ಶಿರೂರು(ಸೆ,18): ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಜನ್ಮ ದಿನದ ಪ್ರಯುಕ್ತಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಶಿರೂರು ಮಹಾಶಕ್ತಿ ಕೇಂದ್ರ ವತಿಯಿಂದ “ಸೇವೆ ಮತ್ತು ಸಮರ್ಪಣಾ ಅಭಿಯಾನ”ದ ಅಂಗವಾಗಿ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿಯವರುಶಿರೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಟ್ರೀ ಗಾರ್ಡ್ ಕೊಡುಗೆ ನೀಡಿದರು. ಕಳೆದ ಎಂಟು ವರ್ಷಗಳಲ್ಲಿ ದೇಶದ ಪ್ರಸಿದ್ದಿ ಜಗತ್ತಿನಾದ್ಯಂತ ಪಸರಿಸಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಈ ದೇಶ ಅತ್ಯಂತ ಅಭಿವೃದ್ಧಿಯ ಪಥದತ್ತ ಸಾಗಿದೆ ಎಂದು ಶಾಸಕರು […]
Tag: bms
ಹೆಮ್ಮಾಡಿ : ರಿಕ್ಷಾ ನಿಲ್ದಾಣ ಉದ್ಘಾಟಿಸಿ,ಶುಭ ಹಾರೈಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ಹೆಮ್ಮಾಡಿ(ಸೆ,7): ಹೆಮ್ಮಾಡಿ ಭಾಗದ ರಿಕ್ಷಾ ಚಾಲಕ ಮಾಲಕರ ಬಹುದಿನದ ಬೇಡಿಕೆಯಾಗಿದ್ದ ರಿಕ್ಷಾ ನಿಲ್ದಾಣವನ್ನು ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿದ್ದು,ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಉದ್ಘಾಟಿಸಿ ಶುಭಹಾರೈಸಿದರು. ರಿಕ್ಷಾ ಚಾಲಕ- ಮಾಲಕರ ಜನ ಪರ ಕಾಳಜಿಯನ್ನು ಪ್ರಶಂಸಿದ ಶಾಸಕರು ರಿಕ್ಷಾ ನಿಲ್ದಾಣಕ್ಕೆ ಇಂಟರ್ಲಾಕ್ ಅಳವಡಿಸಲು ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು, ಪಕ್ಷದ ಕಾರ್ಯಕರ್ತ ಮತ್ತು ರಿಕ್ಷಾ ಚಾಲಕ & ಮಾಲಕರು ಉಪಸ್ಥಿತರಿದ್ದರು.
ಬೈಂದೂರು ಮಂಡಲ ಬಿ.ಜೆ.ಪಿ. ಎಸ್ಸಿ ಮೊರ್ಚಾ : ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಶಾಸಕರ ಬಿ. ಎಂ. ಸುಕುಮಾರ ಶೆಟ್ಟಿಯವರಿಗೆ ಮನವಿ
ವಂಡ್ಸೆ (ಆ, 23) : ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಬೈಂದೂರು ಮಂಡಲ ಬಿ.ಜೆ.ಪಿ ಎಸ್ಸಿ ಮೊರ್ಚಾದ ಸದಸ್ಯರು ಕ್ಷೇತ್ರದ ಶಾಸಕರಾದ ಬಿ ಎಂ ಸುಕುಮಾರ ಶೆಟ್ಟಿಯವರಿಗೆ ಆಗಸ್ಟ್,22 ರಂದು ಶಾಸಕರ ನಿವಾಸಕ್ಕೆ ತೆರಳಿ ಮನವಿ ನೀಡಿದರು. ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ಚಂದ್ರ ಪಂಚವಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಮೂಡುಬಗೆ, ನಿಕಟಪೂರ್ವ ತಾಲೂಕು ಪಂಚಾಯಿತಿ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಹಾಗೂ […]
ಬಡಾಬಾಳು : ಅಟಲ್ ಜೀ ಬಸ್ ತಂಗುದಾಣ ಉದ್ಘಾಸಿದ ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ
