ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕರು ತನ್ನ ಪ್ರಾಣವನ್ನು ಲೆಕ್ಕಿಸದೇ ದೇಶಕ್ಕಾಗಿ ಅಪ೯ಣೆಯಾದರು. ಇನ್ನೂ ಕೆಲವರು ತನ್ನ ಸಂಪೂಣ೯ ಸಮಯವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದರು.ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರ ಕೊಡುಗೆ ಕಡಿಮೆ ಇಲ್ಲಾ. ಹೊಟ್ಟೆಗೆ ಹಿಟ್ಟಿಲ್ಲವಾದರೂ ದೇಶ ಭಕ್ತಿಗೇನು ಕಡಿಮೆ ಇಲ್ಲಾ. ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಸೇವೆ ಯನ್ನು ನೀಡಿದ ಅವಳಿ ದಕ್ಷಿಣ ಕನ್ನಡ ಜಿಲ್ಲೆ(ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ) . ಕ್ರಿ.ಶ 1919 ಕಾಲಮಾನ ಅದು ಗಾಂಧೀಜಿಯವರ […]
Category: ಲೇಖನ
ಕುಂದಾಪ್ರ ಕನ್ನಡ —> ಲೇಖನ
ಗಾಂಧಿ ಎಂಬ ಮಾಂತ್ರಿಕ …..
2 ಅಕ್ಟೋಬರ್ 1869 ರಂದು ನಮ್ಮ ಭಾರತಾಂಬೆಯ ಪುಣ್ಯಗರ್ಭದಲ್ಲಿ ಜನಿಸಿ, ಭಾರತಾಂಬೆಯ ಕೀರ್ತಿಪತಾಕೆಯನ್ನು ವಿಶ್ವಕ್ಕೆ ಹಾರಿಸಿದ ಮಹಾನ್ ಚೇತನ ಮಹಾತ್ಮಾ ಗಾಂಧೀಜಿ. ಗಾಂಧಿ ಎಂದರೆ ಯಾರೊಬ್ಬರೂ ಮರೆಯಲಾಗದ ಭಾವ. ಜಗತ್ತಿಗೆಲ್ಲಾ ಶಾಂತಿ ಪಾಠಮಾಡಿದ ಶಾಂತಿ ದೂತ. ಆಧುನಿಕ ತಂತ್ರಜ್ಞಾನ ಯುಗದಲ್ಲೂ ಸದಾ ಕಾಡುವ ಶಕ್ತಿ. ದೇಶಕಾಲಗಳನ್ನು ಮೀರಿದ ವ್ಯಕ್ತಿ, ಇವರು ವ್ಯಕ್ತಿಯಷ್ಟೇ ಅಲ್ಲ ಚಿಂತನೆಗಳ ಜಾಲವಾಗಿದ್ದಾರೆ. ಆದರೆ ನಮ್ಮ ದುರ್ದೈವವೆಂದರೆ ಅಂದಿನಿoದ ಇಂದಿನವರೆಗೂ ಅಂತಹ ಮತ್ತೊಬ್ಬ ಮಹಾನ್ ಚೇತನ ಭಾರತಾಂಬೆಯ […]
ಮನದ ತಲ್ಲಣ….
