ಕುಂದಾಪುರ (ಅ. 15): ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಯ 60 ಕೆಜಿ ವಿಭಾಗದಲ್ಲಿ ಭಾಗವಹಿಸಿದ ಸೋಮಶೇಖರ್ ಖಾರ್ವಿ ಕಂಚುಗೋಡುರವರು ಬೆಸ್ಟ್ ಪೊಸರ್ ಪ್ರಶಸ್ತಿ ಪಡೆದಿದ್ದಾರೆ. ಈಗಾಗಲೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಸೋಮಶೇಖರ ಖಾರ್ವಿ ಯವರು ಮಿಸ್ಟರ್ ಇಂಡಿಯಾ ಆಗುವ ಕನಸನ್ನು ಹೊಂದಿದ್ದಾರೆ.
Category: ರಾಜ್ಯ ಸುದ್ದಿ
ಸುದ್ದಿ ಸಮಾಚಾರ — > ರಾಜ್ಯ ಸುದ್ದಿ
ಜೆ.ಇ.ಇ ಮೈನ್ ಫಲಿತಾಂಶ ಪ್ರಕಟ – ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರಿಯೇಟಿವ್ ಕಾಲೇಜಿಗೆ ಉತ್ತಮ ಫಲಿತಾಂಶ
ಕಾರ್ಕಳ (ಏ,26): ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ (ಮೈನ್) ಅಂತಿಮ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ದುರ್ಗಾಶ್ರೀ ಎಮ್ 99.1312779, ನೇಹಾ ಕೆ ಉದಪುಡಿ 98.9485981, ಪ್ರಣವ್ ಟಿ ಎಮ್ 98.6313992, ಆದಿತ್ಯ ಅಲಗೌಡ ಪಾಟೀಲ್ 98.5573008, ಯುವರಾಜ್ ಬಿ ಕೆ 98.287914, ಅಕುಲ್ ಕೃಷ್ಣ ಎಮ್ ಎಸ್ 98.0229479, […]
ಡಾ.ಗಣೇಶ್ ಗಂಗೊಳ್ಳಿಯವರಿಗೆ ಡಾ. ಏ. ಪಿ. ಜೆ ಅಬ್ದುಲ್ ಕಲಾಂ ಪ್ರಶಸ್ತಿ
ಕುಂದಾಪುರ (ಜು,13) : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಖಿದ್ಮಾ ಫೌಂಡೇಷನ್ ರಾಜ್ಯ ಸಮಿತಿಯ ವತಿಯಿಂದ ಬೆಂಗಳೂರಿನ ಚಾಮರಾಜಪೇಟೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಜು .09 ರಂದು ನಡೆದ ರಾಜ್ಯ ಮಟ್ಟದ ಖಿದ್ಮಾ ಕಾವ್ಯ ಮತ್ತು ಸಾಂಸ್ಕ್ರತಿಕ ಸಂಭ್ರಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಾಡಿನ ಪ್ರಸಿದ್ಧ ಗಾಯಕ ಹಾಗೂ ಸಂಘಟಕ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲೆ ಇದರ ಜಿಲ್ಲಾ ಕಾರ್ಯಾಧ್ಯಕ್ಷ ರಾದ […]
ಮೈಸೂರು ದಸರಾ ಪ್ರಯುಕ್ತ ಬಾಡಿ ಬಿಲ್ಡಿಂಗ್ : ಸೋಮಶೇಖರ್ ಖಾರ್ವಿ ದ್ವೀತಿಯ
ಕುಂದಾಪುರ(ಅ,8): ಹಲವಾರು ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿರುವ ಕುಂದಾಪುರ ತಾಲೂಕಿನ ಕಂಚುಗೋಡು ನಿವಾಸಿ ಸೋಮಶೇಖರ್ ಖಾರ್ವಿಯವರು ಇತ್ತೀಚೆಗೆ ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆದ ಬಾಡಿ ಬಿಲ್ಡಿಂಗ್ 65 ಕೆ.ಜಿ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿರುತ್ತಾರೆ. ಸೋಮ ಶೇಖರ್ ಖಾರ್ವಿಯವರ ಈ ಸಾಧನೆಗೆ ಗ್ರಾಮಸ್ಥರು ಮತ್ತು ಅಭಿಮಾನಿಗಳು ಅಭಿನಂದನೆಕೋರಿದ್ದಾರೆ.
