ಕುಂದಾಪುರ(ಜು,13): ಪರೀಕ್ಷೆ ಬಗ್ಗೆ ಮಾಹಿತಿ ಉಪನ್ಯಾಸ ವಿದ್ಯಾರ್ಥಿಗಳು ನೀಟ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಸಿಸುವಾಗ ತಮ್ಮ ಸ್ಪರ್ಧೆಯಿರುವುದು ಬೇರೆಯವರೊಂದಿಗೆ ಅಲ್ಲ, ತನ್ನದೇ ಆದ ನಿನ್ನೆಯ ಸಾಮರ್ಥ್ಯದೊಂದಿಗೆ ಇಂದಿನ ಕೌಶಲ್ಯವನ್ನು ಸ್ಪರ್ಧೆಗೊಡ್ಡಿ, ನಿರಂತರತೆ, ಶಿಸ್ತು ಮತ್ತು ದೊಡ್ಡ ಕನಸು ಕಾಣುವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಒಂದು ಪ್ರತಿಶತವಾದರೂ ನಿನ್ನೆಗಿಂತ ಉತ್ತಮರಾಗಬೇಕೆಂದು ಮನಗಂಡು ಯಶಸ್ಸು ಸಾಧಿಸಬೇಕು” ಎಂದು ಕುವೈಟ್ ನ ಅಲ್ ಸಭಾ ಆಸ್ಪತ್ರೆಯ ಮಕ್ಕಳತಜ್ಞ, ಸೀನಿಯರ್ ರಿಜಿಸ್ಟ್ರಾರ್, ಡಾ. ಶಿಶಿರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶಿಶಿರ್ ಶೆಟ್ಟಿಯವರನ್ನು ಸಭೆಗೆ ಪರಿಚಯಿಸಿ ಸ್ವಾಗತಿಸಿದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಾದ ಸಹನಾ ಮತ್ತು ಮೇಘನಾ ಪ್ರಾರ್ಥನೆಗೈದರು.ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನೀಸ್ ನತಾಶಾ ಡಿಸೋಜಾ ರವರು ನಿರೂಪಿಸಿ ವಂದನಾರ್ಪಣೆಗೈದರು.
Month: June 2026
ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್: ಪ್ರತಿಭಾ ಪುರಸ್ಕಾರ, ಕ್ರೀಡಾಪಟುಗಳಿಗೆ ಗೌರವ ಸನ್ಮಾನ, ವಿದ್ಯಾರ್ಥಿವೇತನ ಹಾಗೂ ಉಚಿತ ನೋಟ್ ಪುಸ್ತಕ ವಿತರಣೆ
ಕುಂದಾಪುರ(ಜು ,12): ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ.), ಮೊಳಹಳ್ಳಿ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಗೈದ ಕ್ರೀಡಾಪಟುಗಳಿಗೆ ಗೌರವ ಸನ್ಮಾನ, ಮೊಳಹಳ್ಳಿ ಗ್ರಾಮದ ವಿಶಿಷ್ಟ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಬಿದ್ಕಲ್ ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢಶಾಲಾ […]
ಬಿ.ಬಿ. ಹೆಗ್ಡೆ ಕಾಲೇಜು: ಟಿವಿಎಸ್ ಗ್ರೂಪ್ ಕ್ಯಾಂಪಸ್ ನೇಮಕಾತಿ
ಕುಂದಾಪುರ( ಎ,12): ಕುಂದಾಪುರದ ಡಾ .ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಟಿವಿಎಸ್ ಗ್ರೂಪ್ ಸಂಸ್ಥೆ ವತಿಯಿಂದ ಎಕ್ಸ್ ಫಿನೋ ಕನ್ಸಲ್ಟೆನ್ಸಿ ವತಿಯಿಂದ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮ ಎಪ್ರಿಲ್ 11 ರಂದು ನಡೆಸಿತು. ಅಂತಿಮ ವರ್ಷದ B .Com.ಮತ್ತು BBA ವಿದ್ಯಾರ್ಥಿಗಳು ಭಾಗವಹಿಸಿದರು. ಎಕ್ಸ್ ಫಿನೋ ಕನ್ಸಲ್ಟೆನ್ಸಿ ಸಂಸ್ಥೆಯ HR ಅಧಿಕಾರಿ ಹಿತಾ ಶೆಟ್ಟಿ ಯವರು ವಿವಿಧ ಹುದ್ದೆಗಳು ಮತ್ತು ನೇಮಕಾತಿ ಪ್ರಕ್ರಿಯೆ ಬಗ್ಗೆ ಮಾಹಿತಿಯನ್ನು ನೀಡಿದರು. ಸಂಸ್ಥೆಯ ಇತರೆ ಅಧಿಕಾರಿಗಳಾದ ಜ್ಯೋತಿ […]
ಮೊಗವೀರ ಯುವ ಸಂಘಟನೆ ಹೆಮ್ಮಾಡಿ : ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ತ್ರಾಸಿ ಕಡಲ ತೀರ ಸ್ವಚ್ಛತೆ
ಕುಂದಾಪುರ (ಜೂ. 05): ಮೊಗವೀರ ಯುವ ಸಂಘಟನೆ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ,ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ, ಹಾಗೂ ಗ್ರಾಮ ಪಂಚಾಯತ್ ತ್ರಾಸಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂನ್, 05 ರಂದು ತ್ರಾಸಿ ಕಡಲತೀರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೊಗವೀರ ಯುವ ಸಂಘಟನೆಯ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಪ್ರವೀಣ್ ಮೊಗವೀರ ಗಂಗೊಳ್ಳಿ, ಕಾರ್ಯದರ್ಶಿ ಜಯಂತ್ ಕುಂದರ್ ಬಾಳಿಕೆರೆ, […]
ಕೆ.ಸಿ.ಇ.ಟಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಕಾಲೇಜು ಅತ್ಯುತ್ತಮ ಸಾಧನೆ
ಕಾರ್ಕಳ (ಜೂ,03): ಏಪ್ರಿಲ್ 23 ಮತ್ತು 24 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಇಂಜಿನಿಯರಿಂಗ್ ವಿಭಾಗದಲ್ಲಿ ನಾಗದೇವ್ ಎಂ. ಜಿ 28 ನೇ ರ್ಯಾಂಕ್ ಪಡೆದುಕೊಂಡು ಅದ್ಭುತ ಸಾಧನೆಗೈದಿದ್ದಾರೆ. ಮಾತ್ರವಲ್ಲದೆ ವಿದ್ಯಾರ್ಥಿಗಳಾದ ಸಂವಿತ್ ಅಮಿತ್ 55, ಧ್ರುವ ವಿ ಬಿ 71, ತೇಜಸ್ ಆರ್ ಬಿ 82, ನಮಿತ್ […]