ಯೌವ್ವನ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ತಲ್ಲಣವನ್ನು ಸ್ರಷ್ಠಿ ಮಾಡದೇ ಇರದು. ಆ ಸಮಯದಲ್ಲಿ ಯಾರ ಆಕರ್ಷಣೆ ಯಾವ ದಿಕ್ಕಿನೆಡೆಗೆ ತಿರುಗುತ್ತದೆ ಎಂದು ಹೇಳುದೇ ಕಷ್ಟ. ಕ್ಷಣ ಮಾತ್ರದಲಿ ಬೇರೆ ಬೇರೆ ಆಲೋಚನೆಗಳು….. ಗುಪ್ತಗಾಮಿನಿಯಂತೆ ಹರಿಯುವ ಚಿಂತನೆಗಳು.. ಯಾವುದು ಸರಿ? ಯಾವುದು ತಪ್ಪು? ಎನ್ನುವ ಚಂಚಲ ಮನಸ್ಥಿತಿ. ಕೆಲವರು ಸಕಾರಾತ್ಮಕ ಚಿಂತನೆಗೆ ಒಳಗಾದರೆ ಇನ್ನು ಕೆಲವರು ನಕಾರಾತ್ಮಕ ಚಿಂತನೆಗೆ ಸಿಲುಕಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಯಾವುದೇ ವಿಷಯದ ಬಗ್ಗೆ ಆಸಕ್ತಿ ಇಲ್ಲದಿರುವುದು..ಯಾಕೋ ತಿಳಿಯದು …. […]
ಯಕ್ಷ ಕಲಾವಿದ ,ಅಬ್ಬರದ ಮಹಿಷಾಸುರ ಖ್ಯಾತಿಯ ನಂದೀಶ್ ಜನ್ನಾಡಿ
ನವರಸಗಳಿಂದ ಕೂಡಿದ ಒಂದು ಕಲಾ ಪ್ರಕಾರ ಇದೆ ಎಂದಾದರೆ ಅದು ಯಕ್ಷಗಾನ ಮಾತ್ರ. ಹಾಡುಗಾರಿಕೆ, ವೇಷ ಭೂಷಣಗಳ ಒಳಗೊಂಡ ಒಂದು ಸ್ವತಂತ್ರ ಕಲೆಯಾದ ಯಕ್ಷಗಾನ ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು, ಕೇರಳದ ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನವನ್ನು ಭಕ್ತಿಯಿಂದ ಆರಾಧನಾ ಕಲೆಯಾಗಿ ನಂಬಿದವರು ಇದ್ದಾರೆ. ಯಕ್ಷಗಾನವು ಮೂರು ತಿಟ್ಟುಗಳು ಬಡಗು ತಿಟ್ಟು, ತೆಂಕುತಿಟ್ಟು , ನಡುತಿಟ್ಟು ಎಂದು ವಿಂಗಡಿಸಲ್ಪಟ್ಟಿದ್ದರೂ ಆದರ ಮೂಲ ತತ್ವಗಳು ಮತ್ತು […]
ಯಕ್ಷಗಾನದ ನವ ಸಂಚಲನಕ್ಕೆ ಕಾಲಮಿತಿ ಅಗತ್ಯ
ಕರಾವಳಿಗರ ಆರಾಧನಾ ಕಲೆ ಯಕ್ಷಗಾನ. ಕರ್ನಾಟಕದ ಗಂಡು ಕಲೆ ಕೂಡ ಹೌದು. ಸುಮಾರು ಒಂದು ಸಾವಿರ ವರ್ಷದಿಂದ ಕಾಲದಿಂದ ಕಾಲಕ್ಕೆ ಹಲವಷ್ಟು ಬದಲಾವಣೆ ಆಗುತ್ತಲೇ ಸಾಗಿ ಬಂದಿದೆ. ಆರಂಭದಲ್ಲಿ ಪೌರಾಣಿಕ ಕಥೆಗಳ ಯಕ್ಷಗಾನ, ದಶಕಗಳು ಉರುಳಿದಂತೆ ಸಾಮಾಜಿಕ ಕಥೆಗಳು, ಆ ನಂತರ ಕಾಲ್ಪನಿಕ ಕಥೆಗಳು ಕೂಡ ರಂಗಸ್ಥಳದಲ್ಲಿ ಪ್ರದರ್ಶನ ಕಂಡವು. ಇವೆಲ್ಲವನ್ನೂ ಕಾಲಘಟ್ಟದ ಬದಲಾವಣೆಗಳಂತೆ ವಿಭಾಗಿಸಬಹುದು. ಆದರೆ ಇತ್ತೀಚಿನ ಯಕ್ಷಗಾನವನ್ನು ಬಹು ಮುಖ್ಯವಾಗಿ ಎರಡು ವಿಭಾಗ ಮಾಡಬಹುದು. ಕರೋನ ಪೂರ್ವ […]