ಯಾದಗಿರಿ ಜಿಲ್ಲೆಯ ರೈತನ ಮನವಿಗೆ ಸ್ಪಂದಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯ ಅರುಣ ಕುಮಾರ್ ಕಲ್ಗದೆ
ಬೆಂಗಳೂರು (ಸೆ,28):ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದ ರೈತ ಸಂಗಣ್ಣ ಶಿವಪ್ಪ ಚಳ್ಳಗಿ ಯವರಿಗೆ ಕರ್ನಾಟಕ ಭೂ ನ್ಯಾಯ ಮಂಡಳಿಯಿಂದ ನೋಟಿಸ ನೀಡಲಾಗಿತ್ತು. ಆತ ಅಮರೇಶ ಕಾಮನಕೇರಿ ಯವರ ಮುಖಾಂತರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ ಕುಮಾರ ಕಲ್ಗದೆ ರವರನು ಭೇಟಿಯಾಗಿ ತಮಗಾದ ಸಮಸ್ಯೆ ತಿಳಿಸಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿದ ಅರುಣ ಕುಮಾರ ಕಲ್ಗದೆರವರು ರೈತನ ಪರ ವಾದ ಮಾಡಲು ವಕೀಲರನ್ನು ನೇಮಿಸಿ ಕೊಟ್ಟು […]
ಕಾಮನವೆಲ್ತ್ ಕ್ರೀಡಾಕೂಟ : ಕುಂದಾಪುರದ ಗುರುರಾಜ್ ಪೂಜಾರಿಗೆ ಕಂಚಿನ ಪದಕ
ಕುಂದಾಪುರ (ಜು, 30) : ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಕ್ರೀಡಾಕೂಟದ 61 ಕೆ.ಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ವಂಡ್ಸೆ ಮೂಲದ ಗುರುರಾಜ್ ಪೂಜಾರಿ ಜೆಡ್ಡು ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ.ಒಟ್ಟು 269 ಕೆಜಿ ಎತ್ತಿರುವ ಗುರುರಾಜ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಾಧನೆಗೈದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಕೆ.ಪಿ.ಸಿ.ಸಿ ಮೀನುಗಾರರ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಯೋಗೇಶ್ ಶಿರೂರು ನೇಮಕ
ಕುಂದಾಪುರ (ಮೇ ,31): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೀನುಗಾರರ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುಸ್ಕ್ರತರು, ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಉಪಾದ್ಯಕ್ಷರಾದ ಯೋಗೇಶ್ ಶಿರೂರು ನೇಮಕಗೊಂಡಿದ್ದಾರೆ . ಇವರನ್ನು ಕೆ.ಪಿ.ಸಿ.ಸಿ ಅದ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ಕೆ.ಪಿ.ಸಿ.ಸಿ ಮೀನುಗಾರರ ಘಟಕದ ಅದ್ಯಕ್ಷರಾದ ಮಂಜುನಾಥ್ ಬಿ ಯವರು ಆಯ್ಕೆಮಾಡಿದ್ದಾರೆ .
