ಕಟ್ಟ್ ಬೆಲ್ತೂರು(ಜ.29): ಇಲ್ಲಿನ ಸುಳ್ಸೆ ಗ್ರಾಮದಲ್ಲಿ ರಾಷ್ಟ್ರೀಯ ಮತದಾರರ ದಿನ ಆಚರಣೆ, ಹೊಸ ಮತದಾರರಿಗೆ ಗುರುತಿನ ಚೀಟಿ ನೀಡಿ ಮತದಾರರ ಆದ್ಯ ಕರ್ತವ್ಯ ಮತ್ತು ರೀತಿ ನೀತಿ ನಿಯಮಗಳನ್ನು ಪ್ರತಿಜ್ಞಾ ವಿಧಿಯನ್ನು ಭೋಧಿಸುವ ಮೂಲಕ ತಿಳಿಸಲಾಯಿತು. ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ […]
Tag: eshwara navunda
ಕಂಬದಕೋಣೆ: ಲಿವರ್ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಜಯಶ್ರೀ ಮೊಗವೀರಗೆ ಬೇಕಿದೆ ಸಹಾಯ ಹಸ್ತ
ಕಂಬದಕೋಣೆ(ಜ.18): ಕಂಬದಕೋಣೆ ನಿವಾಸಿಯಾದ ನಾಗರಾಜರವರ ಪತ್ನಿ ಜಯಶ್ರೀ ಮೊಗವೀರ ರವರು ದೀರ್ಘಕಾಲದಿಂದ ಲಿವರ್ ಕ್ಯಾನ್ಸರ್” ಸಮಸ್ಯೆಯಿಂದ ಬಳಲುತ್ತಿದ್ದು , ಪ್ರಸ್ತುತ ಇವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಚಿಕಿತ್ಸೆಗೆ ಸುಮಾರು 10 ಲಕ್ಷದವರಿಗೆ ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗೆ 8ಲಕ್ಷ ಖರ್ಚಾಗಬಹುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ . ಇಷ್ಟು ಖರ್ಚನ್ನು ಬರಿಸಲು ಈ ಬಡ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ ಹಾಗಾಗಿ ಸಹ್ರದಯಿ ದಾನಿಗಳು ಚಿಕಿತ್ಸೆಗೆ ನೆರವು ನೀಡಬೇಕೆಂದು ವಿನಂತಿಸಿಕೊಂಡಿದ್ದಾರೆ.ಧನ ಸಹಾಯ ಮಾಡುವವರು ಈ […]
ಮುಂಬೈ: ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಅಧ್ಯಕ್ಷರಾಗಿ ರಾಜು ಮೆಂಡನ್ ಆಯ್ಕೆ
ಕುಂದಾಪುರ (ಜ.17 ): ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ರಾಜು ಮೆಂಡನ್ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ನಡೆದ ಸಂಘದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿಶ್ರೀ ರಾಜು ಮೆಂಡನ್ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉದ್ಯಮಿ ರಮೇಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ್ ಎನ್ ನಾಯ್ಕ್, ಮೊಗವೀರ ಮುಖಂಡರುಗಳಾದ ಸುರೇಶ್ ಆರ್ ಕಾಂಚನ್, ಮಹಾಬಲ ಕುಂದರ್, ಎನ್ ಎಚ್ ಬಗ್ವಾಡಿ, ಸಂತೋಷ್ […]
ಮಲ್ಪೆ: ಈಜುಪಟು ಸುರೇಶ್ ಖಾರ್ವಿಯಿಂದ ಮೀನುಗಾರ ಮಹಿಳೆಯ ರಕ್ಷಣೆ