ಅಮ್ಮನ ಅಂತರಾಳ
ಆಕೆಗೆ ಸುಮಾರು ಅರವತ್ತಗಿರಬಹುದು.ಆದರೂ ತನ್ನದೇ ಆದ ಸ್ವಂತ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದಾಳೆ.ಆಕೆಗೆ ಏರಡು ಮಕ್ಕಳು. ಅದರಲ್ಲೊಬ್ಬ ಮಾನಸಿಕ ಅಸಮಾನತೆಗೆ ಒಳಪಟ್ಟ ಅಂಗವಿಕಲ.ಇನ್ನೊಬ್ಬ ಗಲ್ಫ್ ದೇಶದಲ್ಲಿ ಕೆಲಸದಲ್ಲಿದ್ದ. ಆತನನ್ನು ಈಕೆ ನೋಡದೆ ಎಷ್ಟೋ ವರುಷಗಳೇ ಆಗಿದ್ದವು.ಹಬ್ಬಕ್ಕೆ ಹುಣ್ಣಿಮೆಗೊಮ್ಮೆ ಪಕ್ಕದ ಶೆಟ್ಟರ ಮನೆಗೆ ಕರೆಮಾಡಿ ಆಕೆಯ ಬಳಿ ಮಾತನಾಡುತ್ತಿದ್ದ. ಪ್ರತಿ ಬಾರಿಯೂ ಕರೆ ಮಾಡಿದಾಗಲೂ ಆತ ಹೇಳುತ್ತಿದ್ದದ್ದು ಏರಡೇ ಮಾತು.ಮುಂದಿನ ತಿಂಗಳಲ್ಲಿ ಊರಿಗೆ ಬರುವೆ ಹಾಗೂ ನಾಳೆ ಶೆಟ್ಟರ ಬಳಿ ಮಾತನಾಡಿದ್ದೇನೆ ಅವರ […]
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿ ಆಸೆ ಪೂರೈಸುವ ಆಶಯದಿಂದ ರೂಪು ತಳೆದ ಸಂಸ್ಥೆ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ
ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ , ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ವಿಶೇಷ ಸಾಲಿನಲ್ಲಿ ಗುರುತಿಸಿಕೊಂಡಿದೆ. ‘ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾಗಬೇಕು’ ಎಂಬುದು ಕಾಲೇಜಿನ ಅಧ್ಯಕ್ಷರು ಮತ್ತು ಬೈಂದೂರು ಶಾಸಕರಾದ ಶ್ರೀ.ಬಿ.ಎಂ. ಸುಕುಮಾರ ಶೆಟ್ಟಿಯವರ ಧ್ಯೇಯ. 130 ವಿದ್ಯಾರ್ಥಿಗಳೊಂದಿಗೆ ಹನ್ನೊಂದು ವರ್ಷಗಳ ಹಿಂದೆ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1200 ಕಲಿಕಾರ್ಥಿಗಳಿದ್ದಾರೆ ಎಂಬುದು ಸಂಸ್ಥೆಯ ಸಾಧನೆಯ ಹಾದಿಯ ಹೆಗ್ಗುರುತು. ಆರಂಭಗೊಂಡ ಕಿರು ಅವಧಿಯಲ್ಲಿ ಶೈಕ್ಷಣಿಕವಾಗಿ, […]
ಚಿಟ್ಟೆ ನಾಟಕ ಪ್ರದರ್ಶನಕ್ಕೆ ಮನಸೋತ ಪ್ರೇಕ್ಷಕ ವರ್ಗ
