ಕುಂದಾಪುರ (ಆ, 10) : ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಅನುಶ್ರೀ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಕಾಳಾವರದ ನಿವಾಸಿ ಶ್ರೀ ಬಾಬು ಶೆಟ್ಟಿ ಹಾಗೂ ಶ್ರೀಮತಿ ಸುಲೋಚನ ದಂಪತಿಯ ಪುತ್ರಿ ಅನುಶ್ರೀ ಶೆಟ್ಟಿಯ ಸಾಧನೆ ನಿಜಕ್ಕೂ ಸ್ಫೂರ್ತಿದಾಯಕ. “ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನನ್ನಿಂದಾಗಬಹುದಾದ ಸಹಾಯ ಮಾಡುವುದು ನನ್ನ ಬದುಕಿನ ಗುರಿ. ಐ.ಎ.ಎಸ್. ಅಧಿಕಾರಿಯಾಗಿ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಬೋಧಕ ಮತ್ತು ಬೋಧಕೇತರ ಸಂಘದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ
ಕುಂದಾಪುರ (ಆ, 11) : ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇದರ ಬೋಧಕ ಮತ್ತು ಬೋಧಕೇತರ ಸಂಘದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಉಪನ್ಯಾಸಕ ಯೋಗಿಶ್ ಶ್ಯಾನುಭೋಗ್ರವರಿಗೆ ಮತ್ತು ಇನ್ನೊರ್ವರಾದ ಶ್ರೀಲತಾ ಇವರಿಗೆ ಸಂಘದಿಂದ ಉಡುಗೊರೆ ನೀಡಲಾಯಿತು. […]
ಅಕ್ಷೋಹಿಣಿ ಟೀಮ್ : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಕುಂದಾಪುರ (ಆ, 09) : ಆಸಾಡಿ ಅಮಾಸಿ ಆಗಸ್ಟ್ 8 ರ ವಿಶ್ವ ಕುಂದಾಪ್ರ ಕನ್ನಡ ದಿನ ಅಂಗವಾಗಿ ಅಕ್ಷೋಹಿಣಿ ಟೀಮ್ ಕುಂದಾಪುರ ಆಯೋಜಿಸಿದ “ನಾನು ನನ್ನ ಕುಂದಾಪ್ರ “ಎನ್ನುವ ವಿಷಯದ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆಯ ಮೊದಲ ಬಹುಮಾನ ಮಂಜುನಾಥ ಗುಂಡ್ಮಿ ಹಾಗೂ ದ್ವೀತಿಯ ನವ್ಯಶೀ ದೊರೆತಿದ್ದು, ಸಂಸ್ಥೆಯ ವತಿಯಿಂದ ವಿಜೇತರಿಗೆ ಹಸ್ತಾಂತರಿಸಲಾಯಿತು.
ಡಾನ್ ಬಾಸ್ಕೋ ಸ್ಕೂಲ್ ತ್ರಾಸಿ : ಸೈಬರ್ ಸೆಕ್ಯುರಿಟಿ ಅರಿವು ಕಾರ್ಯಕ್ರಮ
ತ್ರಾಸಿ (ಆ, 10) : ಇಲ್ಲಿನ ಡಾನ್ ಬಾಸ್ಕೋ ಸೀನಿಯರ್ ಸೆಕೆಂಡರಿ ಶಾಲೆಯ ವೆಲ್ಫೇರ್ ವಿಭಾಗದ ಆಶ್ರಯದಲ್ಲಿ ಇತ್ತೀಚೆಗೆ ವರ್ಚುವಲ್ ಮೋಡ್ನಲ್ಲಿ ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಿತು. ಉಡುಪಿಯ ಪೃಥ್ವಿಷನ್ ಸಂಸ್ಥೆಯ ಸ್ಥಾಪಕರು ಹಾಗೂ ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಪರಿಣಿತರಾಗಿರುವ ಶ್ರೀ ಪೃಥ್ವೀಶ್ ಕೆ, ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸೈಬರ್ ಭದ್ರತೆಗೆ ಸಂಬಂಧಿಸಿದ ಪ್ರಸ್ತುತ ಸಮಸ್ಯೆಗಳ […]
