ಹಾಲಾಡಿ (ಮೇ ,26): ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿ ಅಂಗನವಾಡಿ ಕೇಂದ್ರಕ್ಕೆ ಸ್ಮಾರ್ಟ್ ಕ್ರಿಯೇಷನ್ ಎಜುಕೇಶನ್ ಟ್ರಸ್ಟ್ (ರಿ ) ಹೈಕಾಡಿ ಸಂಸ್ಥೆಯ ವತಿಯಿಂದ 7000 ಮೊತ್ತದ ಪುಟ್ಟ ಮಕ್ಕಳಿಗೆ 10 ಕುರ್ಚಿಗಳನ್ನು ಮತ್ತು ಅಂಗನವಾಡಿಗೆ 5 ಕುರ್ಚಿಗಳನ್ನು ನೀಡಲಾಯಿತು. ಪೂರ್ವ ಬಾಲ್ಯ ಶಿಕ್ಷಣ ಅತ್ಯಂತ ಅವಶ್ಯಕವಾಗಿದ್ದು ಕಲಿಕೆಗೆ ಅಗತ್ಯ ಅವಶ್ಯಕತೆಗಳನ್ನ ನೀಡುವ ಭರಸೆ ಸಂಸ್ಥೆ ನೀಡಿದೆ.
ಕಾರ್ಯಕ್ರಮದಲ್ಲಿ ಆವರ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಕೊಣ್ಣಿಮಕ್ಕಿ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಆರತಿ. ಅಂಗನವಾಡಿ ಶಿಕ್ಷಕಿ ಶ್ರೀಮತಿ ಭಾನುಮತಿ, ಸಹಾಯಕಿ ಶ್ರೀಮತಿ ಸರಿತಾ, ಪೋಷಕರಾದ ಶ್ರೀಮತಿ ಸುಲೋಚನ ಶೆಡ್ತಿ, ಸ್ಮಾರ್ಟ್ ಕ್ರಿಯೇಷನ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಹಾಯ್ಕಾಡಿ,ಸದಸ್ಯರಾದ ಶ್ರೀ ವಿನಯ್ ಕುಮಾರ್ ಶಿಕ್ಷಕರು ಶೃಂಗೇರಿ, ಶ್ರೀ ಜನಾರ್ಧನ್ ಹೈಕಾಡಿ, , ಶ್ರೀಮತಿ ಕೌಸಲ್ಯ ಕೃಷ್ಣಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ಮಾರ್ಟ್ ಕ್ರಿಯೇಷನ್ ಎಜುಕೇಶನ್ ಟ್ರಸ್ಟ್ (ರಿ ) ಹೈಕಾಡಿ ಸಂಸ್ಥೆಯು ಮಿಷನ್- 40 ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಒಂದು ಪುಸ್ತಕದ ಬೆಲೆ 40 ರೂ ಪೇ ಮಾಡುವುದರೊಂದಿಗೆ ಅದರಲ್ಲಿ ಬಂದಿರುವ ಹಣದಲ್ಲಿ ಅಗತ್ಯ ಇರುವ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ನೋಟ್ ಪುಸ್ತಕ ಮತ್ತು ಪೀಠೋಪಕರಣಗಳನ್ನು ವಿತರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:9743682692