ಗಂಗೊಳ್ಳಿ(ಜೂ ,09): “ಸಾಹಿತ್ಯದ ಓದು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು, ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಸಂಗೀತ, ಸಾಹಿತ್ಯ, ಕಲೆಗಳಲ್ಲಿ ಆಸಕ್ತಿಯಿಲ್ಲದವನು ಬಾಲವಿಲ್ಲದ ಪಶುವಿನಂತೆ. ಬದುಕನ್ನು ಹೊಸ ಬಗೆಯಲ್ಲಿ ಕಟ್ಟಿಕೊಳ್ಳುವಲ್ಲಿ ಬರವಣಿಗೆ ಪೂರಕವಾದದ್ದು. ವಾರ್ಷಿಕ ಸಂಚಿಕೆ ಎಂಬುದು ಒಂದು ವಿದ್ಯಾ ಸಂಸ್ಥೆಯ ಮುಖವಾಣಿಯಿದ್ದಂತೆ. ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ಒಳ್ಳೆಯ ವೇದಿಕೆ” ಎಂದು ಲೇಖಕಿ, ಕವಯಿತ್ರಿ ಸಾಲಿಗ್ರಾಮ ಚಿತ್ರಪಾಡಿ ಸುಮನಾ ಆರ್. ಹೇರ್ಳೆ ಹೇಳಿದರು. ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕ […]
Day: June 9, 2025
ಬಿ.ಬಿ. ಹೆಗ್ಡೆ ಕಾಲೇಜು : ರಾಣಿ ಅಬ್ಬಕ್ಕ @ 500 –ಉಪನ್ಯಾಸ
ಕುಂದಾಪುರ (ಜೂ,06): ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ರಾಣಿ ಅಬ್ಬಕ್ಕ ಕರಾವಳಿ ಕರ್ನಾಟಕದ ಧೀಮಂತ ಶಕ್ತಿ. ವಸಾಹತುಶಾಹಿ ಆಳ್ವಿಕೆಗೆ ಅಬ್ಬಕ್ಕ ನೀಡಿದ ಪ್ರತಿಕ್ರಿಯೆ ಸ್ತುತ್ಯಾರ್ಹ. ಅಂತವರ ವ್ಯಕ್ತಿತ್ವವನ್ನು ಇಂದಿನ ಯುವ ಜನತೆಗೆ ಪರಿಚಯಿಸುವುದು ಮುಖ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಡಾ| ವಿ.ಕೆ. ಯಾದವ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ, ಮಂಗಳೂರು […]
ಕಾರ್ಕಳ : ಸಿ ಎ ಟಿ ಸಿ ಶಿಬಿರದಲ್ಲಿ ಎನ್ ಸಿ ಸಿ ಕ್ಯಾಡೆಟ್ಗಳಿಗೆ ವಿಪತ್ತು ಪರಿಹಾರ ನಿರ್ವಹಣ ಕೌಶಲ ತರಬೇತಿ
ಕಾರ್ಕಳ (ಜೂ 10): 21 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಅಯೋಜಿಸಿದ ಹತ್ತು ದಿನಗಳ ಕಂಬೈನ್ಡ್ ಆನ್ಯುವಲ್ ಟ್ರೈನಿಂಗ್ ಕ್ಯಾಂಪ್ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಪನ್ನಗೊಂಡಿತು. ಈ ತರಬೇತಿ ಶಿಬಿರದಲ್ಲಿ 592 ಎನ್.ಸಿ.ಸಿ ಕ್ಯಾಡೆಟ್ಗಳು ಭಾಗಹಿಸಿದ್ದು ಸೇನಾ ತರಬೇತಿ, ಶಿಬಿರ ಜೀವನ, ದೈಹಿಕ ತರಬೇತಿ (ಕಸರತ್ತು) , ಫೈರಿಂಗ್, ಅಡೆತಡೆಗಳನ್ನೆದುರಿಸುವ ಕೋರ್ಸಿನ ತರಬೇತಿಯ ಪ್ರಯೋಜನ ಪಡೆದುಕೊಂಡರು. ಯುವ ಆಪದ ಮಿತ್ರ ಯೋಜನೆಯಡಿಯಲ್ಲಿ ಜಿಲ್ಲಾ ವಿಪತ್ತು ಪರಿಹಾರ […]
