ಉಡುಪಿ(ಆ,15): ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ಅಭಿಮಾನಿ ಬಳಗ ಉಡುಪಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಮತ್ತು ಉತ್ತರ ಕನ್ನಡ, ಡಿ ಡಿ ಗ್ರೂಫ್ ನಿಟ್ಟೂರು, ಶೌರ್ಯ ವಿಪತ್ತು ಘಟಕ , ಬಾರ್ಕೂರು,ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಾಷ್ಟ್ರೀಯ ಮೀನುಗಾರರ ಸಂಘ ರಿ. ಕರ್ನಾಟಕ , ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಆಗಸ್ಟ್ 11 ರ ಆದಿತ್ಯವಾರ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಅವರ ಹುಟ್ಟುಹಬ್ಬದ ದಿನದಂದು ಇಂಟರೆಕ್ಟ್ ಹಾಲ್ ಮಣಿಪಾಲ ಇಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಗೌರವ ಪ್ರಧಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಚ್. ಅಶೋಕ್, ಜಿಲ್ಲಾ ಸರ್ಜನ್ ,ಜಿಲ್ಲಾ ಆಸ್ಪತ್ರೆ ಉಡುಪಿ ಇವರ ವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲೆಕ್ಕೆ ವರ್ಷಕ್ಕೆ ಸರಿಸಮಾರು 40,000 ಯೂನಿಟ್ ರಕ್ತದ ಅವಶ್ಯಕತೆ ಇದ್ದು ಈ ಕೊರತೆ ನೀಗಿಸಲು ರಕ್ತದಾನಿಗಳಿಂದ ಮಾತ್ರ.ಯಾವುದೇ ಫಲಪೇಕ್ಷೆ ಇಲ್ಲದೆ ಸೂಕ್ತ ಸಮಯದಲ್ಲಿ ರಕ್ತದಾನಿಗಳು ರಕ್ತದಾನ ಮಾಡಿರುವುದರಿಂದ ಇಂದು ಉಡುಪಿ ಜಿಲ್ಲೆಯಲ್ಲಿ ರಕ್ತದ ಕೊರತೆಯಿಂದ ಅಸುನೀಗಿದ ಯಾವುದೆ ದಾಖಲೆ ಇಲ್ಲ. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ . ಉಡುಪಿ ಸಂಸ್ಥೆಯನ್ನು ಕೇವಲ ರಕ್ತದಾನಕ್ಕಾಗಿಯೇ ಕಟ್ಟಿ ಬೆಳೆಸಿ ಕರಾವಳಿ ಜಿಲ್ಲೆಯಲ್ಲಿ ರಕ್ತದ ಕೊರತೆ ನೀಗಿಸಿಲು ಶ್ರಮಿಸುತ್ತಿರುವ ಸತೀಶ್ ಸಾಲ್ಯಾನ್ ಅವರ ಸೇವೆ ಶ್ಲಾಘನೀಯ.
ಇಂದು ಅವರ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳು ಸಹಕಾರದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಮಾನವೀಯ ಸೇವೆಗೆ ಮುನ್ನುಡಿ ಬರೆದಿದ್ದಾರೆ. ರಕ್ತದಾನ ಶಿಬಿರದ ಜೊತೆಗೆ ಅಭಯಹಸ್ತ ಸಂಸ್ಥೆಯ ಉನ್ನತಿಗೆ ಸಹಕರಿಸಿದ ರಕ್ತದಾನಿಗಳಿಗೆ ಮತ್ತು ಇತರ ಸಾಧಕರಿಗೆ ಗೌರವಿಸುವ ಮೂಲಕ ಮಾದರಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಪ್ರಸಾದ್ ರಾಜ್ ಕಾಂಗ್ರೆಸ್ ಮುಖಂಡರು ಉಡುಪಿ, ಸಮಾಜಸೇವಕರು ಉಡುಪಿ, ಡಾ. ಚೇತನ್ ಶೆಟ್ಟಿ, ಉಪಪ್ರಾಂಶುಪಾಲರು, ಡಾ.ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ,ಡಾ.ದೇವಿಪ್ರಸಾದ್ ಹೆಜಮಾಡಿ, ರಾಜ್ಯ ಅಧ್ಯಕ್ಷರು , ರಾಷ್ತ್ರೀಯ ಮೀನುಗಾರರ ಸಂಘ (ರಿ) ಬೆಂಗಳೂರು, ಮನೋಹರ್ ಶೆಟ್ಟಿ ,ಸಾಯಿರಾಧಾ ಗ್ರೂಪ್ಸ್ ಉಡುಪಿ, ಡಾ. ಬಳ್ಕೂರು ಗೋಪಾಲ ಆಚಾರ್ಯ, ಪ್ರವರ್ತಕರು ಮಾತೃಶ್ರೀ ಸೇವಾ ಸಂಘ ಮಣಿಪಾಲ, ಕೆ. ರಂಜನ್ , ಆದಿತಿ ಬಿಲ್ಡರ್ಸ್ ಉಡುಪಿ,ಯತೀಶ್ ಬೈಕಂಪಡಿ, ಕೋಶಾಧಿಕಾರಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ( ರಿ) ಬೆಂಗಳೂರು, ಜಯಕರ್ ಶೇರಿಗಾರ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಕಡೆಕಾರು, ಪ್ರವೀಣ್ ಪೂಜಾರಿ ಹೀರೆಬೆಟ್ಡು, ಶ್ರೀ ಲಾಜಿಸ್ಟಿಕ್ ಮಣಿಪಾಲ,ಸದಾಶಿವ ಪಡುಬಿಧ್ರಿ, ಅಧ್ಯಕ್ಷರು, ಸಾಲ್ಯಾನ್ ಆದಿ ಮೂಲಸ್ಥಾನ (ರಿ) ಪಲಿಮಾರು, ದೇವಿಚರಣ್ ಕಾವಾ, ಉದ್ಯಮಿ ಮಣಿಪಾಲ ಉಪಸ್ಥಿತರಿದ್ದರು.
ಸತೀಶ್ ಸಾಲ್ಯಾನ್ ಮಣಿಪಾಲ್ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಅಭಿಜಿತ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು, ದೀಪಕ್ ಎಳ್ಳಾರೆ ಧನ್ಯವಾದ ಅರ್ಪಿಸಿದರು.ಈ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಸಾಧಕರಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಕ್ತದಾನ ಶಿಬಿರದಲ್ಲಿ 173 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.