ಕುಂದಾಪುರ (ಮಾ.13): ತಾಲೂಕಿನ ಬಸ್ರೂರು ಗ್ರಾಮ ಪಂಚಾಯತ್ ಹಿಂಭಾಗದ ಅಶೋಕ ಪಾರ್ಕ್ ಜೀರ್ಣೋದ್ಧಾರ ಕಾರ್ಯವು ಸ್ಧಳೀಯರ ಸಹಕಾರದಲ್ಲಿ ನಡೆಯುತ್ತಿದ್ದು,ಈ ಪಾರ್ಕ ಅಭಿವೃದ್ಧಿ ಕಾರ್ಯದ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ಮೆಂಡನ್ ನೇತೃತ್ವದಲ್ಲಿ ಜಾಗ ಸಮತಟ್ಟು ಮಾಡುವ ಸಂಧರ್ಭ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ. ಈ ಕಲ್ಲಿನ ಬಗ್ಗೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕರು ಪ್ರದೀಪ ಕುಮಾರ್ ಬಸ್ರೂರು ಇವರ ಗಮನಕ್ಕೆ ತಂದಿರುತ್ತಾರೆ. ಕಲ್ಲಿನಲ್ಲಿ […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ನಾಡ: ಜನವರಿ 27 ರಂದು ಡಾ. ಜಿ ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಾವಣೆ
ಪಡುಕೋಣೆ (ಜ,26): ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ, ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ, ಹಾಗೂ ಜನಶಕ್ತಿ ಸೇವಾ ಟ್ರಸ್ಟ್ ರಿ. ನಾಡ ಇವರ ಸಹಯೋಗದೊಂದಿಗೆ, ಡಾ. ಜಿ ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನವೀಕರಣ ಹಾಗೂ ಹೊಸ ಕಾರ್ಡ್ ನೋಂದಾವಣೆ ಅಭಿಯಾನ ಜನವರಿ 27 ರ ಶುಕ್ರವಾರ , ಸಮಯ ಬೆಳಿಗ್ಗೆ 9.30ರಿಂದ ಸಂಜೆ 4.00 ಘಂಟೆ ತನಕ […]
ಬೈಂದೂರು: ವಿದ್ಯುತ್ ಉಪಕೇಂದ್ರ ಉದ್ಘಾಟನೆ-ಗ್ರಾಮೀಣ ಭಾಗದ ಜನರ ಬಹುಕಾಲದ ಬೇಡಿಕೆಗೆ ಸ್ಪಂದನೆ
ಬೈಂದೂರು(ಅ,25): ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ 33/11 ಕೆವಿ ವಿದ್ಯುತ್ ಉಪಕೇಂದ್ರ ಉದ್ಘಾಟನೆಯನ್ನು ಇಂಧನ ಸಚಿವರಾದ ಶ್ರೀ ಸುನಿಲ್ ಕುಮಾರ್ ರವರು ಅ .25 ರಂದು ನೆರವೇರಿಸಿದರು. ಇದರಿಂದಾಗಿ ಕೊಲ್ಲೂರು, ಜಡ್ಕಲ್, ಮುದೂರು, ಗೋಳಿಹೊಳೆ, ಇಡೂರು ಕುಂಜ್ಞಾಡಿ ಗ್ರಾಮಗಳ ಸುತ್ತ ಮುತ್ತಲಿನ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿ ಪ್ರತ್ಯೇಕ 11 ಕೆ.ವಿ. ಫೀಡರುಗಳ ಮೂಲಕ ಗುಣಮಟ್ಟದ ವಿದ್ಯುತ್ ಸರಬರಾಜು ಸಾಧ್ಯವಾಗುತ್ತದೆ. ಇದರಿಂದಾಗಿ ಕೃಷಿಯನ್ನು ಬದುಕಾಗಿಸಿಕೊಂಡಿರುವ ಈ ಭಾಗದ ಸುಮಾರು 1,745ಕ್ಕೂ ಮಿಕ್ಕಿ […]
ಗಂಗೊಳ್ಳಿಯಲ್ಲಿ ಗೂಡುದೀಪ ಸ್ಪರ್ಧೆ