ಸಿದ್ದಾಪುರ (ಆ, 17) : ಸಿದ್ದಾಪುರ ಗ್ರಾಮ ಪಂಚಾಯತ್ ಬಡಾಬಾಳುವಿನಲ್ಲಿ ದೇಶದ ಮಾಜಿ ಪ್ರಧಾನಿ, ಧೀಮಂತ ನಾಯಕ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಹೆಸರಿನಲ್ಲಿ ಅಟಲ್ ಜೀ ಬಸ್ ತಂಗುದಾಣ ವನ್ನು ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗ ಬಡಾಬಾಳು ಇದರ ಸದಸ್ಯರು, ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಸದ ಶ್ರೀ ಬಿ. ವೈ. ರಾಘವೇಂದ್ರ ರಿಗೆ ಜನ್ಮದಿನದ ಶುಭಾಶಯ ಕೋರಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ
ಶಿವಮೊಗ್ಗ (ಆ, 16) : ಶಿವಮೊಗ್ಗ ಲೋಕ ಸಭಾ ಕ್ಚೇತ್ರದ ಸಂಸದ ಶ್ರೀ ಬಿ. ವೈ. ರಾಘವೇಂದ್ರರವರ ಹುಟ್ಟು ಹಬ್ಬದ ದಿನದಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರು ಶಿಕಾರಿಪುರದ ಸಂಸದರ ನಿವಾಸಕ್ಕೆ ತೆರಳಿ ಶುಭಾಶಯ ತಿಳಿಸಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ರವರು ಬೈಂದೂರು ಕ್ಷೇತ್ರದ ಬಗ್ಗೆ ತೋರಿದ ವಾತ್ಸಲ್ಯದಿಂದಾಗಿ ಹಿಂದುಳಿದ ಕ್ಷೇತ್ರವೊಂದು ಅಭಿವೃದ್ಧಿಯತ್ತ ದಾಪುಗಾಲು ಇಡುವಂತಾಗಿದೆ. ನಾನು ಚುನಾವಣೆಯ ಸಂದರ್ಭದಲ್ಲಿ ಹೇಳಿದಂತೆ […]
ಅಂಪಾರು: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಬಡ ಕುಟುಂಬಗಳಿಗೆ ಹಕ್ಕುಪತ್ರ ಕಲ್ಪಿಸುವ ಭರವಸೆ – ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ಅಂಪಾರು(ಆ,11): ಕಳೆದ ಆರೇಳು ದಶಕಗಳಿಂದ ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುಬಿಯರ್ ಜಡ್ಡು ಎಂಬಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಆರು ಕುಟುಂಬಗಳು ವಾಸವಾಗಿದ್ದಾರೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗ ಎಂಬ ಕಾರಣಕ್ಕೆ ಅವರಿಗೆ ಯಾವುದೇ ಹಕ್ಕು ಪತ್ರ ಇರಲಿಲ್ಲ. ಆ ಸ್ಥಳಕ್ಕೆ ಬೈಂದೂರು ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿಯವರು, ಸಹಾಯಕ ಕಮಿಷನರ್ ರಾಜು, ತಹಶೀಲ್ದಾರ್ ಕಿರಣ್ ಗೋರಯ್ಯ, ಕಂದಾಯ ನಿರೀಕ್ಷಕ ರಾಘವೇಂದ್ರ ಹಾಗೂ ಸ್ಥಳಿಯ ಮುಖಂಡರೊಂದಿಗೆ ಭೇಟಿ […]
ಅಶೋಕ್ ಕುಟುಂಬಕ್ಕೆ ಬೈಂದೂರು ಶಾಸಕರಿಂದ ಐದು ಲಕ್ಷ ರೂಪಾಯಿ ಚೆಕ್ ವಿತರಣೆ
ಕುಂದಾಪುರ (ಆ, 10 ) : ಇತ್ತೀಚಿಗೆ ಮಳೆಯ ಆರ್ಭಟದಿಂದ ನದಿಗೆ ಬಿದ್ದು ಹಳ್ನಾಡು ನಿವಾಸಿ ಅಶೋಕ್ ಮೃತಪಟ್ಟಿದ್ದು, ಆತನ ಮನೆಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿ ಐದು ಲಕ್ಷ ರೂಪಾಯಿಗಳ ಚೆಕ್ ವಿತರಿಸಿ ಮನೆಯವರಿಗೆ ಸಾಂತ್ವನ ತಿಳಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ರಾಘವೇಂದ್ರ ದೇವಾಡಿಗ, ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಪುತ್ರನ್, ಸಾಮ್ರಾಟ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ದಿನೇಶ್ ಆಚಾರ್, ಪ್ರಕಾಶ್ ಶೆಟ್ಟಿ […]
