ಗಂಗೊಳ್ಳಿ (ಜೂ, 10) : ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಅವರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಯಾವುದೇ ಸಂಸ್ಥೆಗೆ ಘನತೆಯನ್ನು ತಂದು ಕೊಡುತ್ತದೆ. ಪ್ರತಿ ಸಂಘ- ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಭಟ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ನಡೆದ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬಿಲ್ಲವರ […]
Month: June 2023
ಕುಂದಾಪುರ: ಸ್ವಾತಂತ್ರ್ಯ ಹೋರಾಟಗಾರ ಸಟ್ವಾಡಿ ಬಿ.ಎಸ್.ಸೂರಪ್ಪ ಶೆಟ್ಟಿ ರವರ ಮನೆಯಲ್ಲಿ ನಾಮ ಫಲಕ ಅನಾವರಣ
ಕುಂದಾಪುರ(ಜೂ.10): ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಟ್ವಾಡಿ ಬಿ.ಎಸ್.ಸೂರಪ್ಪ ಶೆಟ್ಟಿ ಯವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎಂದು ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಸ್ವರಾಜ್ಯ 75 ತಂಡದ 24ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮಕ್ಕೆ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದಜೆ೯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ,ಹಸ್ತ ಚಿತ್ರ ಫೌಂಡೇಶನ್ ಕ್ವಾಡಿ,ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ,ಜನಸೇವಾ ಟ್ರಸ್ಟ್ […]
ಸರಸ್ವತಿ ವಿದ್ಯಾಲಯ ಗಂಗೊಳ್ಳಿ : ವಾರ್ಷಿಕ ಸಂಚಿಕೆ “ದೃಷ್ಟಿ ” ಅನಾವರಣ
ಗಂಗೊಳ್ಳಿ(ಜೂ,9): ಬದುಕಿನಲ್ಲಿ ಬರವಣಿಗೆಯಷ್ಟು ಖುಷಿ ಕೊಡುವ ಮತ್ತೊಂದು ದೊರಕದು. ನೋವು ಗಳನ್ನು ನಲಿವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ. ಸೂಕ್ಷ್ಮ ಸಂವೇದನೆಯಲ್ಲಿ ಹುಟ್ಟಿಕೊಂಡ ಬರವಣಿಗೆ ಹೆಚ್ಚು ಪ್ರಬಲವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಬರವಣಿಗೆಯ ಹವ್ಯಾಸಗಳನ್ನು ಬೆಳೆಸಿಕೊಂಡರೆ ಮುಂದೆ ಆ ವಿದ್ಯಾ ಸಂಸ್ಥೆ ನಿಮ್ಮ ಬಗೆಗೆ ಹೆಮ್ಮೆ ಪಡುವಂತಾಗುತ್ತದೆ” ಎಂದು ಖ್ಯಾತ ಕತೆಗಾರರು, ಲಲಿತ ಪ್ರಬಂಧ ಬರಹಗಾರರು ಆಗಿರುವ ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು […]
ಚಿತ್ತೂರು: ಜೂನ್ 23 ರಂದು ನೈಕಂಬ್ಳಿ ಮಹಾಲಿಂಗೇಶ್ವರ ದೇವಸ್ಥಾನದ ವರ್ದಂತಿ ಉತ್ಸವ