ಗಂಗೊಳ್ಳಿ(ಅ,19): ಡಾ.ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ಗೂಡುದೀಪ ಸ್ಪರ್ಧೆಯನ್ನು ಅಕ್ಟೋಬರ್ 24 ರಂದು ಹಮ್ಮಿಕೊಳ್ಳಲಾಗಿದೆ. ಪ್ರಥಮ ದ್ವಿತೀಯ ಮತ್ತು ತೃತೀಯ ನಗದು ಬಹುಮಾನಗಳು ಇವೆ. ಸ್ವಂತ ರಚನೆಯ ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಗೂಡುದೀಪಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿದ್ದು ಅಕ್ಟೋಬರ್ 23ರ ಒಳಗೆ ಸ್ಪರ್ಧಾಳುಗಳು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 7406196138, 9481751521, 9535633230 9632867885 ನಂಬರನ್ನು ಸಂಪರ್ಕಿಸಲು ಕೋರಲಾಗಿದೆ. ವರದಿ : ನರೇಂದ್ರ […]
ಆಲೂರು: ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ
ಕುಂದಾಪುರ(ಅ,10): ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೋಳೂರಿನ ಮಾಸ್ತಿ ಎಂಬುವವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ. ಚಿರತೆಯು ಮಾಸ್ತಿಯವರ ಮನೆಯ ಆವರಣವಿಲ್ಲದ ಬಾವಿಗೆ ಬಿದ್ದಿದ್ದು ಸೋಮವಾರ ಬೆಳಿಗ್ಗೆ ಮನೆಯವರು ನೋಡಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯವರು ಬೋನನ್ನು ಬಾವಿಗೆ ಇಳಿಬಿಟ್ಟು ನಾಜೂಕಾಗಿ ಕಾರ್ಯಾಚರಣೆ ನಡೆಸಿ ಅಂದಾಜು 4-5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ […]
ಕುಂದಾಪುರ ತಾಲೂಕಿನ ವಿಶೇಷ ಚೇತನರ ಸಂಪನ್ಮೂಲ ಕೇಂದ್ರಕ್ಕೆ ಕೆ.ಎಸ್.ಲತಾ ಕುಮಾರಿ ಭೇಟಿ
ಕುಂದಾಪುರ( ಅ,4): ತಾಲೂಕಿನ ವಿಶೇಷ ಚೇತನರ ಸಂಪನ್ಮೂಲ ಕೇಂದ್ರಕ್ಕೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಾನ್ಯ ರಾಜ್ಯ ಆಯುಕ್ತರು ಹಾಗೂ ನಿರ್ದೇಶಕರಾದ ಕೆ.ಎಸ್.ಲತಾ ಕುಮಾರಿ ಇತ್ತೀಚೆಗೆ ಭೇಟಿ ನೀಡಿದರು . ಈ ಸಂದರ್ಭದಲ್ಲಿ ಅವರನ್ನು ತಾಲೂಕು MRW VRW,URW ನೌಕರರ ಸಂಘದಿಂದ ಸ್ವಾಗತಿಸಿ ,ಅಭಿನಂದಿಸಿದರು. ಈ ಸಂದರ್ಭದಲ್ಲಿ ತಾಲೂಕು ವಿಶೇಷ ಚೇತನ ಸಂಪನ್ಮೂಲ ವ್ಯಕ್ತಿ ಹಾಗೂ ಯೂನಿಯನ್ ಗೌರವಾಧ್ಯಕ್ಷರಾದ ಶ್ರೀ ಮಂಜುನಾಥ ಹೆಬ್ಬಾರ್, ತಾಲೂಕು ನೌಕರರ ಸಂಘದ […]
ಸೇವೆಯಿಂದ ನಿವ್ರತ್ತರಾದ ನೆಂಪು ಅಂಗನವಾಡಿ ಶಿಕ್ಷಕಿ ಭಾರತಿ ಶೆಟ್ಟಿಯವರಿಗೆ ಬಿಳ್ಕೋಡುಗೆ
ವಂಡ್ಸೆ (ಜು, 30) : ಸುಧಿರ್ಘ 25 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಜು,30 ರಂದು ಸೇವೆಯಿಂದ ನಿವ್ರತ್ತರಾದ ನೆಂಪು ಅಂಗನವಾಡಿ ಶಿಕ್ಷಕಿ ಭಾರತಿ ಶೆಟ್ಟಿಯವರನ್ನು ಶ್ರೀ ವಿನಾಯಕ ಯುವಕ ಸಂಘ (ರಿ) ನೆಂಪು ಹಾಗೂ ನೆಂಪು ಗ್ರಾಮಸ್ಥರ ವತಿಯಿಂದ ಅವರ ಸೇವೆಯನ್ನು ಗುರುತಿಸಿ ಬೀಳ್ಕೊಡುಗೆಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ನೆಂಪುವಹಿಸಿದ್ದರು. […]
