ಕುಂದಾಪುರ(ಮೇ ,24): ಗ್ರಾಮೀಣ ಭಾಗದ ಜನರಿಗೆ ಆಸ್ಪತ್ರೆಗೆ ಹೋಗಲು ಕಷ್ಟ ಆಗುತ್ತದೆ ಹಾಗಾಗಿ ಸಾರ್ವಜನಿಕರಿಗೆ ಅನುಕೂಲವಾಗಲು ಸರ್ಕಾರವು ಉಚಿತ ಕ್ಯಾಂಪ್ ಗಳನ್ನು ನಡೆಸುತ್ತವೆ, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಯುಷ್ ಇಲಾಖೆ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಉಡುಪಿ, ಆಯುಷ್ ಇಲಾಖೆ ಉಡುಪಿ, ಗ್ರಾಮ ಪಂಚಾಯತ್ ಕಾಲ್ತೋಡು, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು, ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಕಾಲ್ತೋಡು, ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿಮಂಜೇಶ್ವರ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು, ಮುದ್ದುಮನೆ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಇಲ್ಲಿ ಹಮ್ಮಿಕೊಂಡಿರುವ, ದೃಷ್ಟಿ (ಪ್ರ)ದಾನ ಯೋಜನೆ 2025-26, ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಮತ್ತು ರಕ್ತದೊತ್ತಡ, ಮಧುಮೇಹ ಪರೀಕ್ಷೆ, ಉಚಿತ ಆಯುಷ್ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಸಮಾರಂಭವನ್ನು ಉದ್ಘಾಟಿಸುತ್ತಾ ಡಾ|| ಪ್ರೇಮಾನಂದ ತಾಲೂಕು ಆರೋಗ್ಯ ಅಧಿಕಾರಿಗಳು ಕುಂದಾಪುರ ನುಡಿದರು.
ಅಲ್ಲದೆ ಇಂದು ತಪ್ಪಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಅನೇಕ ಕಾಯಿಲೆಗಳು ಬರುತ್ತವೆ ಅದಕ್ಕಾಗಿ ನಮ್ಮ ಸುತ್ತಮುತ್ತಲ ಬೆಳೆದ ತರಕಾರಿ, ಹಣ್ಣು, ಹಂಪಲುಗಳನ್ನು ಉಪಯೋಗಿಸಬೇಕು ಅಲ್ಲದೆ ದೀರ್ಘಕಾಲಿನ ಕೆಲವು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಉತ್ತಮ ಪರಿಹಾರಗಳವೆ ಈ ನಿಟ್ಟಿನಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಕಾಲ್ತೋಡು ಆಯುರ್ವೇದ ಆಸ್ಪತ್ರೆಯ ಪ್ರಯೋಜನ ಪಡೆದುಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಅಣ್ಣಪ್ಪ ಶೆಟ್ಟಿ ಭಟ್ನಾಡಿ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಗ್ರಾಮ ಪಂಚಾಯತ್ ಕಾಲ್ತೋಡು ಇವರು ಕ್ಯಾಂಪ್ ಗಳಲ್ಲಿ ಶಿಬಿರ ವೈದ್ಯರು ಹೇಳಿರುವ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸಬೇಕು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನೀಡುವುದೇ ಪಂಚಾಯತ್ ನ ಉದ್ದೇಶವಾಗಿದೆ ಎನ್ನುತ್ತಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಮುದ್ದು ಮನೆ ಶಿರೂರು ಕಣ್ಣಿನ ಆಸ್ಪತ್ರೆಯ ನೇತ್ರತಜ್ಞರಾದ ಡಾ. ರಶ್ಮಿ ಅವರು ಕಣ್ಣಿನ ಸಾಮಾನ್ಯ ಕಾಯಿಲೆಗಳ ಬಗ್ಗೆ ವಿವರಿಸಿದರು. ಶ್ರೀಯುತ ಚಿಕ್ಕಯ್ಯ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಕಾಲ್ತೋಡು , ಶ್ರೀ ಶಂಕರ್ ಶೆಟ್ಟಿ ಶಿರೂರು ಮುದ್ದು ಮನೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ನಾವುಂದ ವೈದ್ಯಾಧಿಕಾರಿಗಳಾದ ಡಾ. ವಿನಯ ರವರು ಉಪಸ್ಥಿತರಿದ್ದರು. ನಂತರ ಆಯ್ದ ಕುಟುಂಬಗಳಿಗೆ ಔಷಧಿ ಸಸ್ಯಗಳನ್ನು ವಿತರಿಸಲಾಯಿತು.
ಡಾ|| ವೀಣಾ ಕಾರಂತ್ ವೈದ್ಯಾಧಿಕಾರಿಗಳು ಸ.ಆ.ಚಿ ಕಾಲ್ತೋಡು ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿರೂರು ಮುದ್ದುಮನೆ ಇಲ್ಲಿಯ ನೇತ್ರ ತಪಾಸಣಾ ತಂಡದಿಂದ ಉಚಿತ ನೇತ್ರ ತಪಾಸಣೆ ಹಾಗೂ ಡಾ|| ವೀಣಾ ,ಡಾ||ವಿನಯ ಉಚಿತ ಆಯುಷ್ ಆರೋಗ್ಯ ತಪಾಸಣೆ ನಡೆಸಿ ಸಾರ್ವಜನಿಕರಿಗೆ ಔಷಧಿ ವಿತರಿಸಲಾಯಿತು.ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿಮಂಜೇಶ್ವರ CHO ರಕ್ಷಿತಾ ,PHCO ಪ್ರತಿಮಾ,ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಕಾಲ್ತೋಡು ಮಣಿಕಂಠ, ಆಯುಷ್ಮಾನ್ ಆರೋಗ್ಯ ಮಂದಿರದ ಸಿಬ್ಬಂದಿಗಳಾದ ಸರಸ್ವತಿ, ನಾಗದೀಪ,ವಿಶಾಲ ಸಹಕರಿಸಿದರು.