ಕಂಡ್ಲೂರು(ಜೂ, 27): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಕುಂದಾಪುರ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ವಿವಿಧ ಸಂಘ -ಸಂಸ್ಥೆಗಳ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಜೂನ್, 29 ರಂದು ಕಂಡ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.
ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ಜಯಂತ್ ಅಮೀನ್ ಕೋಡಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕುಂದಾಪುರ ಘಟಕದ ಅಧ್ಯಕ್ಷರಾದ ನಾಗೇಶ್ ಹಳನಾಡು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಸಂಘಟನೆ ಮಾಜಿ ಅಧ್ಯಕ್ಷ ಶ್ರೀ ಸದಾನಂದ ಬಳ್ಕೂರ್ ರವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಶಿಬಿರದ ಯೋಜನಾಧಿಕಾರಿ ಕಿರಣ್ ಹಳನಾಡು, ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ಗೌರವ ಅಧ್ಯಕ್ಷರಾದ ಚಂದ್ರಹಾಸ ಕೋಣಿ, ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷರಾದ ವಿಜಯಕುಮಾರ್ ಹಾಗೂ ಪದಾಧಿಕಾರಿಗಳು , ವೈದ್ಯಾಧಿಕಾರಿಯಾದ ಸುಬ್ರಾಯ್ ಕಾಮತ್, ವಿಜಯ್ ಪುತ್ರನ್,ಉದಯಕುಮಾರ ಹಳನಾಡು,ಸಂದೀಪ್ ಶೆಟ್ಟಿ ಹಳನಾಡು ಉಪಸ್ಥಿತರಿದ್ದರು.
ಹಾಗೆಯೇ ಈ ಸಂದರ್ಭದಲ್ಲಿ ಜಯಂತ್ ಅಮೀನ್ ಕೋಡಿ,.ನಾಗೇಶ್ ಹಳನಾಡು ಹಾಗೂ ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಾದ ಅಶೋಕ್ ಕೆರೆಕೆಟ್ಟೆ, ಅಣ್ಣಪ್ಪ ಆಚಾರ್ ,ಚಂದ್ರ ಮೊಗವೀರರನ್ನು ಸನ್ಮಾನಿಸಲಾಯಿತು.
ಘಟಕದ ಕಾರ್ಯದರ್ಶಿ ಮಾಧವ ಧನ್ಯವಾದಗೈದರು. ಶ್ರೀ ಸುಧಾಕರ್ ಕಾಂಚನ್ ನಿರೂಪಣೆಗೈದರು. ಶಿಬಿರದಲ್ಲಿ ಒಟ್ಟು 104 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.