ಕುಂದಾಪುರ (ಜೂನ್, 15) : ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಪ್ರಸಿದ್ದ ಮೈಕ್ರೋಸಾಫ್ಟ್ ನ ಟ್ರೈನಿಂಗ್ ಪಾರ್ಟ್ನರ್ ಕಂಪನಿಯು ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ತನ್ನ ಬೆಳವಣಗೆಯ ಚಟುವಟಿಕೆಗೆ ಸಾಕ್ಷಿಯಾಯಿತು. ಈ ಒಪ್ಪಂದದಿಂದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯ ಮತ್ತು ಹೊಸ ತಂತ್ರಜ್ಞಾನ ಭರಿತ ಕೋರ್ಸ್ ಗಳನ್ನು ಕಲಿತು, ವಿಶ್ವದ ಪ್ರಸಿದ್ಧ ಸಾಫ್ಟ್ ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್ ನಿಂದ ಪ್ರಮಾಣಪತ್ರ ಪಡೆಯುವ ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತರಾಗದೆ, ಜ್ಞಾನ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ನರೇಂದ್ರ ಎಸ್ ಗಂಗೊಳ್ಳಿಗೆ ಶಿಕ್ಷಕ ರತ್ನ ಗೌರವ
ಗಂಗೊಳ್ಳಿ ( ಜೂ, 13): ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಯುವ ಸಾಹಿತಿ ಹಾಗೂ ಅಂಕಣಕಾರರೂ ಆಗಿರುವ ಶ್ರೀ ನರೇಂದ್ರ ಎಸ್ ಗಂಗೊಳ್ಳಿ ಅವರ ವಿವಿಧ ಕ್ಷೇತ್ರಗಳಲ್ಲಿನ ಬಹುಮುಖ ಪ್ರತಿಭೆಯನ್ನು ಪರಿಗಣಿಸಿ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಮಂಗಳೂರು ವಿಭಾಗದ ವತಿಯಿಂದ ಶಿಕ್ಷಕ ರತ್ನ ಗೌರವವನ್ನು ನೀಡಿ ಪುರಸ್ಕರಿಸಲಾಗಿದೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರ್ಡಿ ಕೊಡ್ಲಾಡಿ : 2021-22 ನೇ ಶೈಕ್ಷಣಿಕ ಸಾಲಿನ ದಾಖಲಾತಿ ಆರಂಭ
ವಂಡ್ಸೆ (ಜೂ, 13): ಕೊಡ್ಲಾಡಿ -ಮಾರ್ಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಜೂನ್, 15 ರಿಂದ ಆರಂಭವಾಗಲಿದೆ. ಜುಲೈ ,1 ರಿಂದ ಬೋಧನಾ ಹಾಗೂ ಕಲಿಕಾ ಪ್ರಕ್ರಿಯೆಗಳು ಆರಂಭವಾಗಲಿದ್ದು ಇದಕ್ಕೆ ಸಂಬಂಧಪಟ್ಟಂತೆ ಪೂರ್ವ ಸಿದ್ಧತೆಗಳನ್ನು ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಕೈಗೊಳ್ಳಲಾಗುತ್ತಿದೆ. Covid-19ನ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಬಹುತೇಕ ಸೆಪ್ಟಂಬರ್ ವರೆಗೆ ಆಫ್ಲೈನ್ (ವಿದ್ಯಾರ್ಥಿಗೆ ನೇರ ಬೋಧನೆ) ತರಗತಿಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ […]
