ಹೆಮ್ಮಾಡಿ( ಜ,29): ಇಲ್ಲಿನ ಶ್ರೀ ಕುಪ್ಪಣ್ಣ ಹಾಯ್ಗೂಳಿ ಜಟ್ಟಿಗ ಹಾಗೂ ಸಪರಿವಾರ ದೈವಸ್ಥಾನ ಕಟ್ಟು, ಸುಳ್ಸೆ, ದೇಗುಲದಲ್ಲಿ ಮಹಾ ಘಂಟೆ ಲೋಕಾರ್ಪಣೆ ,ಬ್ರಹ್ಮ ಕುಂಭಾಭಿಷೇಕ ಹಾಗೂ ವಾರ್ಷಿಕ ಹೂವಿನ ಪೂಜಾ ಕಾರ್ಯಕ್ರಮ ಫೆಬ್ರುವರಿ 4ರಿಂದ 06, ತನಕ ನಡೆಯಲಿದೆ. ಫೆ, 4ರ ಮಂಗಳವಾರದಂದು ಮಹಾ ಗಂಟೆಯ ಪುರ ಮೆರವಣಿಗೆಯು ಹೆಮ್ಮಾಡಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದಿಂದ ಮಧ್ಯಾಹ್ನ ಗಂಟೆ 3:30ಕ್ಕೆ ಹೊರಡಲಿರುವುದು. ರಾತ್ರಿ ಗಂಟೆ 7:30 ಕ್ಕೆ ಸರಿಯಾಗಿ ಧಾರ್ಮಿಕ ಸಭಾ […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ: ಸುವರ್ಣ ಸಂಗಮ ಸಂಪನ್ನ
ನಾಯಕವಾಡಿ (ಜ,22) : ಸಂಸ್ಕಾರ ಭರಿತ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಲು ಖಂಡಿತ ಸಾಧ್ಯವಿದೆ . ಅದಕ್ಕೆ ತಕ್ಕ ಇಚ್ಚಾ ಶಕ್ತಿಯನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಸಕಲೇಶಪುರದ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಅಭಿಪ್ರಾಯಪಟ್ಟರು. ಅವರು ನಾಯಕವಾಡಿ ಗುಜ್ಜಾಡಿಯ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ಸುವರ್ಣ ಸಂಗಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ […]
ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಗುಜ್ಜಾಡಿ: ಗಾನ ಸಂಭ್ರಮ
ಗಂಗೊಳ್ಳಿ (ಜ,20): ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಗುಜ್ಜಾಡಿಯ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ್ ಜಿಲ್ಲಾ ಮಟ್ಟದ ಕರೋಕೆ ಟ್ರ್ಯಾಕ್ ಗೀತ ಗಾಯನ ಸ್ಪರ್ಧೆ ಗಾನ ಸಂಭ್ರಮ 2025 ರ ಫೈನಲ್ ಸ್ಪರ್ಧೆ ಇತ್ತೀಚೆಗೆ ಸುವರ್ಣ ಸಂಗಮ ವೇದಿಕೆಯಲ್ಲಿ ನಡೆಯಿತು. ಸರಿಗಮಪ ಖ್ಯಾತಿಯ ಗಾಯಕರಾದ ಕಂಬದ ರಂಗಯ್ಯ, ಮತ್ತು ಪ್ರಥ್ವಿ ಭಟ್ ಹಾಗು ಸ್ಟಾರ್ ಸಿಂಗರ್ ಖ್ಯಾತಿಯ ವಿನುಷ್ ಭಾರದ್ವಾಜ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸರಿಗಮಪ ಖ್ಯಾತಿಯ ಗಾಯಕರಾದ […]
ಶ್ರೀ ದುರ್ಗಾಂಬಿಕೆ ದೇವಸ್ಥಾನ ಕೆಳಾ ಹೇರೂರು: ಜ .16 ರಂದು ವರ್ಷಾವಧಿ ಜಾತ್ರಾ ಮಹೋತ್ಸವ
