ಕಾರ್ಕಳ ( ಏ ,26): ಇಲ್ಲಿನ ಅಜೆಕಾರು ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ ನ ಆಡಳಿತಕ್ಕೊಳಪಟ್ಟ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯು, ಡಾ. ಸುಧಾಕರ ಶೆಟ್ಟಿಯವರ ಆಶಯದಂತೆ 2013-14 ಶೈಕ್ಷಣಿಕ ವರ್ಷದಿಂದ ಕಾರ್ಕಳದ ಆಸುಪಾಸಿನ ವಿಧ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದಿದೆ. ಗ್ರಾಮೀಣ ಭಾಗದ ಮಕ್ಕಳಿಗೆ, ನಗರ ಭಾಗದ ಮಕ್ಕಳಿಗೆ ಸಿಗುವ ಆಧುನಿಕ ಸೌಲಭ್ಯಗಳನ್ನು ನೀಡುತ್ತಾ ರಾಜ್ಯ ಪಠ್ಯಕ್ರಮದ ಜೊತೆಗೆ ವಿಧ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಹಾಗೂ ಇಂದಿನ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಕೋಟದಲ್ಲಿ ಯಕ್ಷ ತ್ರಿವಳಿ ಸಮಾರೋಪ
ಕೋಟ ( ಎ ,20): “ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಕೆಯಾಗುತ್ತದೆ, ಚಿನ್ನಕ್ಕೆ ಸಂಸ್ಕಾರ ಕೊಟ್ಟರೆ ಒಡವೆಯಾಗುತ್ತದೆ, ಸೆಗಣಿಗೆ ಸಂಸ್ಕಾರ ಕೊಟ್ಟರೆ ವಿಭೂತಿಯಾಗುತ್ತದೆ, ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ಮಹಾದೇವನಾಗುತ್ತಾನೆ. ಮಕ್ಕಳಿಗೆ ಬದುಕಿನ ಮೌಲ್ಯವನ್ನು ಕೊಡ ಬಲ್ಲ ಶಕ್ತಿ ಯಕ್ಷಗಾನಕ್ಕಿದೆ. ಮಗುವನ್ನು ತಾಯಿಯಂತೆ ಪೋಷಿಸಬಲ್ಲ ಶಕ್ತಿ ಯಕ್ಷಗಾನದ ನಿಜ ಸತ್ವವಾಗಿದೆ. ಸಾಲಿಗ್ರಾಮ ಮಕ್ಕಳ ಮೇಳದ ಹಂದೆ ಉಡುಪರು ಕಲೆಯ ಮೂಲಕ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಬ್ರಹ್ಮಾವರ ತಾಲೂಕು ಕನ್ನಡ […]
ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಪ್ರಾಚ್ಯ ವಸ್ತುಗಳ ಪ್ರದರ್ಶನ
ಕುಂದಾಪುರ (ಎ.16): ಪ್ರಾಚ್ಯ ವಸ್ತುಗಳು ಪೂರ್ವಜರ ಸಂಪ್ರದಾಯದ ಪ್ರತೀಕ ಅವುಗಳನ್ನು ಉಳಿಸುವ ಮತ್ತು ಪರಿಚಯಿಸುವಲ್ಲಿ ವಿದ್ಯಾರ್ಥಿಗಳ ಪ್ರಯತ್ನ ಶ್ಲಾಘನೀಯ ಎಂದು ಉದಯವಾಣಿ ದಿನಪತ್ರಿಕೆಯ ಉಪಮುಖ್ಯ ವರದಿಗಾರ ಶ್ರೀ ಲಕ್ಷ್ಮಿ ಮಚ್ಚಿನ ಹೇಳಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಪ್ರಾಚ್ಯ ವಸ್ತುಗಳ ಪ್ರದರ್ಶನದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮಾತನಾಡಿ, ಪ್ರಾಚ್ಯ […]
ಅಂಬೇಡ್ಕರ್ ಬದುಕು ಮತ್ತು ಸಾಧನೆ ಎಲ್ಲರಿಗೂ ಪ್ರೇರಣೆ : ನರೇಂದ್ರ ಎಸ್ ಗಂಗೊಳ್ಳಿ
ಗಂಗೊಳ್ಳಿ(ಎ ,14): ಅಂಬೇಡ್ಕರ್ ಅವರ ಬದುಕು ಹೋರಾಟ ಮತ್ತು ಸಾಧನೆ ಜಗತ್ತಿನ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತದ್ದು ಈ ನಿಟ್ಟಿನಲ್ಲಿ ಅವರ ಬದುಕನ್ನು ಪ್ರತಿಯೊಬ್ಬರು ಅಧ್ಯಯನ ಮಾಡುವ ಅಗತ್ಯವಿದೆ ಎಂದು ಲೇಖಕ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯ ಪಟ್ಟರು. ಅವರು ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ನೆಹರು ಯುವ ಕೇಂದ್ರ ಉಡುಪಿ, ಡಾ. ಬಿ. ಆರ್ ಅಂಬೇಡ್ಕರ್ ಯುವಕ ಮಂಡಲ, ಅಮೃತ […]
ಬಿ. ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಸಂಚಿಕೆ “ಶಿಖರ”ಅನಾವರಣ
ಕುಂದಾಪುರ, (ಎ 15): ಮಂಗಳೂರು ವಿಶ್ವವಿದ್ಯಾನಿಲಯ ಅಂತರ್-ಕಾಲೇಜು ಮಟ್ಟದ ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಗಮನ ಸೆಳೆದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2023-24ನೇ ಸಾಲಿನ ವಾರ್ಷಿಕ ಸಂಚಿಕೆ ‘ಶಿಖರ’ವನ್ನು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಶ್ರೀ ಶ್ರೀನಿವಾಸ ಸೋಮಯಾಜಿಯವರು ಅನಾವರಣಗೊಳಿಸಿ, ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ […]
ಬಿ. ಬಿ. ಹೆಗ್ಡೆ ಕಾಲೇಜಿಗೆ ‘ಪ್ರಜ್ಞಾ– 2025’ ಸಮಗ್ರ ಪುರಸ್ಕಾರ
