ಕುಂದಾಪುರ (ಅ,20): ರೋಟರಿ ಇಂಡಿಯಾ ಲಿಟರಸಿ ಮಿಷನ್ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಶಿಕ್ಷಕರಿಗೆ ಕೊಡಮಾಡುವ ನೇಷನ್ ಬಿಲ್ಡರ್ ಪ್ರಶಸ್ತಿಗೆ ನಿವೇದಿತಾ ಪ್ರೌಢ ಶಾಲೆ ಬಸ್ರೂರಿನ ಸಹಶಿಕ್ಷಕರಾದ ಶ್ರೀ. ಪ್ರದೀಪ್ ಕುಮಾರ್ ಶೆಟ್ಟಿ ಭಾಜನರಾಗಿದ್ದಾರೆ. ದಕ್ಷಿಣ ರೋಟರಿ ಕ್ಲಬ್ ಕುಂದಾಪುರ ವತಿಯಿಂದ, ಅ,20 ರಂದು ಹೋಟೆಲ್ ಕಿದಿಯೂರು ಉಡುಪಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು . ಪ್ರದೀಪ್ ಕುಮಾರ್ ಶೆಟ್ಟಿಯವರ ಶಿಕ್ಷಣ, ಸಾಹಿತ್ಯ, ಕಲೆ ಸಾಂಸ್ಕೃತಿಕ ರಂಗಗಳಲ್ಲಿನ […]
Tag: general news
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ನೆಂಪು ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟದ ಪ್ಲೇಟ್ ಮತ್ತು ಲೋಟ ಕೊಡುಗೆ
ವಂಡ್ಸೆ(ಅ,19); ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರದಗಳಲ್ಲಿ ಒಂದಾದ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಆಡಳಿತ ಮಂಡಳಿಯ ವತಿಯಿಂದ ಉಪ್ಪಿನ ಕುದ್ರು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಭಾಸ್ಕರ ಕೊಗ್ಗ ಕಾಮತ್ ಹಾಗೂ ಸಮಾಜ ಸೇವಕ ರಾಘವೇಂದ್ರ ನೆಂಪು ರವರ ಕೋರಿಕೆಯ ಮೇರೆಗೆ ಅಂದಾಜು 40 ಸಾವಿರ ರೂಪಾಯಿ ಮೌಲ್ಯದ ಬಿಸಿಯೂಟದ ಪ್ಲೇಟ್ ಮತ್ತು ಲೋಟವನ್ನು ನೆಂಪುವಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ್ದಾರೆ. ಕ್ಷೇತ್ರದಿಂದ ಕೊಡುಗೆಯಾಗಿ ನೀಡಿದ […]
ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್(ರಿ) ಹಾಯ್ಕಾಡಿ : ರಂಗಾಭಿನಯ ತರಬೇತಿ ಮತ್ತು ಬಹುಮಾನ ವಿತರಣಾ ಸಮಾರಂಭ
ಹಾಲಾಡಿ (ಅ,16): ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ (ರಿ) ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜು ಹಾಲಾಡಿ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಅ.10 ರಂದು ಸೋಮವಾರ ರಂಗಾಭಿನಯ ತರಬೇತಿ ಶ್ರೀಮತಿ ಸಾಧು ಅಧ್ಯಕ್ಷರು ಗ್ರಾಮ ಪಂಚಾಯತ್ ಹಾಲಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಪೆರ್ಡೂರು ಪ್ರಭಾಕರ ಕಲ್ಯಾಣಿ ಇವರು ಕಾರ್ಯಕ್ರಮದ ಉದ್ಘಾತಿಸಿದರು. ಗ್ರಾಮೀಣ ಭಾಗದಲ್ಲಿ […]
ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಸರ್ವ ಜಿಷ್ಟು
ಕುಂದಾಪುರ(ಅ,10): ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮಾಸೆಬೈಲು ಇವರ ಜಂಟಿ ಆಯೋಜನೆಯಲ್ಲಿ ನಡೆದ ಪ್ರಾಥಮಿಕ ಶಾಲಾ ಮಟ್ಟದ ಹಾಲಾಡಿ ಸಂಯೋಜಕ ವೃತ್ತ ಮಟ್ಟದ ಕ್ರೀಡಾಕೂಟದಲ್ಲಿ ಎಕ್ಸಲೆಂಟ್ ಶಾಲೆ ಹಾಗೂ ಕುಂದಾಪುರ ಟ್ರಾಕ್ & ಫೀಲ್ಡ್ ಅಥ್ಲೆಟಿಕ್ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಸರ್ವ ಜಿಷ್ಟು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಅವನಿ ಪ್ರಕಾಶನ ಮಂಗಳೂರು : ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಬಂಧ ಸ್ಪರ್ಧೆ
ಮಂಗಳೂರು (ಅ.10): ಅವನಿ ಪ್ರಕಾಶನ, ಮಂಗಳೂರು ಇವರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ “ಕುಂದಗನ್ನಡದ ನನ್ನ ಊರು – ಜನ – ಸಂಸ್ಕೃತಿ – ಪರಂಪರೆ” ಎನ್ನುವ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಹೈಸ್ಕೂಲ್ ವಿಭಾಗ,ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗ ಎಂದು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ,ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ , ತೃತೀಯ ಮತ್ತು ಮೂರು ಪ್ರೋತ್ಸಾಹಕರ ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ […]
ಮೈಸೂರು ದಸರಾ ಪ್ರಯುಕ್ತ ಬಾಡಿ ಬಿಲ್ಡಿಂಗ್ : ಸೋಮಶೇಖರ್ ಖಾರ್ವಿ ದ್ವೀತಿಯ
ಕುಂದಾಪುರ(ಅ,8): ಹಲವಾರು ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿರುವ ಕುಂದಾಪುರ ತಾಲೂಕಿನ ಕಂಚುಗೋಡು ನಿವಾಸಿ ಸೋಮಶೇಖರ್ ಖಾರ್ವಿಯವರು ಇತ್ತೀಚೆಗೆ ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆದ ಬಾಡಿ ಬಿಲ್ಡಿಂಗ್ 65 ಕೆ.ಜಿ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿರುತ್ತಾರೆ. ಸೋಮ ಶೇಖರ್ ಖಾರ್ವಿಯವರ ಈ ಸಾಧನೆಗೆ ಗ್ರಾಮಸ್ಥರು ಮತ್ತು ಅಭಿಮಾನಿಗಳು ಅಭಿನಂದನೆಕೋರಿದ್ದಾರೆ.
