ಗಂಗೊಳ್ಳಿ (ಜೂ ,2) : ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಎನ್.ಎಸ್. ಎಸ್ ಕೋಶ ಹಾಗೂ ಯೇನಪೋಯ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ಮಂಗಳೂರು ದೇರಳಕಟ್ಟೆಯ ಯೇನಪೋಯ ವಿಶ್ವವಿದ್ಯಾಲಯ ದೀಮ್ದ್ ಕ್ಯಾಂಪಸ್ ನಲ್ಲಿ ಜೂನ್ 4 ರಿಂದ 7 ರವರೆಗೆ ನಡೆಯುವ ಜಾಗತಿಕ ಯುವಶೃಂಗ ಸಭೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಧನ್ಯ ಯು ಆಯ್ಕೆಯಾಗಿದ್ದಾರೆ.
ಈಕೆ ಗುಜ್ಜಾಡಿ ನಾಯಕವಾಡಿಯ ಉದಯ್ ಎಮ್ ಪೂಜಾರಿ ಮತ್ತು ಶಾರದಾ ಯು. ಪೂಜಾರಿ ದಂಪತಿ ಪುತ್ರಿ .