ಚಿತ್ತೂರು(ಜೂ,9):ಗ್ರಾಮದ ನೈಕಂಬ್ಳಿ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ವರ್ದಂತಿ ಉತ್ಸವ ಇದೇ ಜೂನ್ 23 ರಂದು ನೆಡೆಯಲಿದೆ. ಆ ದಿನ ಬೆಳಿಗ್ಗೆ 9 ಗಂಟೆಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆಡಯಲಿದ್ದು 12 ಘಂಟೆಗೆ ಶ್ರೀಮತಿ ಸುಧಾರಾಜಗೋಪಾಲ್ ಭಟ್ ಮತ್ತು ಬಳಗದವರಿಂದ ಭಕ್ತಿ ಸುಧೆ ಕಾರ್ಯಕ್ರಮ ನೆಡೆಯಲಿದೆ. ಮದ್ಯಾಹ್ನ ಮಹಾಪೂಜೆ ನಂತರ ಅನ್ನಸಂತರ್ಪಣೆ ನೆಡೆಯಲಿದ್ದು ಸಂಜೆ 7 ಘಂಟೆಗೆ ರಂಗಪೂಜೆ ಹಾಗೂ ರಾತ್ರಿ 8 ರಿಂದ ಸ್ಥಳೀಯ ಪ್ರೇರಣಾ ಯುವ ವೇದಿಕೆ ವತಿಯಿಂದ […]
ಕಸವನ್ನು ಮರುಬಳಕೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ಸಾಧ್ಯ : ರೊ. ಚಂದ್ರಶೇಖರ್ ಸಾಲಿಯಾನ್
ಶಿರ್ವ(ಜೂ,06): ಕಸವನ್ನು ಮರುಬಳಕೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ಸಾಧ್ಯ ಎಂದು ಇನ್ನಂಜೆ ಗ್ರಾಮ ಪಂಚಾಯತು ಕಾರ್ಯದರ್ಶಿ ರೊ. ಚಂದ್ರಶೇಖರ್ ಸಾಲಿಯಾನ್ ನುಡಿದರು. ಅವರು ಶಿರ್ವ ಸಂತ ಮೇರಿ ಕಾಲೇಜಿನ ಯುವ ರೆಡ್ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ & ರೇಂಜರ್ಸ್ ಘಟಕ ಹಾಗೂ ರೋಟರಿ ಕ್ಲಬ್ ಶಿರ್ವ ಇದರ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ ಮಳೆ ನೀರು ಕೊಯ್ಲು ಅರಿವು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ […]
ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಸನ್ಮಾನ
ಕುಂದಾಪುರ( ಜೂನ್ 05): ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ.ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಅಭಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪುರಸ್ಕೃತರಾದ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಜೂನ್ 3 ರಂದು ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ರಕ್ಷಕ- ಶಿಕ್ಷಕ ಸಂಘದ ಮಹಾಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀ ವಿನ್ಸೆಂಟ್ ಡಿ ಸೋಜಾ ಸನ್ಮಾನಿಸಿ […]
ಜೆಸಿಐ ಕುಂದಾಪುರ ಸಿಟಿ: ಅಗ್ನಿಶಾಮಕ ಠಾಣೆಯ ಕೃಷ್ಣ ನಾಯ್ಕ್ ರವರಿಗೆ ಸನ್ಮಾನ
ಕುಂದಾಪುರ (ಜೂ,04) : ಇಲ್ಲಿನ ಅಗ್ನಿಶಾಮಾಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷ್ಣ ನಾಯ್ಕ್ ರವರಿಗೆ ಜೆಸಿಐ ಕುಂದಾಪುರ ಸಿಟಿ ವತಿಯಿಂದ ಸನ್ಮಾನ ಕಾರ್ಯಕ್ರಮ ಕೋಟೇಶ್ವರದ ಸಹನಾ ಕನ್ವೆನ್ಷನ್ ನ ಕೃಷ್ಣ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು ವೃತ್ತಿಯನ್ನು ನಾವು ಗೌರವಿಸಬೇಕು ಅದನ್ನು ಪ್ರೀತಿ ಯಿಂದ ಸೇವೆ ಮಾಡಬೇಕು. ನಾವು ಮಾಡುತ್ತಿರುವ ಕೆಲಸ ಅದು ಎಷ್ಟೇ ಕಷ್ಟವಾದರೂ ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡರೆ ಮಾತ್ರ ಯಶಸ್ಸು ಸಿಗುತ್ತದೆ ಎಂದು ಸನ್ಮಾನ ಸ್ವೀಕರಿಸಿ ಕೃಷ್ಣ […]
