ಪುತ್ತೂರು(ಫೆ. 03): ತಾಲೂಕಿನ ಪೋಳ್ಯ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠದ ರಥೋತ್ಸವವು ಫೆಬ್ರವರಿ 4ರಂದು ವಿಜೃಂಭಣೆಯಿಂದ ನಡೆಯಲಿದೆ.
ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯ”ಎರಡನೇ ತಿರುಪತಿ” ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.
ಇಲ್ಲಿ ಪ್ರಧಾನ ದೇವರು ಶ್ರೀ ಲಕ್ಷ್ಮೀ ವೆಂಕಟ್ರಮಣ, ಜೊತೆಗೆ ಭವಾನಿಶಂಕರ, ದೇವಿ, ಮತ್ತು ಮೂರು ವಿಭಿನ್ನ ಶಕ್ತಿಯುಳ್ಳ ಗಣಪತಿ ಸೇರಿದಂತೆ ಪಂಚ ದೇವತೆಗಳನ್ನು ಆರಾಧಿಸಲಾಗುತ್ತದೆ. ಸ್ಥಳ ದೈವಗಳಾಗಿ ಧೂಮಾವತಿ ಮತ್ತು ಗುಳಿಗ ದೈವಗಳೂ ಪೂಜಿಸಲ್ಪಡುತ್ತವೆ.
ಪ್ರತಿ ವರ್ಷ ರಥಸಪ್ತಮಿಯ ದಿನದಂದು ವಾರ್ಷಿಕ ಜಾತ್ರೆ ಹಾಗೂ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗರುಡ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುತ್ತದೆ. ಇದು ಭಕ್ತರಿಗೆ ವಿಶೇಷ ಆಕರ್ಷಣೆಯಾಗಿದೆ.
ಈ ಮಠವು ಪುತ್ತೂರು-ಮಂಗಳೂರು ರಸ್ತೆಯಲ್ಲಿ, ಪುತ್ತೂರಿನಿಂದ 5 ಕಿಮೀ ದೂರದಲ್ಲಿದೆ.
ದೇವಸ್ಥಾನದ ಹೆಚ್ಚಿನ ಮಾಹಿತಿಗಾಗಿ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಉಮಾಶಂಕರ್ ಮತ್ತು ಕಾರ್ಯದರ್ಶಿ ನಂದಕಿಶೋರ್, ಪ್ರಧಾನ ಅರ್ಚಕ ವೇಧ ಮೂರ್ತಿ ಶ್ರೀ ಸತ್ಯ ನಾರಾಯಣ ಭಟ್ ಅವರನ್ನು ಸಂಪರ್ಕಿಸಬಹುದು.
ದೇವಸ್ಥಾನದ ಸಂಪರ್ಕ ಸಂಖ್ಯೆಯಾಗಿ 9448823626, 09481507471,9448687927,ನೀಡಲಾಗಿದೆ.