ಹೊಸಂಗಡಿ:(ಜು.19): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಮ್ಮ “ಸೇನೆ ನಮ್ಮ ಹೆಮ್ಮೆ” ಇತ್ತೀಚೆಗೆ ಕಾರ್ಯಕ್ರಮ ನಡೆಯಿತು. ನಿ, ಸೇನೆಯಲ್ಲಿ 17 ವರ್ಷಗಳ ಕಾಲ ಸುಧೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ನಂತರ ಕರ್ನಾಟಕ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀ ಸುರೇಶ್ ರಾವ್ ರವರು ಮುಖ್ಯ ಭಾಷಣಕಾರರಾಗಿ ಆಗಮಿಸಿ ಸೇನೆ ಮತ್ತು ಸೇನೆ ನೇಮಕಾತಿಯ ಬಗ್ಗೆ ಮಾಹಿತಿಯನ್ನು ನೀಡಿದರು.
ಭಾರತದ ಸೈನಿಕರು ತಮ್ಮ ಪ್ರಾಣದ ಹಂಗನ್ನು ಚಳಿ ಮಳೆ ಮರಳುಗಾಡು ಬೆಟ್ಟ ಗುಡ್ಡಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ದೇಶದ ಗಡಿಗಳಲ್ಲಿ ದೇಶದ ಹಿತರಕ್ಷಣೆಯನ್ನು ಮಾಡುತ್ತಿದ್ದಾರೆ.ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಲು ಪ್ರತಿ ಕ್ಷಣವೂ ಪರಿತಪಿಸುತ್ತಾರೆ, ಅದರೆ ದೇಶ ಮಾತ್ರವಅವರ ಕೊಡುಗೆ ಅವರ ತ್ಯಾಗ ಅವರ ಬಲಿದಾನವನ್ನ ಮರೆಯುತ್ತಿದೆ. ಜೊತೆಗೆಇಂದಿನ ಯುವಕರು ಮಿಲಿಟರಿಗೆ ಸೇರುವಂತಹ ಆಸೆಯನ್ನು ಕೂಡ ಬಿಟ್ಟುಕೊಟ್ಟು, ದೇಶಾಭಿಮಾನವಿಲ್ಲದೆ, ತಮ್ಮ ಸ್ವಾರ್ಥ ಕ್ಕಾಗಿ ಬದುಕುತ್ತಿದ್ದಾರೆ. ತನ್ಮೂಲಕ ದೇಶದ ಪ್ರಗತಿಗೆ ಹಿನ್ನಡೆಗೆ ಕಾರಣವಾಗಿದ್ದಾರೆ . ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯುವಕ ಯುವತಿಯರು ಕೂಡ ಸೇನೆಗೆ ಸೇರುವುದರ ಮೂಲಕ ತಮ್ಮನ್ನು ತಾವು ದೇಶ ಸೇವೆಗೆ ಅರ್ಪಿಸಿಕೊಳ್ಳಬೇಕು ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡುವುದು ನಮ್ಮೆಲ್ಲರ ಹೆಮ್ಮೆ ನಮ್ಮೆಲ್ಲರ ಗೌರವ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ದೇಶದ ಹಿತರಕ್ಷಣಾ ಮಾಡಲು ಕೇಂದ್ರ ಸರ್ಕಾರವು ಒಂದು ಮಾದರಿಯಾಗಿರುವಂತಹ ಅಗ್ನಿ ಪಥ್ ಯೋಜನೆಯನ್ನು ಆರಂಭಿಸಿದ್ದು ಆ ಯೋಜನೆಯ ಉದ್ದೇಶ ಅಗ್ನಿವೀರ್ ಆಗಿ , ದೇಶ ಸೇವೆಯನ್ನ ಮಾಡಲಿಕ್ಕೆ ಪ್ರತಿಯೊಬ್ಬರಿಗೆ ಕೂಡ ಅವಕಾಶವಿದ್ದು ಸಮರ್ಥರು, ದೇಶಾಭಿಮಾನಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಆ ಮೂಲಕ ದೇಶ ಸೇವೆಯಲ್ಲಿ ತಮ್ಮದೇ ಆಗಿರುವಂತ ಕೊಡುಗೆಗಳನ್ನು ನೀಡಬೇಕು . ಎಂದರು.ಅಗ್ನಿವೀರ್ ಅಲ್ಲಿ ಇತ್ತೀಚೆಗೆ ಮಾರ್ಪಾಡು ಮಾಡಿದ್ದು ಅಗ್ನಿವೀರರಾಗಿ ಎಂಟು ವರ್ಷಗಳ ಕಾಲ ಸೇವೆಯನ್ನ ನಿರಂತರವಾಗಿ ಸಲ್ಲಿಸಿದಲ್ಲಿ ಅವರಿಗೆ ಖಾಯಮಾತಿ ಮಾಡಲಾಗುವುದು ಹಾಗೂ ಅವರಿಗೆ ಸೇನೆಗಳಿಗೆ ಕೊಡುವಂತಹ ಎಲ್ಲ ಸೌಲಭ್ಯಗಳನ್ನು ಕೂಡ ನೀಡಲಾಗುವುದು. ಸೇನೆಯಲ್ಲಿ ಸೇವೆ ಸಲ್ಲಿಸಿದರೆ ಸಿಗುವ ಅನೇಕ ರೀತಿಯ ಸೌಲಭ್ಯಗಳು ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿ ಎನ್ಎಸ್ಎಸ್ ವಿಭಾಗಾಧಿಕಾರಿಗಳಾಗಿರುವಂತಹ ಸವಿತಾ ಎರ್ಮಾಳ್ ಇವರು ಕೂಡ ಸೇನೆ ಮತ್ತೆ ಸೇನೆ ಕೊಡುಗೆಗಳ ಬಗ್ಗೆ ಮತ್ತೆ ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದಂತಹ ಮಹಾನ್ ವೀರರ ಬಗ್ಗೆ ಮಾಹಿತಿಯನ್ನು ನೀಡಿದರು. ಪರವವೀರ ಚಕ್ರವನ್ನು ಗಳಿಸಿದಂತಹ ಮಹಾನ್ ಯೋಧರ ಬಗ್ಗೆ ಅವರ ಯಶೋಗಾಥೆಯ ಕೆಲವು ಪರಿಣಾಮಕಾರಿಯಾದ ಕತೆಗಳನ್ನುಹೇಳುವ ಮೂಲಕ ಪ್ರೇರಣೆಮೂಡಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ಗೋಪಾಲಭಟ್ ವಹಿಸಿಕೊಂಡಿದ್ದರು.
ಎಮ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ರಣಜಿತ್ ಕುಮಾರ್ ಶೆಟ್ಟಿ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಎಜಾಸ್ ಧನ್ಯವಾದ ಸಮರ್ಪಣೆಗೈದರು.