Views: 315
ಅಂದು ಆ ಶಾಲೆಯಲ್ಲೊಂದು ಸಂಭ್ರಮದ ವಾತಾವರಣ. ಎಲ್ಲರೂ ಸಡಗರದಿಂದ ಸಮಾರಂಭಕ್ಕಾಗಿ ತಯಾರಿ ನಡೆಸುವ ತರಾತುರಿಯಲ್ಲಿದ್ದರು. ಎಲ್ಲವೂ ಸಜ್ಜಾಗುವ ವೇಳೆಯಲ್ಲಿ ಗಣ್ಯರೂ ಆಗಮಿಸಲಾರಂಭಿಸಿದ್ದರು. ಕೆಲ ಕ್ಷಣದಲ್ಲೇ ಸಮಾರಂಭದ ಕೇಂದ್ರ ಬಿಂದುವಾದ “ದಿಶಾ ತ್ರಿವೇಣಿ” ತನ್ನ ಜೀವನದ ಅವಿಭಾಜ್ಯ ಅಂಗವಾದ ತಾಯಿಯೊಂದಿಗೆ ಸಮಾರಂಭದ ಸ್ಥಳಕ್ಕೆ ಆಗಮಿಸಿ ತನ್ನೆಲ್ಲಾ ಗುರುವೃಂದರನ್ನು ಮಾತನಾಡಿಸಿ ಆಶೀರ್ವಾದ ಪಡೆದಿದ್ದಳು. ಕೊಂಚ ಸಮಯದಲ್ಲೇ ಸಮಾರಂಭ ಆರಂಭವಾಗಿತ್ತು. ವೇದಿಕೆಯ ಮೇಲೆ ಗಣ್ಯಾತೀಗಣ್ಯರ ನಡುವೆ ತನ್ನ ಮಗಳನ್ನು ಕಂಡ ತ್ರಿವೇಣಿಯವರ ಕಣ್ಣಲ್ಲಿ ಆನಂದಬಾಷ್ಪ. […]