ಮಲ್ಪೆ(ಜ,17): ಇತ್ತೀಚೆಗೆ ಮಲ್ಪೆ ಬಂದರಿನಲ್ಲಿ ಮೀನು ಹೊರುವ ಮಹಿಳೆ ರಾತ್ರಿ ಸಂದರ್ಭದಲ್ಲಿ ಕೆಲಸ ನಿರ್ವಹಿಸುತಿರುವಾಗ ಆಯತಪ್ಪಿ ನೀರಿಗೆ ಬಿದ್ದ ಅಪಾಯದ ಸಂದರ್ಭದಲ್ಲಿ ಸ್ವಲ್ಪವೂ ತಡಮಾಡದೆ ಅಮೃತೇಶ್ವರಿ ಬೋಟಿನಲ್ಲಿ ದುಡಿಯುತ್ತಿದ್ದ ಜೀವರಕ್ಷಕ ಸುರೇಶ್ ಖಾರ್ವಿ ಭಟ್ಕಳ (ಬಂದರ್ ರೋಡ್ ) ತನ್ನ ಜೀವದ ಹಂಗು ತೊರೆದು ನೀರಿಗೆ ಹಾರಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಇವರ ಸಮಯ ಪ್ರಜ್ಞೆಯಿಂದಾಗಿ ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಶ್ರೀ ಸುರೇಶ್ ಖಾರ್ವಿಯವರು ನುರಿತ ಈಜುಪಟು ಆಗಿದ್ದು, ತುರ್ತು ಸಮಯದಲ್ಲಿ ಹಲವಾರು […]
ಯಕ್ಷಗಾನದ “ಪವರ್ ಸ್ಟಾರ್” ಕೊಳಲಿ ಕೃಷ್ಣ ಶೆಟ್ಟಿ
ಕರಾವಳಿಯ ಸಾಂಸ್ಕ್ರತಿಕ ಹಿರಿಮೆಯ ಕಲೆಯಾದ ಯಕ್ಷಗಾನದ ಪ್ರಮುಖ ಕಲಾವಿದರುಗಳ ಪಟ್ಟಿ ಮಾಡುತ್ತ ಹೋದರೆ ಅಭಿಮಾನ್ಯು -ಅಭಿಮಾನ್ಯು -ಅಭಿಮಾನ್ಯು ಈ ಪ್ರಸಂಗದ ಅಭಿಮಾನಿಗಳ ಅಭಿಮನ್ಯು ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಕಲಾವಿದರೆಂದರೆ ಅದು ಕೊಳಲಿ ಕೃಷ್ಣ ಶೆಟ್ಟಿಎಂದರೆ ಯಾರೂ ಅಲ್ಲಗಳೆಯುವಂತಿಲ್ಲ.ಹಿರಿಯ ಕಲಾವಿದ ಕೊಳಲಿ ಕೃಷ್ಣ ಶೆಟ್ಟಿಯವರಪರಿಚಯವನ್ನು ಸಂಗ್ರಹಿಸುವಾಗ ಮಾರಣಕಟ್ಟೆ ಮೇಳದ ಮೇರು ಭಾಗವತರಾದ ತಿಮ್ಮಪ್ಪ ದೇವಾಡಿಗ ಹೇರಂಜಾಲು ಈ ಪರಿಚಯ ಲೇಖನಕ್ಕೆ ಸಹಕರಿಸಿದ ಇವರನ್ನು ಸಹಕಾರವನ್ನು ಸ್ಮರಿಸಿಕೊಳ್ಳುತ್ತಾ ಕುಂದ ವಾಹಿನಿ ಮೂಲಕ ಕೊಳಲಿ ಕೃಷ್ಣ […]
ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ 2022 ರ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ
ಕೋಟ (ಡಿ,23): ಯಕ್ಷಗಾನ ವಿದ್ವಾಂಸ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ರಂಗನಟ, ಸಾಹಿತಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ 2022 ರ ಪ್ರಶಸ್ತಿಯನ್ನು ಯಕ್ಷಗಾನ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ ಪ್ರದಾನ ಮಾಡಲಾಗುವುದೆಂದು ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಮಹೇಶ ಉಡುಪ, ಮಂದಾರ್ತಿ ಅಧ್ಯಕ್ಷ ಬಲರಾಮ ಕಲ್ಕೂರು, ಉಪಾಧ್ಯಕ್ಷ ಜನಾರ್ದನ ಹಂದೆಯವರನ್ನೊಳಗೊಂಡ ಸಮಿತಿ ನಿರ್ಧರಿಸಿದೆ. ಬಡಗು ತಿಟ್ಟಿನ ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿ, ಅಮೃತೇಶ್ವರಿ, ಸಾಲಿಗ್ರಾಮ, ಹಾಲಾಡಿ, ಸೌಕೂರು […]
ಕೊಡೇರಿ: ಕಡಲಾಮೆ ರಕ್ಷಣೆ
ಉಪ್ಪುಂದ(ಡಿ,22) : ಇಲ್ಲಿನ ಕೋಡೇರಿ ಸಮುದ್ರ ತೀರದಲ್ಲಿ ಮೊಟ್ಟೆ ಇಡಲು ಬಂದ ಕಡಲಾಮೆಯೊಂದನ್ನು ಸ್ಥಳೀಯರು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಮೆಗೆ ಸಣ್ಣ ಪುಟ್ಟ ಗಾಯಗಳಾಗಿರುವುದರಿಂದ ಆಮೆಯ ಚಿಕಿತ್ಸೆಗೆ ಕುಂದಾಪುರದ ಕೋಡಿ ಕಡಲಾಮೆ ಸಂರಕ್ಷಣಾ (FSL) ಘಟಕಕ್ಕೆ ರವಾನಿಸಿದ್ದಾರೆ. ವರದಿ : ಈಶ್ವರ್ ಸಿ ನಾವುoದ
