ಕುಂದಾಪುರ (ಜ. 03): ತಾಲೂಕಿನ ನಾಡದ ಶ್ರೀ ಹಾಡಿಗರಡಿ ದೈವಸ್ಥಾನದ ವಾರ್ಷಿಕ ವಾರ್ಷಿಕ ಜಾತ್ರಾ ಮಹೋತ್ಸವವು 2025 ರ ಜನವರಿ 14 ಮತ್ತು 15ರಂದು ನಡೆಯಲಿದೆ.
ಜ.14 ಮಂಗಳವಾರ ಬೆಳಿಗ್ಗೆ 12ಕ್ಕೆ ಮಂಗಳಾರತಿ, ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ , 7.30ಕ್ಕೆ ದೈವದರ್ಶನ, ಗೆಂಡಸೇವೆ, 8 ಗಂಟೆಗೆ ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ, 9.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ.
ರಾತ್ರಿ 9.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಹಾಡಿಗರಡಿ ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ನಾಗೇಶ್ ಪಿ.ಕಾಂಚನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬೈ ಹೈಕೋರ್ಟ್ ವಕೀಲರಾದ ಚಂದ್ರ ಕೆ.ನಾಯ್ಕ ಬೆದ್ರಾಡಿಮನೆ ನಾಡ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಚಂದ್ರಕಾಂತ ರತ್ನ ಫೌಂಡೇಶನ್ ಪ್ರವರ್ತಕರಾದ ಬಸವರಾಜ್ ಕುದ್ರಿಸಾಲು ನಾಡ ಪ್ರತಿಭಾಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಲಿದ್ದಾರೆ. ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಿರೀಶ್ ಭಟ್ ಶುಭಶoಸನೆಗೈಯಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮುಂಬೈಯ ನಿವೃತ್ತ ಬಿಎಎಸ್ಎಫ್ ಮೆನೇಜಿಂಗ್ ಡೈರೆಕ್ಟರ್ ಪ್ರದೀಪ್ ಚಂದನ್, ಕುಂದಬಾರಂದಡಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ನಾಡ ಕಡಿಕೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಸಂಸಾಡಿ, ಪಡುಕೋಣೆ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ರಾಮ ಪೂಜಾರಿ, ಬೆಂಗಳೂರು ಉದ್ಯಮಿಗಳು, ಅನ್ನಸಂತರ್ಪಣೆ ಸೇವಾಕರ್ತರಾದ ಮಹೇಶ್ ಎನ್., ಕಾಂಚನ್ ನಾವುಂದ ಭಾಗವಹಿಸಲಿದ್ದಾರೆ.
ಚಂದ್ರಕಾಂತ ರತ್ನ ಫೌಂಡೇಶನ್ (ಸಿ.ಆರ್ಎಫ್) ನಾಡ ಇವರ ಸಹಯೋಗದೊಂದಿಗೆ ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ, ಆ ದಿನ ಸಂಜೆ ಹಾಡಿಗರಡಿ ಶ್ರೀ ನಂದಿಕೇಶ್ವರ ಮಕ್ಕಳ ಭಜನಾ ಮಂಡಳಿಯವರಿ೦ದ ಭಜನಾ ಕಾರ್ಯಕ್ರಮ, ಪ್ರಾಂಜಲಿ ಎಸ್ ಪಡುಕೋಣೆ ಮತ್ತು ಪ್ರಾಂಜಲ್ ಸದಾನಂದ ಬಳ್ಳೂರು ಇವರಿಂದ ಭರತನಾಟ್ಯ, ಸತೀಶ್ ಎಂ.ನಾಯಕ್ ನಾಡ ಮತ್ತು ತಂಡದವರಿಂದ ಗಿಂಡಿ ನರ್ತನ ನಡೆಯಲಿದೆ. ಜಯಂತ್ ಕುಂದರ್ ಬಾಳಿಕೆರೆ ನೇತ್ರತ್ವದ ಬ್ಲೂಸ್ಕೈ ಇವೆಂಟ್ಸ್ ಕುಂದಾಪುರ ಇವರ ಸಾರಥ್ಯದಲ್ಲಿ ಸಾಂಸ್ಕಂತಿಕ ಸಂಭ್ರಮ ನಡೆಯಲಿದೆ.
ಜನವರಿ 15ರಂದು ಬೆಳಿಗ್ಗೆ 10 ಗಂಟೆಗೆ ಹಣ್ಣುಕಾಯಿ ಸಮರ್ಪಣೆ, ಮಂಗಳಾರತಿ, ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಪ್ರಸಾದ ವಿತರಣೆ, ರಾತ್ರಿ 7.30ಕ್ಕೆ ಮಹಾಪೂಜೆ,ರಾತ್ರಿ 8 ಗಂಟೆಗೆ ಸರ್ವ ದೈವಗಳ ದರ್ಶನ ಸೇವೆ, ಹೂ ಸಮರ್ಪಣೆ, ಬಲಿಪೂಜೆ, 8.30ಕ್ಕೆ ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.