ಕುಂದಾಪುರ(ಫೆ,27): ಕೊಳಲು ನುಡಿಸುವುದರ ಮೂಲಕ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದು ಅದ್ವಿತೀಯ ಸಾಧನೆಗೈದ ಗಂಗೊಳ್ಳಿಯ ಮಾಸ್ಟರ್ ಶ್ಯಾಮ್ ತನ್ನ 14 ನೆ ವಯಸ್ಸಿನಲ್ಲಿಯೇ ವಿಭಿನ್ನ ರಾಗಗಳನ್ನು ಕೊಳಲಿನಲ್ಲಿ ಒಂದು ನಿಮಿಷದಲ್ಲಿ ನುಡಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ್ದಾನೆ.
2024ನೇ ಸಾಲಿನ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಸ್ವೀಕರಿಸಿ ಈಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿರುವ ಈತ ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ್ ಪೂಜಾರಿ ಮತ್ತು ಪ್ರಾಧ್ಯಾಪಕಿ ಮಾಲತಿ ಗಣೇಶ ಅವರ ಪುತ್ರ. ಗಂಗೊಳ್ಳಿಯ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.