿ ಗುರು ಕುಲ ಚಾಣಕ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗುರುಕುಲ ಕಲಾ ಪ್ರತಿಷ್ಠಾನ (ರಿ) ರಾಜ್ಯ ಘಟಕದ ಸಂಸ್ಥೆಯ ಅಧ್ಯಕ್ಷರಾದ ಹುಲಿಯೂರು ದುರ್ಗ ಲಕ್ಷ್ಮೀ ನಾರಾಯಣ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಮ್ಮಾಡಿ : ಒತ್ತಡ ನಿವಾರಣೆ – ಆರೋಗ್ಯ ಜೀವನಶೈಲಿ ಕಾರ್ಯಾಗಾರ
ಹೆಮ್ಮಾಡಿ (ಜು, 31) : ಆಧುನಿಕತೆಯ ಒತ್ತಡದ ಬದುಕಿನಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ಬಹಳಷ್ಟು ನಕಾರಾತ್ಮಕ ಪ್ರಭಾವಗಳು ಹೆಚ್ಚಾಗುತ್ತಿದ್ದು ಅದರಿಂದ ಹೊರ ಬರಲು ನಾವು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಬೇಕು. ಆ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ನಮ್ಮ ಲಯನ್ಸ್ ಸಂಸ್ಥೆ ಇಂದು ಗ್ರಾಮೀಣ ಭಾಗದ ಮಹಿಳೆಯರಿಗೆ ಆರೋಗ್ಯವನ್ನು ಕಾಪಾಡಲು ಕಾರ್ಯಗಾರವನ್ನು ಹಮ್ಮಿಕೊಂಡಿದೆ ಎಂದು ಕುಂದಾಪುರ ಲಯನ್ಸ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ನಾಯಕ್ ಕುಂದಾಪುರ ಹೇಳಿದರು. ಅವರು ಲಯನ್ಸ್ ಕ್ಲಬ್ ಕುಂದಾಪುರ, […]
ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೋತ್ಸಾಹ ಧನ ವಿತರಣೆ
ನಾವುಂದ ( ಜು, 31) : ಪ್ರತಿ ವರುಷ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗೆ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ 1995-96ನೇ ಸಾಲಿನ ವಿದ್ಯಾರ್ಥಿಗಳ ವತಿಯಿಂದ ನೀಡಲ್ಪಡುವ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಇತ್ತೀಚೆಗೆ ವಿತರಿಸಲಾಯಿತು. ಈ ವರುಷ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದ ವಿಭಾಗದ ವಿದ್ಯಾರ್ಥಿ ಚವೀಶ್ ಜೈನ್ ಅವರಿಗೆ ಈ ಪ್ರೋತ್ಸಾಹಧನವನ್ನು ನೀಡಲಾಯಿತು. ಆನ್ಲೈನ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ 1995-96ನೇ ಸಾಲಿನ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯ : ಆಡಳಿತ ಸಿಬ್ಬಂದಿ ಶ್ರೀಮತಿ ಅಲ್ವಿರಾ ಕ್ಲೇರೆನ್ಸ್ ಫೆರ್ನಾಂಡಿಸ್ ರವರಿಗೆ ಬೀಳ್ಕೊಡುಗೆ
ಶಿರ್ವ( ಜು, 31) : ಒಂದು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಸೇವೆಯು ಅತ್ಯಂತ ಅಮೂಲ್ಯ ಹಾಗೂ ಉಪಯುಕ್ತವಾದುದು. ವರ್ಗವಾರು ಕರ್ತವ್ಯವೆನ್ನವುದು ಜವಾಬ್ದಾರಿಯ ಹಿನ್ನೆಲೆಯಲ್ಲಿ ಇದ್ದರೂ ಕೂಡ ಪ್ರತಿಯೊಬ್ಬರ ಸೇವೆಯೂ ಪರಿಗಣಿತ ಹಾಗೂ ಶ್ರೇಷ್ಠ ವಾದುದು ಎಂದು ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೆನಿಸ್ ಡೇಸಾ ಸಂತ ಮೇರಿ ಹೇಳಿದರು. ಅವರು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಆಡಳಿತ ಸಿಬ್ಬಂದಿ ಶ್ರೀಮತಿ ಅಲ್ವಿರಾ ಕ್ಲೇರೆನ್ಸ್ […]
ಮಡಿಕೇರಿ : ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ
ಮಡಿಕೇರಿ (ಜು. 28) : ಇಲ್ಲಿನ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ 6 ನೇ ತರಗತಿಯ ಪ್ರವೇಶಕ್ಕೆ ಆಗಸ್ಟ್, 11 ರಂದು ಜಿಲ್ಲೆಯ 06 ಕೇಂದ್ರಗಳಲ್ಲಿ ಆಯ್ಕೆ ಪರೀಕ್ಷೆ ನಡೆಯಲಿದೆ. ಪ್ರವೇಶ ಪತ್ರವನ್ನು ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಬಳಸಿ https://cbseitms.nic.in/index.aspx ಲಿಂಕ್ ಮೂಲಕ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನೀರಜ್ 7676825036, ಪದ್ಮ ಡಿ.ಟಿ. 7019054680 ಮತ್ತು ಗಂಗಾಧರನ್ ಕೆ. 6363354829 ನ್ನು ಸಂಪರ್ಕಿಸಬಹುದು ಎಂದು ಜವಾಹರ್ ನವೋದಯ […]
ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್ : “ಕ್ಲೌಡ್ ಕಂಪ್ಯೂಟಿಂಗ್” ವಿಷಯದ ಕುರಿತು ತಾಂತ್ರಿಕ ಕಾರ್ಯಗಾರ
ಉಡುಪಿ (ಜು, 27) : ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಆಶ್ರಯದಲ್ಲಿ “ಕ್ಲೌಡ್ ಕಂಪ್ಯೂಟಿಂಗ್” ಎಂಬ ವಿಷಯದ ಕುರಿತು ಜುಲೈ 21 ರಂದು ತಾಂತ್ರಿಕ ಉಪನ್ಯಾಸವನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿತ್ತು. ಐ.ಐ.ಐ.ಟಿ. ಕೊಟ್ಟಾಯಂ ನ ಪ್ರಾಧ್ಯಾಪಕರಾದ ಪ್ರೊ.ಕ್ರಿಸ್ಟಿನಾ ತೆರೇಸ್ ಜೋಸೆಫ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ಕಾರ್ಯಗಾರವನ್ನು “ಕಂಪ್ಯೂಟರ್ ವಿಷನ್” ಕುರಿತು 30 ಗಂಟೆಗಳ, ಮೌಲ್ಯವರ್ಧಿಕ ಕೋರ್ಸ್ ನ ಸಮಾರೋಪ ಕಾರ್ಯಕ್ರಮಕ್ಕಾಗಿ ಆಯೋಜಿಸಲಾಗಿತ್ತು. […]