ಬೆಳ್ಳಾಲ : ಗುರುಪೂಜೆಯಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಭಾಗಿ
ಬೆಳ್ಳಾಲ (ಆ, 01) : ಇಲ್ಲಿನ ಮೂಡುಮುಂದದಲ್ಲಿ ಆಯೋಜಿಸಿದ ಅರ್ಪಣೆ ಮತ್ತು ಅರ್ಚನೆಗೆ ಪ್ರತೀಕವಾದ ಗುರುಪೂಜೆಯಲ್ಲಿ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಭಾಗವಹಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದ ನಮಗೆಲ್ಲ ಭಗವಾ ಧ್ವಜ ಗುರು ಸಮಾನವಾದುದು, ರಾತ್ರಿಯ ಕತ್ತಲನ್ನು ಹೊಡೆದೋಡಿಸುವ ಅರುಣೋದಯದ ಬಣ್ಣವೂ ಕೇಸರಿಯೇ ಆಗಿದ್ದು, ಹೀಗಾಗಿ ನಮಗಿದು ಜ್ಞಾನದ ಸಂಕೇತ, ಎಲ್ಲ ಶಕ್ತಿಗಳ ಶಕ್ತಿಯಾಗಿರುವ ಭಗವಾದ್ವಜಕ್ಕೆ ನಮ್ಮಲ್ಲಿ ಗುರುವಿನ ಸ್ಥಾನವಿದೆ, ಇದರೆದುರು ತಲೆಬಾಗುತ್ತ ಗುರುವಿಗೆ […]
ಬಿಜೂರು : ಗ್ರಾಮ ಪಂಚಾಯತ್ ನೂತನ ಕಟ್ಟಡ & ಅಂಗನವಾಡಿ ಕೇಂದ್ರ ಉದ್ಘಾಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ಉಪ್ಪುಂದ (ಜು, 18) : ಬಿಜೂರು ಗ್ರಾಮ ಪಂಚಾಯತ್ ನ ನೂತನ ಕಟ್ಟಡ ಹಾಗೂ ಹೊಳೆತೋಟ ಅಂಗನವಾಡಿ ಕಟ್ಟಡವನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕರು ಸ್ಥಳೀಯಾಡಳಿತದ ಜವಾಬ್ದಾರಿಯ ಕುರಿತು ತಿಳಿಸಿದರು. ಬಿಜೂರು ಶಾಲೆ ರಸ್ತೆಗೆ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿ ನಡೆಸುವುದರ ಜೊತೆಗೆ ಬಾಕಿ ಇರುವ 94ಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಬಿಜೂರು ಗ್ರಾ.ಪಂ. ಅಧ್ಯಕ್ಷ ರಮೇಶ ವಿ.ದೇವಾಡಿಗ […]
ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ನಿವೇಶನಾ ಹಕ್ಕುಪತ್ರಗಳನ್ನು ವಿತರಿಸಿದ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ
ತ್ರಾಸಿ (ಜು, 10) : ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ನಿವೇಶನಾ ಹಕ್ಕುಪತ್ರಗಳನ್ನು ಬೈಂದೂರು ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿಯವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅರ್ಹ ಆರ್ಥಿಕ ದುರ್ಬಲರನ್ನು ಆಯ್ಕೆ ಮಾಡಿ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ. ಇಂತಹ ಯೋಜನೆಗಳು ಜನರ ಅನುಕೂಲಕ್ಕೆ ಇರುವಂತದ್ದು, ಅದು ಅರ್ಹರನ್ನು ತಲುಪಬೇಕು. ಆ ನಿಟ್ಟಿನಲ್ಲಿ ಎಲ್ಲಾ ಪಂಚಾಯತ್ನಲ್ಲೂ ನಿವೇಶನ ರಹಿತರ ಪಟ್ಟಿಯನ್ನು ಪಡೆದು ನಿವೇಶನ […]