ತಡರಾತ್ರಿ ಮೀನುಗಾರನ ರಕ್ಷಣೆ: ಆಪತ್ಭಾಂದವ ಈಶ್ವರ ಮಲ್ಪೆಯವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ
ಮಲ್ಪೆ (ಡಿ,03): ಮಲ್ಪೆ ಮೀನಿಗಾರಿಕಾ ಬಂದರಿನಲ್ಲಿ ಡಿ,02 ರ ತಡರಾತ್ರಿ 2.30.ಗಂಟೆಗೆ ಆಂಧ್ರಪ್ರದೇಶ ಮೂಲದ ಮೀನುಗಾರ ಲಕ್ಷ್ಮಣ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ. ವಿಷಯ ತಿಳಿದ ಆಪತ್ಭಾಂದವ ಈಶ್ವರ ಮಲ್ಪೆ ತಕ್ಷಣ ಬೋಟಿನ ಬಳಿ ತೆರಳಿ ರಕ್ಣಿಸುವುದರ ಜೊತೆಗೆ ಪ್ರಥಮ ಚಿಕಿತ್ಸೆ ನೀಡಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದರು.ಅಲ್ಲಿನ ವೈದ್ಯರು ಹಾಗೂ ಅವರ ತಂಡ ಲಕ್ಷ್ಮಣ್ ರವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ.ಉಡುಪಿ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ತುರ್ತು […]
ಜೀವ ರಕ್ಷಕ, ಮುಳುಗು ತಜ್ಞ ಸುರೇಶ ಖಾರ್ವಿ ಭಟ್ಕಳ್ (ಕಡಲಾಳದ ಅಂತರಂಗ- ಬದುಕಿನ ಕಥೆ ವ್ಯಥೆ )
ಜೀವ ರಕ್ಷಣೆ ಮತ್ತು ಸಾವು ಅದು ಎಷ್ಟು ಕಠೋರವೆಂದರೆ ಆ ಚಕ್ರವ್ಯೂಹಕ್ಕೆ ಸಿಲುಕಿ ಬದುಕು ಬಂದವರರಿಗೆ ಮಾತ್ರ ಗೊತ್ತು .ಸಾವಿನಂಚಿನ ಕದ ತಟ್ಟಿ ಬದುಕಿ ಬರುವುದೆಂದರೆ ಅದೇನು ಆಟವಲ್ಲಾ.ಅದರ ಪರಿಕಲ್ಪನೆ ಮಾಡುವುದು ಕೂಡ ಕಷ್ಟ, ಅಂತಹ ಪರಿಸ್ಥಿತಿಯಲ್ಲಿ ಇರುವವರನ್ನು ಬದುಕಿಸುವವರೇ ಜೀವ ರಕ್ಷಕರು. ಜೀವರಕ್ಷಕರು ಅಕ್ಷರಶಃ ದೇವರಿಗೆ ಸಮನಾದವರು. ಆದರೆ ಇಂಥ ದೇವರುಗಳು ಮಾತ್ರ ಕಣ್ಣೀರಲ್ಲಿ ಕೈತೊಳೆತ್ತಾ ಇರುವುದು ಮಾತ್ರ ಶೋಚನೀಯ…!ಇವರ ನಿಸ್ವಾರ್ಥ ಸೇವಾ ಕಾರ್ಯವನ್ನು ಗುರುತಿಸಿ ಇವರಿಗೆ ಗೌರವದ […]
ಜೀವರಕ್ಷಕ ಭಾಸ್ಕರ್ ತಳಗೊಡುರವರ ಬದುಕನ್ನು ಬೆಳಗಿಸಿದ ದೀಪಾವಳಿ
ಜೀವರಕ್ಷಕ, ಮುಳುಗು ತಜ್ಞ ಭಾಸ್ಕರ್ ಕಳಸ ತಳಗೊಡು, ಈ ಬಡ ಸಂಸಾರ ಆ ಮಕ್ಕಳ ಮೊಗದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಖುಷಿ ತರಿಸಿದ ಎಲ್ಲಾ ಸಮಾಜ ಸೇವಕರಿಗೂ ಶಿರಬಾಗಿ ನಮಸ್ಕರಿಸುವೆ. ಪ್ರತಿಬಿಂಬ ಟ್ರಸ್ಟ್ ಬೆಂಗಳೂರು ಭಾಸ್ಕರ್ ರವರ ಮೂರು ಮಕ್ಕಳಿಗೆ ಅನುಕೂಲವಾಗಲೆಂದು ಶಾಲಾ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳು ಮತ್ತು ಬಟ್ಟೆ ಪುಸ್ತಕವನ್ನು ಜೋಡಿಸಿಡಲು ಕಾಪಾಟ್ ಒಂದನ್ನು ಬೆಂಗಳೂರಿನಿಂದ ಕಳಿಸಿಕೊಟ್ಟಿದ್ದಾರೆ. ಕಳಸದ ಕೃಷಿಕರು, ಪತ್ರಕರ್ತರಾದ ರವಿ ಕೆಳಂಗಡಿ […]