ರೋಟರಿ ಕ್ಲಬ್ ಕುಂದಾಪುರ : ಸರಕಾರಿ ಶಾಲಾ ಮಕ್ಕಳಿಗೆ ಅಗತ್ಯವಿರುವ ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಔಷಧಿ ಕಿಟ್ ಹಸ್ತಾಂತರ
ಕುಂದಾಪುರ (ಆ, 09) : ಕೋವಿಡ್ 19 ಎರಡನೇ ಅಲೆ ಮುಗಿದಿದ್ದು, ಮೂರನೆಯ ಅಲೆಯು ಮಕ್ಕಳ ಜೀವಕ್ಕೆ ಅಪಾಯ ಇರುವುದರ ಬಗ್ಗೆ ತಜ್ಞರ ವರದಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ಚಿಕ್ಕಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸ ಬೇಕಾಗಿದ್ದು , ವಿಶೇಷವಾಗಿ ತಾಲೂಕಿನ ಸರಕಾರಿ ಶಾಲೆಯ ಪ್ರಾಥಮಿಕ ತರಗತಿಗಳಿಂದ ಹತ್ತನೇ ತರಗತಿಯ ಮಕ್ಕಳ ಆರೋಗ್ಯ ತಪಾಸಣೆಯನ್ನು ನುರಿತ ವೈದ್ಯರಿಂದ ಮಾಡಿಸಿ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಇದ್ದಲ್ಲಿ ಅಂತಹ ಮಕ್ಕಳಿಗೆ […]
ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕುಂದಾಪುರ (ಆ, 10) : ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಸಾಂಪ್ರದಾಯಿಕವಾಗಿ ಕಳಸಿಗೆಗೆ ಭತ್ತ ಹೊಯ್ಯುವುದರ ಮೂಲಕ ಕುಂದಗನ್ನಡದ ರಾಯಭಾರಿ, ಸಾಂಸ್ಕೃತಿಕ ಚಿಂತಕ ಹಾಗೂ ಶಿಕ್ಷಕ ಮನು ಹಂದಾಡಿಯವರು ಉದ್ಘಾಟಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾಷೆಯನ್ನು ಬಳಸುವಿಕೆ, ಬೆಳೆಸುವಿಕೆ ತನ್ಮೂಲಕ ಉಳಿಸುವಿಕೆ ಕುರಿತಂತೆ ಹಾಗೂ ಕುಂದಾಪ್ರ ಭಾಷಾ ಸೊಗಡು ರಂಜನೀಯವಾಗಿ ವಿವರಿಸಿದರು. ಮುಖ್ಯ ಅತಿಥಿಯಾಗಿ […]
ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ : ದಾಖಲೆ ನಿರ್ಮಿಸಿದ ಕುಂದಾಪುರದ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ
ಕುಂದಾಪುರ (ಆ, 10) : ಈ ವರ್ಷದ 10ನೇ ತರಗತಿಯ ಪರೀಕ್ಷೆ ವಿದ್ಯಾರ್ಥಿಗಳಿಗೆ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದರೂ, ಅಂತಿಮವಾಗಿ ಬಹು ಆಯ್ಕೆಯ ಆಧಾರದ ಮೇಲೆ ಪರೀಕ್ಷೆ ನಡೆಸಿ, ನಿನ್ನೆ ಫಲಿತಾಂಶ ಹೊರಬಂದಿದೆ. ಫಲಿತಾಂಶ ಪಟ್ಟಿಯಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಾಖಲೆ ನಿರ್ಮಿಸಿದ್ದು, ವಿದ್ಯಾರ್ಥಿಗಳಾದ ಅನುಶ್ರೀ ಶೆಟ್ಟಿ, ಪ್ರಣೀತ ಹಾಗೂ ಸೃಜನ್ ಭಟ್ 625ಕ್ಕೆ 625 ಅಂಕಗಳನ್ನು ಪಡೆದು ಹೊಸ ಭಾಷ್ಯ […]