ಹೈಕಾಡಿ:ಯಕ್ಷಗಾನ ಹೆಜ್ಜೆ ತರಬೇತಿ ಉದ್ಘಾಟನೆ
ಹೈಕಾಡಿ(ಜು,3): ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್(ರಿ.),ಸದ್ಗುರು ಕುಟೀರ ಹೈಕಾಡಿ ಇವರು ಆಯೋಜಿಸಿರುವ ಯಕ್ಷಗಾನ ಹೆಜ್ಜೆ ಕುಣಿತ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರುಕೈಯಲ್ಲಿ ಇತ್ತೀಚೆಗೆ ನಡೆಯಿತು. ಬೆಳ್ವೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕರುಣಾಕರ ಶೆಟ್ಟಿ ಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಮ್ಮ ಸಂಸ್ಥೆಯ ವಿದ್ಯಾರ್ಥಿ ಗಳ ಜೊತೆಗೆ ಸುತ್ತಮುತ್ತಲಿನ ಯಕ್ಷಗಾನದ ಆಸಕ್ತಿಯಿರುವ ಮಕ್ಕಳಿಗೆ ಸುಲಭವಾಗಿ ದೊರಕುವಂತೆ ಯಕ್ಷಗಾನ ಕಲೆ ಉಳಿಸಿ […]
ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಅವರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ಮುಖ್ಯಮಂತ್ರಿಗಳ ಪ್ರಶಸ್ತಿ’
ಕುಂದಾಪುರ (ಜು,2): ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ 2021-22ನೇ ಸಾಲಿನ ಪ್ರತಿಷ್ಠಿತ‘ಮುಖ್ಯಮಂತ್ರಿಗಳ ಪ್ರಶಸ್ತಿ’ ಗೆ ಶ್ರೀ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಅವರು ಆಯ್ಕೆಯಾಗಿದ್ದು ಜುಲೈ 1 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಇವರು ಪ್ರಸ್ತುತ ಮಂಗಳೂರಿನ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಎಸ್ ಟಿ […]
ಚಿಟ್ಟೆ ನಾಟಕ ಪ್ರದರ್ಶನಕ್ಕೆ ಮನಸೋತ ಪ್ರೇಕ್ಷಕ ವರ್ಗ
ಬೇಲೂರು ರಘುನಂದನ್ ಸರ್ ರವರ ರಚನೆಯ, ಕೃಷ್ಣಮೂರ್ತಿ ಕವತ್ತಾರ್ ಸರ್ ರವರ ನಿರ್ದೇಶನದಲ್ಲಿ, ನನ್ನ ಪುಟ್ಟ ಗೆಳೆಯ ಗೋಕುಲ ಸಹೃದಯ ನಟಿಸಿರುವ ನಾಟಕ ಚಿಟ್ಟೆ. ಈ ನಾಟಕ ರಚನೆಯಾಗಿ ಪ್ರದರ್ಶನ ಗೊಳ್ಳಲು ಪ್ರಾರಂಭವಾಗಿ ಸುಮಾರು ಒಂದೂವರೆ ವರ್ಷಗಳೇ ಆಗಿರಬಹುದು ಎಂದು ಭಾವಿಸುತ್ತೇನೆ.ಇಂದು ಕರಾವಳಿ ಭಾಗದಲ್ಲಿ ಈ ನಾಟಕದ ಪ್ರದರ್ಶನಗಳು ಆಯೋಜನೆಗೊಂಡಿದ್ದು ಅದೆಷ್ಟೋ ದಿನಗಳಿಂದ ಈ ನಾಟಕವನ್ನು ನೋಡಲು ಅವಕಾಶ ವಂಚಿತನಾಗಿದ್ದ ನಾನು ಇಂದು ಅರೆಹೊಳೆ ಪ್ರತಿಷ್ಠಾನ, ಅರೆಹೊಳೆಯಲ್ಲಿ ಈ ನಾಟಕದ ನಲವತ್ತೈದನೇ ಪ್ರದರ್ಶನ […]
ಶ್ರೀ ಆನೆಗುಂದಿ ಸರಸ್ವತೀ ಪೀಠ ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ನಲ್ಲಿ ಪೋಷಕರ ಸಭೆ
ಮಂಗಳೂರು (ಜೂ,7):ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ನ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ಪೋಷಕರ ಸಭೆಯು ಶ್ರೀ ಆನೆಗುಂದಿ ಮಠ ಸೂರ್ಯಚೈತನ್ಯ ಶಾಲಾ ಸಭಾಂಗಣದಲ್ಲಿ ಜೂ,04ರಂದು ಶ್ರೀ ಆನೆಗುಂದಿ ಮೂಲಗುರು ಪರಂಪರಾ ಪರಮ ಪೂಜ್ಯನೀಯ ಜಗದ್ಗುರುಗಳ ದಿವ್ಯ ಉಪಸ್ಥಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. “ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸೂರ್ಯ ಚೈತನ್ಯ ಹೈಸ್ಕೂಲ್ […]