ಕುಂದಾಪುರ (ಎ.22): ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಎರಡು ದಿನ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ ‘ಪ್ರಜ್ಞಾ 2025’ ರಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೊದಲನೇ ದಿನ ಶೈಕ್ಷಣಿಕ ಸ್ಪರ್ಧೆಯಲ್ಲಿ 15 ಬಹುಮಾನ, ಎರಡನೇ ದಿನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಆಯೋಜಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದು, ಒಟ್ಟು 24 ಬಹುಮಾನ ಪಡೆಯುವ ಮೂಲಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಎರಡೂ ವಿಭಾಗಗಳಲ್ಲಿ […]
ಬಿ. ಬಿ. ಹೆಗ್ಡೆ ಕಾಲೇಜು : ಜೀವನಮೌಲ್ಯ–ಉಪನ್ಯಾಸ
ಕುಂದಾಪುರ( ಏ, 09): ಸರಳ ಜೀವನದ ಸೂತ್ರವೇ ಜೀವನ ಮೌಲ್ಯ. ತಾವು ಸರಳವಾಗಿ ಬದುಕುವ ಮೂಲಕ ಇನ್ನೊಬ್ಬರಿಗೆ ನೆರವಾಗಬೇಕು. ಇದು ಜೀವನಕ್ಕೆ ಸಂತೃಪ್ತಿ ನೀಡುತ್ತದೆ ಎಂದು ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಹೇಳಿದರು. ಇವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಜೀವನ ಮೌಲ್ಯ ಮಾಲಿಕೆ 4ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಈ ಸಂದರ್ಭ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ […]
ಜೆಇಇ ಮೈನ್ಸ್ 2025 ಎರಡನೇ ಹಂತದ ಪ್ರವೇಶ ಪರೀಕ್ಷೆ: ಹೆಮ್ಮಾಡಿಯ ಜನತಾ ಪಿ ಯು ಕಾಲೇಜಿಗೆ 99 ಪರ್ಸಂಟೈಲ್ ಗಿಂತ ಅಧಿಕ ಅಂಕಗಳು
ಹೆಮ್ಮಾಡಿ (ಎ ,21): ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ಎರಡನೇ ಹಂತದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಪ್ರಾರಂಭದ ಮೂರನೇ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಆರಂಭಗೊಂಡು ಶೈಕ್ಷಣಿಕ ಸಂಚಲನ ಮೂಡಿಸಿರುವ ಜನತಾ ಶಿಕ್ಷಣ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಗುಣಮಟ್ಟದ ಶಿಕ್ಷಣ ನೀಡುತ್ತಿದೆ, ಜೆಇಇ ಮೈನ್ಸ್ 2025ರ ಎರಡನೇ ಹಂತದ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಆಕಾಶ್ […]
ಕ್ರಾಸ್ ಲ್ಯಾಂಡ್ ಕಾಲೇಜು ಬ್ರಹ್ಮಾವರ : ಮಾನವ ಹಕ್ಕು ಅರಿವಿನ ಕುರಿತು ಉಪನ್ಯಾಸ
ಬ್ರಹ್ಮಾವರ (ಎ. 19): ಇಲ್ಲಿನ ಕ್ರಾಸ್ ಲ್ಯಾಂಡ್ ಪದವಿ ಕಾಲೇಜಿನ ಮಾನವ ಹಕ್ಕು ಘಟಕದ ಆಶ್ರಯದಲ್ಲಿ ಮಾನವ ಹಕ್ಕುಗಳ ಕುರಿತು ಅರಿವು ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏಪ್ರಿಲ್,19 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರದ ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಮಾತನಾಡಿ ಮಾನವ ಹಕ್ಕುಗಳ ಅರಿವು ಎಲ್ಲರಿಗೂ ಅಗತ್ಯ […]
ರಥೋತ್ಸವದ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸುವ ಕಾರ್ಯ ಶ್ಲಾಘನೀಯ – ಆನಂದ್ ಸಿ. ಕುಂದರ್
ಬಗ್ವಾಡಿ(ಎ. 14): ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇಗುಲದ ಬ್ರಹ್ಮರಥೋತ್ಸವದ ಪ್ರಯುಕ್ತ ಬಗ್ವಾಡಿ ಉತ್ಸವ”ದ ಶೀರ್ಷಿಕೆಯಡಿಯಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಾಗೂ ಸಾಂಸ್ಕೃತಿಕ ವೈಭವ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದು ರಥೋತ್ಸವದ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸುತ್ತದೆ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯ ಉತ್ತಮ ಕಾರ್ಯಗಳು ನಿಮ್ಮಿಂದಾಗಲಿ ಎಂದು ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಶ್ರೀ ಆನಂದ ಸಿ ಕುಂದರ್ ಹೇಳಿದರು. ಅವರು ಶ್ರೀ ಮಹಿಷಾಸುರ ಮರ್ದಿನಿ ಸಾಂಸ್ಕೃತಿಕ ಬಳಗ ಇವರ […]










