ಕುಂದಾಪುರ (ಏಪ್ರಿಲ್ 24): ಬದುಕು ಭಾವನೆಗಳಿಂದ ಹೊರತಾದಾಗ ಅದು ಬಂಡೆಗಲ್ಲಿನoತಾಗುತ್ತದೆ ಹಾಗಾಗಿ ಬದುಕಿಗೆ ಭಾವನೆಗಳ ಆವರಣ-ಹೂರಣಗಳಿರಬೇಕು. ಆ ಭಾವನಾತ್ಮಕ ಬಂಧುಗಳಾದ ಹೆತ್ತ ತಾಯಿ, ಜನ್ಮಕೊಟ್ಟ ತಂದೆ, ವಿದ್ಯೆ ನೀಡಿದ ಗುರುವಿನ ನಡುವೆ ಭಾವನೆಗಳು ಬೆಸೆಯುವಂತಾದಾಗ ಜೀವನದ ಮೌಲ್ಯ ತಿಳಿಯುತ್ತದೆ ಎಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತಕ ಶ್ರೀ ಎನ್. ಆರ್. ದಾಮೋದರ ಶರ್ಮ ಬಾರ್ಕೂರು ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗವು ಆಯೋಜಿಸಿದ ವಿಶೇಷ ಉಪನ್ಯಾಸದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾವನಾತ್ಮಕ ಸಂಬAಧಗಳು ವ್ಯಕ್ತಿಯನ್ನು ಸದೃಢಗೊಳಿಸುತ್ತದೆ. ಮನುಷ್ಯನಿಗೆ ಅಂತಹ ಸಂಬoಧಗಳು ಮುಖ್ಯ ಎಂದರು.
ಉಪಾಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ರೇವತಿ ಕುಲಾಲ್ ಅತಿಥಿಗಳನ್ನು ಪರಿಚಯಿಸಿ, ಶ್ರೀ ಸುಕುಮಾರ್ ಶೆಟ್ಟಿ ಕಮಲಶಿಲೆ ವಂದಿಸಿ, ರೇಷ್ಮಾ ಶೆಟ್ಟಿ ನಿರೂಪಿಸಿದರು.