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿ ಆಸೆ ಪೂರೈಸುವ ಆಶಯದಿಂದ ರೂಪು ತಳೆದ ಸಂಸ್ಥೆ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ವಿಶೇಷ ಸಾಲಿನಲ್ಲಿ ಗುರುತಿಸಿಕೊಂಡ ಸಂಸ್ಥೆ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ. ‘ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾಗಬೇಕು’ ಎಂಬುದು ಕಾಲೇಜಿನ ಅಧ್ಯಕ್ಷರು ಮತ್ತು ಬೈಂದೂರು ಶಾಸಕರಾದ ಶ್ರೀ. ಬಿ. ಎಂ. ಸುಕುಮಾರ ಶೆಟ್ಟಿಯವರ ಧ್ಯೇಯ. ಅಧ್ಯಕ್ಷರ ಧ್ಯೇಯ ವಾಕ್ಯವನ್ನು ಸಾರ್ಥಕಗೊಳಿಸುವ ಪಯಣದೊಂದಿಗೆ ಸಂಸ್ಥೆಯು 2021-22ರ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಗೊಳಿಸಿದೆ. 130 ವಿದ್ಯಾರ್ಥಿಗಳೊಂದಿಗೆ ಹನ್ನೊಂದು ವರ್ಷಗಳ ಹಿಂದೆ […]
ಐಎಸ್ಎಸಿ : ಸೈಬರ್ ಭದ್ರತಾ ತರಬೇತಿ ಕೋರ್ಸ್ಗಳಿಗೆ ನೋಂದಣಿ ಪ್ರಾರಂಭ
ಉಡುಪಿ (ಜೂ, 09): ಸೈಬರ್ ಉಲ್ಲಂಘನೆಗಳು ಬಹಳ ಗಂಭೀರ ವಿಷಯವಾಗಿದೆ. ಜಗತ್ತಿನಾದ್ಯಂತ ವ್ಯಾಪಿಸಿರುವ ಸೈಬರ್ ಉಲ್ಲಂಘನೆಗಳ ಘಟನೆಗಳನ್ನು ವಿಶ್ವಸಂಸ್ಥೆಯ ಬಹಳ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿದೆ. ಆ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ತನ್ನ ನಿರ್ಣಯಗಳ ಮೂಲಕ ಸದಸ್ಯ ರಾಷ್ಟ್ರಗಳು ಜಾಗೃತಿ ಅಭಿಯಾನಗಳನ್ನು ನಡೆಸಬೇಕೆಂದಿದೆ. ಸದಸ್ಯ ರಾಷ್ಟ್ರಗಳು ಸೈಬರ್ ಭದ್ರತಾ ಸಾಮರ್ಥ್ಯದ ಹೆಚ್ಚಿಸಿಕೊಳ್ಳಲು ನೆಟಿಜನ್ಗಳಿಗೆ ತರಬೇತಿ ನೀಡುವುದು ಅಂತರರಾಷ್ಟ್ರೀಯ ಆದೇಶವಾಗಿದೆ. ರಾಷ್ಟ್ರೀಯ ಭದ್ರತಾ ಸಲಹಾ ಸಮಿತಿ ಮತ್ತು ಮಾನ್ಯ ಅಪೆಕ್ಸ್ ನ್ಯಾಯಾಲಯವು ಹೆಚ್ಚಿನ ಜಾಗೃತಿಯ […]
ಮೂಡ್ಲಕಟ್ಟೆ ಎಂ ಐ ಟಿ : ವಿಶ್ವ ಪರಿಸರ ದಿನಾಚರಣೆ
ಕುಂದಾಪುರ (ಜೂ, 06): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಪರಿಸರದ ದಿನದ ಪ್ರಯುಕ್ತ ಆನ್ಲೈನ್ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪರಿಸರ ಸಂರಕ್ಷಣೆ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೋ. ದೀಪಕ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಪರಿಸರವನ್ನು ಸ್ವಚ್ಚ ವಾಗಿಡುವುದರ ಕುರಿತು ಮಾಹಿತಿ ನೀಡಿದರು. ಗಿಡ- ಮರಗಳನ್ನು ಬೆಳೆಸುವುದು ನಾವು ಸಮಾಜಕ್ಕೆ ನೀಡುವ ಮಹತ್ತರವಾದ ಕೊಡುಗೆಯಾಗಿದ್ದು […]
ಕರೋನಾದ ಕಾರ್ಮೋಡದಲ್ಲಿ ಕಾಲೇಜಿನ ಆ ದಿನಗಳು
ಸುಂದರ ಪ್ರಪಂಚದಲ್ಲಿ ರೆಕ್ಕೆ ಬಲಿತ ಹಕ್ಕಿಯಂತೆ ಹಾರಾಡುತ್ತಿದ್ದ ನಾವುಗಳು ಕರೋನ ಮಹಾಮಾರಿಗೆ ಸಿಲುಕಿ ನೆಲೆ ಇಲ್ಲದ ನಡುಗಾಟದ ಜೀವನಕ್ಕೆ ವಿಲವಿಲ ಒದ್ದಾಡುವಂತಹ ಪರಿಸ್ಥಿತಿ. ಅತ್ತ ಕಾಲೇಜಿನ ಸವಿ-ಸಡಗರ ಇಲ್ಲ, ಇತ್ತ ಮುಂದಿನ ಜೀವನದ ಸ್ಪಷ್ಟತೆ ಕಣ್ಣೆದುರಿಗಿಲ್ಲ. ಎಲ್ಲವೂ ಸರಿ ಇದ್ದಿದ್ದರೆ ಅಂತಿಮ ವರ್ಷದ ಪದವಿ ಮುಗಿಸಿ ಎಲ್ಲೋ ಒಂದು ಕಡೆ ನೆಲೆ ಕಂಡುಕೊಳ್ಳುತ್ತಾ ಇದ್ದೇವು. ಆದರೆ ಈ ಕಾಣದ ಕರೋನ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿ ಬಿಟ್ಟಿದೆ. ತರಗತಿ ಗೋಡೆಗಳ […]