ಗಂಗೊಳ್ಳಿ: ಉಚಿತ ಹೊಲಿಗೆ ತರಬೇತಿ
ಗಂಗೊಳ್ಳಿ(ಜು,23): ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ರೋಟರಿ ಜಿಲ್ಲೆ 31 82ರ ಜಿಲ್ಲಾ ಗವರ್ನರ್ ರೊಟೇರಿಯನ್ ಡಾ. ಜಯಗೌರಿ ಹಾದಿಗಲ್ ರವರ ಮಹತ್ವಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮ ಮಹಿಳಾ ಸಬಲೀಕರಣದ ಭಾಗವಾಗಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಆಯ್ದ ಮಹಿಳೆಯರಿಗೆ ಸ್ವ ಉದ್ಯೋಗ ಮಾಡುವಲ್ಲಿ ತರಬೇತುಗೊಳಿಸಲು ಆಯೋಜಿತವಾದ ಮೂರು ತಿಂಗಳ ಕಾಲಾವಧಿಯ ಉಚಿತ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ ಗಂಗೊಳ್ಳಿಯಲ್ಲಿ ನೆರವೇರಿತು. ವಲಯ ಒಂದರ […]
ರೋಟರಿ ಕ್ಲಬ್ ಗಂಗೊಳ್ಳಿ : ಪದಪ್ರದಾನ ಸಮಾರಂಭ
ಗಂಗೊಳ್ಳಿ(ಜು,21): ನಾವು ಮಾಡುವ ಸೇವೆ ಅರ್ಹ ವ್ಯಕ್ತಿಗಳಿಗೆ ತಲುಪಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿದ ಸೇವೆಯಿಂದ ಜೀವನ ಸಾರ್ಥಕ ಗೊಳ್ಳುತ್ತದೆ ಎಂದು ರೋಟರಿ ಕ್ಲಬ್ ನ ವಲಯ ಒಂದರ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಉಮೇಶ್ ಪುತ್ರನ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಗಂಗೊಳ್ಳಿಯ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಮಾಜ ಸೇವಾ […]
ಬಸ್ರೂರು: ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆ
ಬಸ್ರೂರು(ಜೂ,20): ಇಲ್ಲಿನ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ “ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿದೆ. ಕುಂದಾಪುರ ತಾಲೂಕು ಬಸ್ರೂರು ಗ್ರಾಮ ಬಹಳ ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿ ವಿಜಯನಗರ,ಆಳುಪ,ಕೆಳದಿ ಸಂಸ್ಥಾನಗಳು ಆಳ್ವಿಕೆ ನಡೆಸಿದ ಸ್ಥಳ ಕೂಡಾ ಆಗಿದೆ.ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ ಹೊರ ಸುತ್ತಿನ ಎದುರು ಭಾಗದಲ್ಲಿ ಕ್ರಿ.ಶ 15-16ನೇ ಶತಮಾನದ ಅಂದರೆ ಸರಿಸುಮಾರು 500 ವಷ೯ಗಳ ಹಳೆಯದಾದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿರುವುದು […]










