ಬಸ್ರೂರು (ಆ, 11): ದೇಶದ 77 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಬಸ್ರೂರು (ರಿ.) ವತಿಯಿಂದ ನೀರಿದ್ದರೆ ನರ – ಕಾಡಿದ್ದರೆ ವರ ಎನ್ನುವ ಅಭಿಯಾನದಡಿ ಆಗಸ್ಟ್ 11 ರಂದು ಬಸ್ರೂರಿನಲ್ಲಿ ನಡೆದ ತಾಲೂಕು ಮಟ್ಟದ ಮ್ಯಾರಥಾನ್ ನಲ್ಲಿ ಕುಂದಾಪುರ ಟ್ರ್ಯಾಕ್ &ಫೀಲ್ಡ್ ಕ್ರೀಡಾ ಸಂಸ್ಥೆಯ ವಿದ್ಯಾರ್ಥಿಗಳು ಸಮಗ್ರ 10 ಪದಕಗಳನ್ನು ಪಡೆದುಕೊಂಡು ಸಾಧನೆಗೈದಿದ್ದಾರೆ.
21 ವರ್ಷ ಕೆಳ ವಯಸ್ಸಿನ ಹುಡುಗರ ವಿಭಾಗದಲ್ಲಿ ಶ್ರೀ ಸಿದ್ಧಿ ವಿನಾಯಕ ರೆಸಿಡೆನ್ಸಿ ಸ್ಕೂಲ್ ಇದರ ಪ್ರಥಮ್ ಡಿ ಏನ್ ದ್ವಿತೀಯ ಸ್ಥಾನ, ಸಿದ್ದಲಿಂಗ ತೃತೀಯ ಸ್ಥಾನ, ಸುಕ್ರಿತ್ ಶೆಟ್ಟಿ ನಾಲ್ಕನೇ ಸ್ಥಾನ,ಸುಹಾಸ್ ಐದನೇ ಸ್ಥಾನ,ಪ್ರಥಮ್ ಆರನೇ ಸ್ಥಾನ, ಸರ್ಕಾರಿ ಪ್ರೌಢ ಶಾಲೆ ಕುಂದಾಪುರದ ಪ್ರಥಮೇಶ್ 7ನೇ ಸ್ಥಾನ ಹಾಗೂ ಶ್ರೀ ಸಿದ್ಧಿ ವಿನಾಯಕ ರೆಸಿಡೆನ್ಸಿ ಸ್ಕೂಲ್ ನ ಅಕ್ಷಯ್ ಎಲ್ಪಿ 10ನೇ ಸ್ಥಾನ ಪಡೆದಿರುತ್ತಾರೆ.
21 ವರ್ಷ ಕೆಳ ವಯಸ್ಸಿನ ಹುಡುಗಿಯರ ವಿಭಾಗದಲ್ಲಿ ಓಕ್ ವುಡ್ ಶಿಕ್ಷಣ ಸಂಸ್ಥೆಯ ನವ್ಯ ಆಚಾರ್ ಪ್ರಥಮ ಸ್ಥಾನ ಅಕ್ಷತಾ ಜಿ ಪೈ ದ್ವಿತೀಯ ಸ್ಥಾನ, ಶರಣ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಕುಂದಾಪುರ ಟ್ರ್ಯಾಕ್ & ಫೀಲ್ಡ್ ಸಂಸ್ಥೆಯ ಮುಖ್ಯಸ್ಥರು ಹಾಗೂ ತರಬೇತುದರಾದ ಶ್ರೀ ಪ್ರಶಾಂತ ಶೆಟ್ಟಿ ತರಬೇತಿಯನ್ನು ನೀಡಿರುತ್ತಾರೆ.