ಸೈಬರ್ ಸುರಕ್ಷತೆ ಸುದ್ದಿ ಪತ್ರದ ಮೊದಲನೇ ಆವೃತ್ತಿಯಾದ “ಸೈಬರ್ ವಾರ್ತಿಕಾ” ಬಿಡುಗಡೆ
ಬೆಂಗಳೂರು (ಜೂ. 06): CySecK ಸೈಬರ್ ಸೆಕ್ಯೂರಿಟಿ ಕರ್ನಾಟಕ ಇದು ಸೈಬರ್ ಶಿಕ್ಷಣವನ್ನು ಕರ್ನಾಟಕದಲ್ಲಿ ಒಂದು ಜನಾಂದೋಲನ ಕಾರ್ಯಕ್ರಮವಾಗಿ ರೂಪಿಸುತ್ತಿದ್ದು, ಇದು ತನ್ನ ದ್ವಿಭಾಷಾ ಸೈಬರ್ ಸುರಕ್ಷತೆ ಸುದ್ದಿಪತ್ರದ ಮೊದಲನೇ ಆವೃತ್ತಿಯಾದ “ಸೈಬರ್ ವಾರ್ತಿಕಾ” ವನ್ನು ನಿಮ್ಮೊಂದಿಗೆ ಹಂಚಿಕೊಂಡಿದೆ. ಈ ಸುದ್ದಿ ಪತ್ರದಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉಪಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ಸುದ್ದಿಪತ್ರವು ಆಸಕ್ತಿದಾಯಕ ಮಾಹಿತಿಗಳನ್ನು ಒಳಗೊಂಡಿದ್ದು, “ರಕ್ಷಕ ಮತ್ತು ಭಕ್ಷಕ” ಸೈಬರ್ ಮ್ಯಾಸ್ಕಾಟ್ಗಳ ಮಾರ್ಗದರ್ಶನಗಳನ್ನು ಇದು […]
ಐಐಐಟಿ ಧಾರವಾಡ : ಬಿ.ಟೆಕ್. ಹಾಗೂ ಬಿ.ಇ. ಮುಗಿಸಿದ ಮಹಿಳಾ ಪದವೀಧರರಿಗೆ ಸೈಬರ್ ಸೆಕ್ಯೂರಿಟಿ ಉಚಿತ ತರಬೇತಿ ಕಾರ್ಯಕ್ರಮ
ಉಡುಪಿ (ಜೂನ್, 06) : CySecK ಸೈಬರ್ ಸೆಕ್ಯೂರಿಟಿ ಕರ್ನಾಟಕ ಇದು ಸೈಬರ್ ಶಿಕ್ಷಣವನ್ನು ಕರ್ನಾಟಕದಲ್ಲಿ ಒಂದು ಜನಾಂದೋಲನ ಕಾರ್ಯಕ್ರಮವಾಗಿ ರೂಪಿಸುತ್ತಿದ್ದು, ಸೈಬರ್ ಶಿಕ್ಷಣದ ಜೊತೆಗೆ ತಂತ್ರಜ್ಞಾನದ ಗುಣಮಟ್ಟ ಕಾಪಾಡಿಕೊಳ್ಳುವಿಕೆ, ಅವಿಷ್ಕಾರ ತಂತ್ರ, ಸೃಜನಶೀಲತೆ, ತಂತ್ರಜ್ಞಾನದ ಸದ್ಬಳಕೆ, ಸೈಬರ್ ಸೆಕ್ಯೂರಿಟಿ ಕುರಿತಾದ ಅರಿವು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಸೈಬರ್ ಶಿಕ್ಷಾ ,ಇದು ಮೈಕ್ರೋಸಾಫ್ಟ್ ಹಾಗೂ ಡಿ.ಎಸ್.ಐ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ಐಐಐಟಿ ಧಾರವಾಡ ಹಾಗೂ CySek ಕರ್ನಾಟಕದ ಜಂಟಿ ಆಶ್ರಯದಲ್ಲಿ […]
ಸಂತ ಮೇರಿ ಮಹಾವಿದ್ಯಾಲಯ, ಶಿರ್ವ : ವಿಶ್ವ ಪರಿಸರ ದಿನಾಚರಣೆ
ಶಿರ್ವ(ಜೂ, 5): ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಎನ್ಸಿಸಿ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಘಟಕದ ಸ್ವಯಂಸೇವಕರ ಮನೆಯ ಅಂಗಳಗಳಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು. ಕಾಲೇಜಿನ ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಯುವಕರನ್ನು ಪ್ರೇರೇಪಿಸಿದರು. ಕಾಲೇಜಿನ ಪ್ರಾಂಶುಪಾಲರು ಡಾ|ಹೆರಾಲ್ಡ್ ಐವನ್ ಮೋನಿಸ್ ರವರು ಎಲ್ಲರಿಗೂ ಶುಭಹಾರೈಸಿದರು. ಎನ್ಸಿಸಿ ಘಟಕದ ಸಹ ಸಂಯೋಜಕಿ ಯಶೋಧಾ […]