ಕುಂದಾಪುರ : ಯುವ ಬಂಟರ ಸಂಘದ ವತಿಯಿಂದ 2.50 ಲಕ್ಷ ರೂಪಾಯಿ ನೆರವು
ಕುಂದಾಪುರ (ಜೂ, 06): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರೋಗ್ಯ ಭಾಗ್ಯ ಯೋಜನೆಯಡಿ ವಿವಿಧ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ ಜೂನ್ 6 ರಂದು ಸಂಘದ ಆಡಳಿತ ಕಛೇರಿ ಆರ್ ಎನ್ ಶೆಟ್ಟಿ ಯಲ್ಲಿ ನಡೆಯಿತು. ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದ ಸಂಘದ ದಶಮ ಸಂಭ್ರಮದ ಪೋಷಕರು, ಕುಂದಾಪುರದ ಉದ್ಯಮಿಗಳು ಆದ ಶ್ರೀ ಸಟ್ವಾಡಿ ವಿಜಯ ಶೆಟ್ಟಿ ಯುವ ಬಂಟರ ಸಂಘ ಆರೋಗ್ಯ ಭಾಗ್ಯ […]
ಕುಕ್ಕೆ ಸುಬ್ರಹ್ಮಣ್ಯ: ಆಪದ್ಬಾಂಧವ ಈಶ್ವರ ಮಲ್ಪೆಗೆ ಸನ್ಮಾನ
ಕುಕ್ಕೆ ಸುಬ್ರಹ್ಮಣ್ಯ(ಜೂ ,06): ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಈಶ್ವರ್ ಮಲ್ಪೆ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಈಶ್ವರ ಮಲ್ಪೆ ಅವರ ಟ್ರಸ್ಟ್ ಗೆ ಗ್ರಾಮ ಪಂಚಾಯತ್ ಸದಸ್ಯರ ಗೌರವಧನದಿಂದ ಸುಮಾರು ಹತ್ತು ಸಾವಿರ ರೂಪಾಯಿಯನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಸುಬ್ರಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಸುಜಾತಾ ಕಲ್ಲಾಜೆ, ಉಪಾಧ್ಯಕ್ಷ ರಾಜೇಶ್ ಎನ್ ಎಸ್,ಸದಸ್ಯರಾದ ವೆಂಕಟೇಶ್ ಎಚ್ ಎಲ್, ಗಿರೀಶ್ ಆಚಾರ್ಯ, ದಿಲೀಪ್ ಕಲ್ಲಾಜೆ, ಸವಿತಾ ಭಟ್, ಭಾರತಿ […]
ದಯಾನಿಧಿ ಬಂಟರ ಬಳಗ ಹುಣ್ಸೆಮಕ್ಕಿ: ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ
ಕೋಟೇಶ್ವರ (ಜೂ ,07): ದಯಾನಿಧಿ ಬಂಟರ ಬಳಗ ಹುಣ್ಸೆಮಕ್ಕಿವತಿಯಿಂದ ಪ್ರತಿ ವರ್ಷದಂತೆ ಐದು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಶ್ರೇಣಿಯಲ್ಲಿ ಪಾಸಾದ 10 ಜನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ವಸಂತಿ ಮಂಜಯ್ಯಶೆಟ್ಟಿ ,ಅಧ್ಯಕ್ಷರಾದ ಗಣೇಶ್ ಶೆಟ್ಟಿ ,ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ,ಗೌರವ ಸದಸ್ಯರಾದ ದಿನಕರ ಹೆಗ್ಡೆ, ಅನಿಲ್ ಕುಮಾರ್ ಶೆಟ್ಟಿ ,ಉದಯ್ […]