ಖ್ಯಾತ ಜಾನಪದ ಗಾಯಕ ಗಣೇಶ್ ಗಂಗೊಳ್ಳಿ ಯವರಿಗೆ ಗೌರವ ಡಾಕ್ಟರೇಟ್ ಪದವಿ
ಕುಂದಾಪುರ (ಆ, 09) : ಖ್ಯಾತ ಜಾನಪದ ಗಾಯಕ ಗಣೇಶ್ ಗಂಗೊಳ್ಳಿಯವರಿಗೆ ಜಾನಪದ ಸಂಗೀತ, ಸಂಘಟನೆ ಹಾಗೂ ಸಂಘ- ಸಂಸ್ಥೆಗಳಲ್ಲಿ ನ ವಿಶಿಷ್ಟ ಸೇವೆಯನ್ನು ಗುರುತಿಸಿ ತಮಿಳುನಾಡಿನ ಇಂಡಿಯನ್ ಎಂಪಯರ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ. ಶ್ರೀಯುತರು ಜಾನಪದ ಗಾಯಕರಾಗಿ ಸರಿಸುಮಾರು 32 ವರ್ಷ ದಿಂದ ನಮ್ಮ ನಾಡು ಅಲ್ಲದೆ ದೇಶದ ಹಲವಾರು ರಾಜ್ಯ ಗಳಲ್ಲಿ ಜನಮನ್ನಣೆ ಗಳಿಸಿದ್ದಾರೆ. ಪ್ರತಿಷ್ಠಿತ ಕನ್ನಡ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿರುವ […]
ಕುಂದಾಪುರದ ಅನನ್ಯತೆ
ಕುಂದಾಪುರ (ಕುಂದಗನ್ನಡ) ಕನ್ನಡ ನಾಡಿನ ವಿಭಿನ್ನ ಹಾಗೂ ವಿಶಿಷ್ಟ ಭಾಷಾ ಸೊಗಡಿನ ಪ್ರದೇಶ. ಸುತ್ತ ಮುತ್ತ ಹಸಿರಿನಿಂದ ಮೈದುಂಬಿ ಕಂಗೊಳಿಸುತ್ತ ,ಹಕ್ಕಿಗಳ ಚಿಲಿಪಿಲಿ ಕಲರವ ಕೇಳುತ್ತ, ಪಶ್ಚಿಮ ದಿಕ್ಕಿನಗಲಕ್ಕೂ ಸಮುದ್ರದ ಬೋರ್ಗರೆಯುವ ಅಲೆಗಳನ್ನು ನೋಡುತ್ತಾ ಖುಷಿ ನೀಡುವ ತಾಣ ನಮ್ಮ ಕುಂದಾಪುರ. ಕುಂದಾಪುರ ಬರೀ ಕರ್ನಾಟಕ ರಾಜ್ಯ ಹಾಗೂ ಭಾರತ ದೇಶದಲ್ಲಿ ಅಲ್ಲದೆ ಅನೇಕ ಕಾರಣಗಳಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ರಾಜ್ಯದ ಇತರೆ ಭಾಗಗಳಿಗಿಂತ ವಿಶಿಷ್ಟ ಶೈಲಿಯ ಅಸ್ಮೀತೆ, ಸಂಸ್ಕೃತಿ ಮತ್ತು […]
ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕುಂದಾಪುರ (ಆ, 5) : ಕುಂದಗನ್ನಡ ನಾಡು-ನುಡಿ, ಸಂಸ್ಕೃತಿಯ ಕುರಿತಾಗಿ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕುಂದಗನ್ನಡ ಭಾಗದ ಜನತೆ ಆಚರಿಸುವ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕುಂದಾಪುರದ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಗಸ್ಟ್ 09 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕುಂದಾಪ್ರ ಕನ್ನಡದ ರಾಯಭಾರಿ, ಸಾಂಸ್ಕೃತಿಕ ಚಿಂತಕ ಹಾಗೂ ಶಿಕ್ಷಕರಾದ ಶ್ರೀ ಮನು ಹಂದಾಡಿಯವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ […]