ಬೇಲೂರು ರಘುನಂದನ್ ಸರ್ ರವರ ರಚನೆಯ, ಕೃಷ್ಣಮೂರ್ತಿ ಕವತ್ತಾರ್ ಸರ್ ರವರ ನಿರ್ದೇಶನದಲ್ಲಿ, ನನ್ನ ಪುಟ್ಟ ಗೆಳೆಯ ಗೋಕುಲ ಸಹೃದಯ ನಟಿಸಿರುವ ನಾಟಕ ಚಿಟ್ಟೆ. ಈ ನಾಟಕ ರಚನೆಯಾಗಿ ಪ್ರದರ್ಶನ ಗೊಳ್ಳಲು ಪ್ರಾರಂಭವಾಗಿ ಸುಮಾರು ಒಂದೂವರೆ ವರ್ಷಗಳೇ ಆಗಿರಬಹುದು ಎಂದು ಭಾವಿಸುತ್ತೇನೆ.ಇಂದು ಕರಾವಳಿ ಭಾಗದಲ್ಲಿ ಈ ನಾಟಕದ ಪ್ರದರ್ಶನಗಳು ಆಯೋಜನೆಗೊಂಡಿದ್ದು ಅದೆಷ್ಟೋ ದಿನಗಳಿಂದ ಈ ನಾಟಕವನ್ನು ನೋಡಲು ಅವಕಾಶ ವಂಚಿತನಾಗಿದ್ದ ನಾನು ಇಂದು ಅರೆಹೊಳೆ ಪ್ರತಿಷ್ಠಾನ, ಅರೆಹೊಳೆಯಲ್ಲಿ ಈ ನಾಟಕದ ನಲವತ್ತೈದನೇ ಪ್ರದರ್ಶನ […]
ಡ್ರಾಮ ಜ್ಯುನಿಯರ್ ಖ್ಯಾತಿಯ ಬಾಲನಟಿ ಕುಂದಾಪುರದ ಕುವರಿ ಸಮೃದ್ಧಿ ಎಸ್ ಮೊಗವೀರ
ನಿಮ್ಮ ಮಕ್ಕಳನ್ನು ಪಠ್ಯದ ಕಲಿಕೆಯ ಪರಿದಿಗೆ ಮಾತ್ರ ಸೀಮಿತಗೊಳಿಸಬೇಡಿ ಎನ್ನುವ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ರವರು ಹೇಳಿದ ಮಾತು ಈಗಿನ ಮಕ್ಕಳ ಪ್ರತಿಭೆ, ಕಲೆ, ಕೌಶಲ್ಯ, ಬುದ್ಧಿವಂತಿಕೆಯನ್ನು ಕಂಡಾಗ ನೂರಕ್ಕೆ ನೂರು ಪ್ರಸ್ತುತ ಅನ್ನಿಸುತ್ತದೆ. ಪ್ರೋತ್ಸಾಹ ಮತ್ತು ಸಹಕಾರ ದೊರೆತರೆ ಉತ್ತಮ ಕಲಾವಿದರಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣವನ್ನು ನಮ್ಮ ಯುವ ಸಮುದಾಯ ಹೊಂದಿದೆ .ಆ ನಿಟ್ಟಿನಲ್ಲಿ ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಡ್ರಾಮ ಜುನಿಯರ್ ಸೀಜನ್ -4 ಖ್ಯಾತಿಯ ಬಾಲಪ್ರತಿಭೆ ಕುಂದಾಪುರದ ಸಮೃದ್ಧಿ […]
ಮತ್ತೆ ಅಂಕಣಕ್ಕೆ ಇಳಿದ ಛಲಗಾರ ಸುಷ್ಮಂತ್ ಒಂಟಿ ಕಾಲಲ್ಲೇ ಟೂರ್ನಿ ಆಯೋಜಿಸಿ ಗೆದ್ದ ಸುಷ್ಮಂತ್
ಭಾರತೀಯ ಪ್ರೊ ಕಬ್ಬಡ್ಡಿ ತಂಡದ ಬಾಗಿಲು ಬಡಿದು ಬಂದಿದ್ದ ಸುಷ್ಮಂತ್ ಎನ್ನುವ ಮಲೆನಾಡಿನ ಪ್ರತಿಭೆ ಇನ್ನೇನು ಮುಂಬೈ ತಂಡ ಸೇರಿಯೇ ಬಿಟ್ಟ ಅನ್ನೋವಷ್ಟರಲ್ಲಿ ಆತನ ಜೀವನದಲ್ಲಿ ವಿಧಿ ಬೇರೆಯದೇ ಆಟ ಆಡಿತ್ತು. ಮೂರು ವರ್ಷಗಳ ಹಿಂದೆ ಪ್ರೊ ಕಬಡ್ಡಿ ಉತ್ತುಂಗಕ್ಕೆ ಏರಿದಾಗ ಕಬಡ್ಡಿ ಆಟಗಾರರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ಸಂತಸದ ಮಾತೇ.ಮಲೆನಾಡಿನ ಹೊಸನಗರದ ಹೆದ್ದಾರಿಪುರದ ತೊರೆಗದ್ದೆಯ ಮಧ್ಯಮ ಕುಟುಂಬದ ಹುಡುಗ ಬಾಲ್ಯದಿಂದಲೂ ಕಬ್ಬಡ್ಡಿ ಅಂಕಣದಲ್ಲಿ ಕಳೆದದ್ದೇ ಹೆಚ್ಚು. […]