ಗಂಗೊಳ್ಳಿ(ಸೆ,28): ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಮತ್ತು ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಬಾಲಕರ ಬಾಲ್ ಬ್ಯಾಡ್ಮಿಂಟನ್ ಮತ್ತು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ತಂಡಗಳು ಪ್ರಥಮ ಸ್ಥಾನಿಯಾಗಿ ಮೂಡಿಬಂದು ಅವಳಿ ಪ್ರಶಸ್ತಿಯನ್ನು ಗೆದ್ದುಕೊಂದಿದೆ.
ಬಾಲಕಿಯರ ವಿಭಾಗದಲ್ಲಿ ಶ್ರೇಯಾ ಮೇಸ್ತ, ಕ್ಷಮಾ ಆಚಾರ್ಯ, ಸಹನಾ ಕೆ, ಶ್ರೀಲಕ್ಷ್ಮಿ, ವೀಕ್ಷಿತ, ಆಕಾಂಕ್ಷ, ಭೂಮಿಕಾ ಮತ್ತು ದೀಪ್ತಿ ಶೆಣೈ ಹಾಗೂ ಬಾಲಕರ ತಂಡದಲ್ಲಿ ಆರ್ಯನ್, ಧರ್ಮೇಶ್, ಅಶ್ವಿಕ್, ಸೃಜನ್, ಅಮೋಘ, ವಜ್ರೇಶ್ ಮತ್ತು ಶ್ರೀಶಾಂತ್ ಪ್ರತಿನಿಧಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ನಾಗರಾಜ್ ಶೆಟ್ಟಿ ತರಬೇತಿ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ ಬಳಗವು ಅಭಿನಂದಿಸಿದೆ.