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಹಾಗೂ ಶಿರ್ಡಿ ಸಾಯಿಬಾಬಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಗುಂಬೆ ಘಾಟ್ ಸ್ವಚ್ಛತೆ
ಹೆಬ್ರಿ (ಜೂ,04):ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಮತ್ತು ಶಿರ್ಡಿ ಸಾಯಿಬಾಬ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಗುಂಬೆಯ ಘಾಟಿಯ ಇಕ್ಕೆಲಗಳನ್ನು “ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ, ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ಜರಗಿತು. ಈ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಅನನ್ಯ ಪ್ರಾಣಿ, ಪಕ್ಷಿ ಪ್ರಬೇಧಗಳಿವೆ. ನಾವು ಮಾಡುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಅವುಗಳ ಜೀವನ ದುಸ್ತರವಾಗುವಂತಾಗಿದೆ. ಆದ್ದರಿಂದ ನಾವು ಪ್ರಕೃತಿಯನ್ನು ಹಾಳುಗೆಡಹುವ […]
ಎಂಐಟಿಕೆ ಮೂಡ್ಲಕಟ್ಟೆ:ವಿದ್ಯಾರ್ಥಿಗಳ ಪ್ರಾಜೆಕ್ಟ್ ಗೆ KSCST ಅನುದಾನ
ಕುಂದಾಪುರ (ಜೂ,4) 2022-23 ನೇ ಸಾಲಿಗೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಕುಂದಾಪುರ ಇದರ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಮೂರು ಪ್ರಾಜೆಕ್ಟ್ ಪ್ರಸ್ತಾವನೆಗಳು : ಕೆ.ಎಸ್ .ಸಿ .ಎಸ್. ಟಿ ಅನುದಾನವನ್ನು ಪಡೆದಿವೆ. ಎಲೆಕ್ಟ್ರಾನಿಕ್ಸ್ ವಿಭಾಗದ ಸುಮನ್ ಕಾನ್ ಆರ್ ಬಾಗೇವಾಡಿ, ಪ್ರಥಮ ರಾಜೇಶ್ ರಾಯ್ಕರ್, ವೀರೇಂದ್ರ ಪಿ ಗೌಡರ್, ರಘು ಬಿ ನಾಯ್ಕರ್ “ಐಒಟಿ ಬಳಸಿ ಟ್ರಾನ್ಸ್ ಫಾರಮರ್ ಹೆಲ್ತ್ ಮಾನಿಟರಿಂಗ್ ಸಿಸ್ಟಮ್” ಎಂಬ ತಮ್ಮ ಯೋಜನೆಯ […]
ಸರಸ್ವತಿ ವಿದ್ಯಾಲಯ ಗಂಗೊಳ್ಳಿ: ಪ್ರಥಮ ಪಿಯುಸಿ ಆರಂಭೋತ್ಸವ
ಗಂಗೊಳ್ಳಿ(ಜೂ,4):ವಿದ್ಯಾರ್ಥಿಗಳು ಪಠ್ಯದ ಕಲಿಕೆಯ ಜೊತೆ ಜೊತೆಗೆ ತಮ್ಮ ಸರ್ವಾಂಗೀಣ ವ್ಯಕ್ತಿತ್ವದ ಅಭಿವೃದ್ಧಿಯ ಕಡೆಗೂ ಗಮನ ಹರಿಸಬೇಕು. ಉತ್ತಮ ವ್ಯಕ್ತಿತ್ವದಿಂದ ಯಶಸ್ಸು ಕಾಣಲು ಸಾಧ್ಯ ಎಂದು ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಷಿಯೆಷನ್ ಅಧ್ಯಕ್ಷ ಡಾ. ಕಾಶಿನಾಥ್ ಪೈ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ತರಗತಿಗಳ ಆರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಸಂಸ್ಕøತ ಉಪನ್ಯಾಸಕ ವೆಂಕಟೇಶ ಮೂರ್ತಿ ಎನ್. ಸಿ ಪಠ್ಯಇತರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. […]