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಲ್ಲೂರು ದೇಗುಲಕ್ಕೆ ಭೇಟಿ
ಕೊಲ್ಲೂರು(ಮೇ,15): ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಕೇಂದ್ರ ಶ್ರೀ ಕ್ಷೇತ್ರ ಕೊಲ್ಲೂರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಮೇ14 ರ ಬೆಳಿಗ್ಗೆ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ದೇಗುಲದ ಹಿರಿಯ ಅರ್ಚಕ ಡಾ. ಕೆ.ಎನ್ .ನರಸಿಂಹ ಅಡಿಗ ಹಾಗೂ ಶ್ರೀ ಎನ್.ಪರಮೇಶ್ವರ ಅಡಿಗರವರ ನೇತ್ರತ್ವದಲ್ಲಿ ಸಚಿವರಿಗೆ ಗೌರವಪೂರ್ವಕವಾಗಿ ದೇವಳಕ್ಕೆ ಸ್ವಾಗತಿಸಲಾಯಿತು.ಈ ಸಂಧರ್ಭದಲ್ಲಿ ಹಿಂದಿನ ದಿನಗಳಲ್ಲಿ ತಾವು ದೇವಾಲಯಕ್ಕೆ ಆಗಮಿಸಿದ ಸಂದರ್ಭಗಳನ್ನು ಹಾಗೂ ದೇವಿಯ […]
ಎಸ್.ಆರ್ .ಕ್ಯಾಟರರ್ಸ್ ಬೆಂಗಳೂರು: ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶ್ರೀ ವೈ.ಎಸ್.ವಿ ದತ್ತಾ
ಬೆಂಗಳೂರು (ಜ.9): ಬೆಂಗಳೂರಿನ ಪ್ರಸಿದ್ದ ಕ್ಯಾಟರಿಂಗ್ ಸಂಸ್ಥೆಯಾದ ಕುಂದಾಪುರ ಮೂಲದ ಶ್ರೀ ರಾಘವೇಂದ್ರ ಹಾರ್ಮಣ್ ಮಾಲಕತ್ವದ ಎಸ್.ಆರ್.ಕ್ಯಾಟರರ್ಸ ನ ಹೊಸ ವರ್ಷದ ಕ್ಯಾಲೆಂಡರ್ ನ್ನು ರಾಜ್ಯದ ಹಿರಿಯ ರಾಜಕಾರಣಿ ,ರಾಜಕೀಯ ಮುತ್ಸದ್ದಿ, ಮಾಜಿ ಶಾಸಕ ಶ್ರೀ ವೈ.ಎಸ್.ವಿ.ದತ್ತಾರವರು ಇತ್ತೀಚೆಗೆ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್.ಆರ್.ಕ್ಯಾಟರರ್ಸ ನ ಮಾಲಕ ಶ್ರೀ ರಾಘವೇಂದ್ರ ಹಾರ್ಮಣ್ ಉಪಸ್ಥಿತರಿದ್ದರು.
ಕೋಟತಟ್ಟು:ಪೊಲೀಸ್ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗೆ ಪರಿಹಾರಧನ ವಿತರಿಸಿದ ಗ್ರಹ ಸಚಿವ
ಕೋಟ(ಜ.2): ಕೋಟತಟ್ಟು ಗ್ರಾಮದಲ್ಲಿ ಪೊಲೀಸ್ ಲಾಠಿಚಾರ್ಜ್ ಗೊಳಗಾದ ಕೊರಗ ಸಮುದಾಯವರನ್ನು ರಾಜ್ಯ ಗ್ರಹ ಸಚಿವ ಅರಗ ಜ್ಙಾನೇಂದ್ರರವರು ಜ.01 ರಂದು ಭೇಟಿ ಮಾಡಿ ಸಾಂತ್ವನ ಹೇಳಿದರು. ಗಾಯಗೊಂಡವರಿಗೆ ₹2 ಲಕ್ಷ ಪರಿಹಾರ ಘೋಷಿಸಿ, ಪ್ರತಿ ಕುಟುಂಬಕ್ಕೆ ₹50,000 ಪರಿಹಾರ ನೀಡಿದರು. ಪೊಲೀಸ್ ದೌರ್ಜನ್ಯ ಪ್ರಕರಣ ಕುರಿತು ಸಿ.ಓ.ಡಿ ತನಿಖೆ ನಡೆಸಲಾಗುವುದು ಎಂದು ತಿಳಿಸುತ್ತಾ, ಕೊರಗ ಕುಟುಂಬದವರ ವಿವಾಹ ಸಮಾರಂಭದಲ್ಲಿ ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು,ಕೊರಗ […]