ಗಂಗೊಳ್ಳಿ(ಮಾ .25): ಬೈಲುಮನೆಯಲ್ಲಿರುವ ಶಿರಸಿ ಶ್ರೀ ಅಮ್ಮನವರಿಗೆ ರಜತ ಕಿರೀಟ ಮತ್ತು ರಜತ ಪ್ರಭಾವಳಿ ಸಮರ್ಪಣೆಯ ಕಾರ್ಯಕ್ರಮವು ಮಾರ್ಚ್ 30 ರಂದು ನಡೆಯಲಿದೆ.
ಆ ಪ್ರಯುಕ್ತ ಬೆಳಗ್ಗೆ ಗಂಟೆ ಒಂಬತ್ತರಿಂದ ಸಾಮೂಹಿಕ ಪ್ರಾರ್ಥನೆ,ಶ್ರೀ ಗುರು ಗಣಪತಿ ಪೂಜೆ, ಪುಣ್ಯಾಹವಾಚನ, ಕಲಾಭಿವೃದ್ಧಿ ಹೋಮ, ತತ್ವ ಹೋಮ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಅನ್ನಸಂತರ್ಪಣೆ ಕೂಡ ನಡೆಯಲಿರುವುದು. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.