ಬೈಂದೂರು(ಜ.14): ಬೈಂದೂರು ತಾಲೂಕಿನ ಹೇರೂರು ಗ್ರಾಮದ ಕೆಳಾಹೇರೂರಿನ ಶ್ರೀ ದುರ್ಗಾಂಬಿಕೆ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಜನವರಿ 16 ನೇ ಗುರುವಾರದಂದು ಜರುಗಲಿದೆ. ಭಕ್ತಾದಿಗಳು ಸಕುಟುಂಬ ಸಮೇತರಾಗಿ ಆಗಮಿಸಿ, ಶ್ರೀದೇವರ ಸನ್ನಿಧಾನದಲ್ಲಿ ನಡೆಯುವ ಧಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿ, ಮಧ್ಯಾಹ್ನದ ಮಹಾ ಅನ್ನಸಂತರ್ಪಣೆಯ ಮಹಾಪ್ರಸಾದವನ್ನು ಸ್ವೀಕರಿಸಿ, ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇಗುಲದ ಮೊಕ್ತೇಸರರಾದ ಶ್ರೀ ಮಹಾಬಲ ಶೆಟ್ಟಿ ಗರಡಿ ಮನೆ ಹಾಗೂ ಗರಡಿಮನೆ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ಯುವ ಬಂಟರ ಸಂಘ : 90 ರ ಸಂಭ್ರಮದ ಶ್ರೀ ಬಿ.ಅಪ್ಪಣ್ಣ ಹೆಗ್ಡೆ ಯವರಿಗೆ ಗೌರವಾರ್ಪಣೆ
ಕುಂದಾಪುರ (ಡಿ. 23): ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ 90 ರ ಸಂಭ್ರಮದಲ್ಲಿರುವ ನಾಡಿನ ಗಣ್ಯಮಾನ್ಯರಾದ ಶ್ರೀ ಬಸ್ರೂರು ಅಪ್ಪಣ್ಣ ಹೆಗ್ಡೆ ಯವರನ್ನು ಅವರ ಸ್ವಗ್ರಹದಲ್ಲಿ ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ವತ್ಸಲ ದಯಾನಂದ ಶೆಟ್ಟಿ ,ಸಂಘದ ಪೋಷಕರಾದ ವಿಜಯ ಶೆಟ್ಟಿ ಸಟ್ಟಾಡಿ ಮತ್ತು ಸಂಘದ ಸ್ಥಾಪಕಾಧ್ಯಕ್ಷರು ಮತ್ತು ದಶಮ ಸಂಭ್ರಮದ ಅಧ್ಯಕ್ಷರಾದ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಯವರು ಸನ್ಮಾನಿಸಿ ಗೌರವಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ನಿತೀಶ್ ಶೆಟ್ಟಿ ಬಸ್ರೂರು […]
ಡಿ.25 ರಂದು ಕೆಂಚನೂರಿನಲ್ಲಿ ಪ್ರೇಮ ಪಂಜರ ಯಕ್ಷಗಾನ
ಕೆಂಚನೂರು( ಡಿ.24): ಶ್ರೀ ಕ್ಷೇತ್ರ ಮೆಕ್ಕೆಕಟ್ಟು, ಶಿರಿಯಾರ ಇವರ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ವತಿಯಿಂದ ಡಿಸೆಂಬರ್ 25 ರಂದು ಕುಂದಾಪುರ ತಾಲೂಕಿನ ಕೆಂಚನೂರಿನಲ್ಲಿ ಅಂಬಿಕಾ ಪೂಜಾರಿ ಕಥಾ ಸಾಂಗತ್ಯದ ಬೇಳೂರು ವಿಷ್ಣುಮೂರ್ತಿ ನಾಯಕ್ ಪದ್ಯ ಸಾಹಿತ್ಯ ದ ಪ್ರೇಮ ಪಂಜರ ಯಕ್ಷಗಾನ ಅಂದು ರಾತ್ರಿ 9 ರಿಂದ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಡಿ : ಶ್ರೀ ಮಾಸ್ತಿ ಸೂಲದ ಹೈಗುಳಿ ಮತ್ತು ಪರಿವಾರ ದೈವಗಳ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮನವಿ
ಹೆಮ್ಮಾಡಿ (ಡಿ. 22): ಕುಂದಾಪುರ ತಾಲೂಕಿನ ದೇಲ್ಕುಂದ ಗ್ರಾಮದ ಇತಿಹಾಸ ಪ್ರಸಿದ್ದ ಜಾಡಿ ಕೋಟಿಮನೆ ಶ್ರೀಮಾಸ್ತಿ ಸೂಲದ ಹೈಗುಳಿ ಮತ್ತು ಪರಿವಾರ ದೈವಗಳ ದೈವಸ್ಥಾನ ಬಹಳ ವರ್ಷಗಳಿಂದ ಅಜೀರ್ಣ ವ್ಯವಸ್ಥೆಯಲ್ಲಿದ್ದು, ಕಟ್ಟಡ ಸಂಪೂರ್ಣ ಶಿತಿಲಗೊಂಡಿದೆ. ಆ ನಿಟ್ಟಿನಲ್ಲಿ ಊರ ಹಿರಿಯರು ಹಾಗೂ ದೈವವನ್ನು ನಂಬಿರುವ ಕುಟುಂಬಸ್ಥರು ಮತ್ತು ದಾನಿಗಳ ಸಹಕಾರದಿಂದ ಪುನರ್ನಿರ್ಮಾಣ ಮಾಡಿಸಲು ತೀರ್ಮಾನಿಸಿದ್ದು, ದೇವಸ್ಥಾನ ನಿರ್ಮಾಣಕ್ಕೆ ಅಂದಾಜು ಮೊತ್ತ 15,00,000/- ಬೇಕಾಗಿರುತ್ತದೆ. ಸದ್ಭಕ್ತರು ದೇಗುಲದಜೀರ್ಣೋದ್ಧಾರಕ್ಕೆ ಕೈಜೋಡಿಸಬೇಕೆಂದು ದೇಗುಲದ ಆಡಳಿತ […]
ಹೆಮ್ಮಾಡಿ: ವೆಲಾಸಿಟಿ ಅಕಾಡೆಮಿ ಇಂಡಿಯಾ ವತಿಯಿಂದ ಶ್ರೀ ಉದಯ್ ಕುಮಾರ್ ಹಟ್ಟಿಯಂಗಡಿಯವರಿಗೆ ಸನ್ಮಾನ
ಹೆಮ್ಮಾಡಿ( ಡಿ.19): ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪುರಸ್ಕ್ರತ ಶ್ರೀ ಉದಯ್ ಕುಮಾರ್ ಹಟ್ಟಿಯಂಗಡಿಯವರನ್ನು ವೆಲಾಸಿಟಿ ಅಕಾಡೆಮಿ ಇಂಡಿಯಾ ಕರಾಟೆ ತರಭೇತಿ ಸಂಸ್ಥೆಯ ಮುಖ್ಯಸ್ಥರಾದ ಅಕ್ಷಯ ಹೆಮ್ಮಾಡಿಯವರು ತಮ್ಮ ಸಂಸ್ಥೆಯ ವತಿಯಿಂದ ಡಿಸೆಂಬರ್ 15 ರಂದು ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗೀಶ್ ಗುಡ್ರಿ […]
ಹೆಮ್ಮಾಡಿಯಲ್ಲಿ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನವೀಕರಣ ಹಾಗೂ ನೋಂದಾವಣೆ ಅಭಿಯಾನ
ಹೆಮ್ಮಾಡಿ (ಡಿ,016): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ [ರಿ.] ಅಂಬಲಪಾಡಿ, ಉಡುಪಿ ಮತ್ತು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಮಾಹೆ- ಮಣಿಪಾಲ ಇವರ ಸಹಯೋಗದೊಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಆಕರ್ಷಕ ಯೋಜನೆಯಾದ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯ ನವೀಕರಣ ಹಾಗೂ ನೋಂದಾವಣೆ ಅಭಿಯಾನ ಡಿಸೆಂಬರ್ 17 ರಿಂದ ಜನವರಿ 10 ರ ತನಕ ಹೆಮ್ಮಾಡಿಯ ಬಸ್ ನಿಲ್ದಾಣ ದ ಸಮೀಪದ ಮೀನುಗಾರರ […]
ಗೋವಾ ಬಂಟರ ಸಂಘ ರಜತ ಸಂಭ್ರಮದ ಲಾಂಛನ ಬಿಡುಗಡೆ
ಪಣಜಿ(ಡಿ, 05): ಗೋವಾ ಬಂಟರ ಸಂಘದ ವತಿಯಿಂದ 2025 ರ ಜನವರಿ 19ರಂದು ನಡೆಯಲಿರುವ ರಜತ ಸಂಭ್ರಮ ಕಾರ್ಯಕ್ರಮದ ಲಾಂಛನ ಬಿಡುಗಡೆ ಡಿಸೆಂಬರ್ 01 ರಂದು ನಡೆದ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕಾವಡಿ ಸದಾಶಿವ ಶೆಟ್ಟಿ ಅನಾವರಣ ಮಾಡಿದರು. ಗೋವಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸುನಿಲ್ ಶೆಟ್ಟಿ ಬೆಳ್ಳಂಪಳ್ಳಿ, ಕೋಶಾಧಿಕಾರಿ ಶ್ರೀ ಪ್ರಶಾಂತ್ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಶ್ರೀ ವಿಜಯೇಂದ್ರ ಶೆಟ್ಟಿ ಕಬ್ಯಾಡಿ, […]