ಕುಂದಾಪುರ (ನ.28) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ,ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಶಿವಮೊಗ್ಗದಲ್ಲಿ ಜರುಗಿದ 19ನೇ ಕರ್ನಾಟಕ ರಾಜ್ಯ ಮಟ್ಟದ ಅಬಾಕಸ್ ಅಂಡ್ ಮೆಂಟಲ್ ಅರಿಥ್ಮೆಟಿಕ್ ಕಾಂಪಿಟೀಶನ್ 2024ರಲ್ಲಿ ಭಾಗವಹಿಸಿ, ಪ್ರಥ್ವಿನ್, ಪ್ರಣವ್.ವಿ.ಶೇಟ್ ಮತ್ತು ಶ್ರೇಯಸ್.ಎಸ್.ರಾವ್ ವಿಜೇತರಾಗಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಡಿ. 07 ರಂದು ಕುಂದಾಪುರದಲ್ಲಿ ಮೊಗವೀರರ ಸಾಂಸ್ಕೃತಿಕ ಸಿಂಚನ -“ಹೆಜ್ಜೆ ಗೆಜ್ಜೆ ” ಸಾಂಸ್ಕೃತಿಕ ಸ್ವರ್ಧೆ
ಕುಂದಾಪುರ (ಡಿ. 03): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ಅಂಬಲಪಾಡಿ, ಉಡುಪಿ ಹಾಗೂ ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಅಂತರ್ ಘಟಕಗಳ ಸಾಂಸ್ಕೃತಿಕ ಸ್ಪರ್ಧೆ “ಹೆಜ್ಜೆ -ಗೆಜ್ಜೆ” -ಮೊಗವೀರ ಸಾಂಸ್ಕೃತಿಕ ಸಿಂಚನವು ಡಿಸೆಂಬರ್ 07 ರಂದು ಕುಂದಾಪುರದ ಮೊಗವೀರ ಭವನದಲ್ಲಿ ನಡೆಯಲಿದೆ. ನಾಡೋಜ ಡಾ. ಜಿ ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮೊಗವೀರ ಯುವ […]
ಕೋಡಿ ಬ್ಯಾರೀಸ್: 37 ನೇ ‘ಸ್ವಚ್ಛ ಕಡಲತೀರ – ಹಸಿರುಕೋಡಿ’ ಅಭಿಯಾನ
ಕೋಡಿ ( ಡಿ .02): ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ, ಇದರ 37 ನೇ ‘ಸ್ವಚ್ಛ ಕಡಲತೀರ – ಹಸಿರು ಕೋಡಿ’ ಅಭಿಯಾನ ಡಿ.01 ರಂದು ಯಶಸ್ವಿಯಾಗಿ ನಡೆಯಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸೈಯದ್ ಮೊಹಮ್ಮದ್ ಬ್ಯಾರಿ ಇವರು ಅಭಿಯಾನವನ್ನುದ್ದೇಶಿಸಿ “ಭಗವಂತನಿಗೆ ಪ್ರೀತಿಪೂರ್ವಕವಾದ ಈ ಕಾಯಕವು ನಿರಂತರವಾಗಿ ಸಾಗಬೇಕಾದದ್ದು ಮಾತ್ರವಲ್ಲದೆ, ಮಾಡುವ ಕೆಲಸದಲ್ಲೂ ಪರಿವರ್ತನೆಯಾಗಬೇಕು: ಪ್ರಸಾದ ನೀಡುವ ಅರ್ಚಕನಿಗಿಂತ, ಪ್ರಸಾದ ಸ್ವೀಕರಿಸುವ ಭಕ್ತನಿಗೆ ಹೇಗೆ ಪ್ರಸಾಧದ […]
ಹೆಮ್ಮಾಡಿಯ ಜನತಾ ಕಾಲೇಜಿನ ಶ್ರುತಿಕಾ ಶೆಟ್ಟಿ ದ್ವಿತೀಯ ಸ್ಥಾನ
ಹೆಮ್ಮಾಡಿ( ಡಿ .01): ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಡುಪಿ,ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ೫೦ರ ಸಂಭ್ರಮಾಚರಣೆಯ ಪ್ರಯಕ್ತ ಆಯೋಜಿಸಿದ ಜಿಲ್ಲಾ ಮಟ್ಟದ ‘ಕನ್ನಡ ಭಾಷಣ’ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು/ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಬೈಂದೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಧನೆಗೈದ ಹೆಮ್ಮಾಡಿಯ ಜನತಾ ಕಾಲೇಜು
ಹೆಮ್ಮಾಡಿ ( ಡಿ .01): ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮೆರೆದು, 7 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕ್ರಮವಾಗಿ,ಕನ್ನಡ ಭಾಷಣ ಸ್ಪರ್ಧೆಯಲ್ಲಿ ಶ್ರುತಿಕಾ ಶೆಟ್ಟಿ ಪ್ರಥಮ ಸ್ಥಾನ, ಕನ್ನಡ ಪ್ರಬಂಧ […]
ವಿಯೆಟ್ನಾಂ ಇಂಡಿಯಾ ಅಂತರಾಷ್ಟ್ರೀಯ ಐಕಾನಿಕ್ ಪ್ರಶಸ್ತಿಗೆ ಶ್ರೀ ಗಣೇಶ ಮೊಗವೀರ ಆಯ್ಕೆ
ಕುಂದಾಪುರ( ನ .27): ಏಷ್ಯನೆಟ್ ಸುವರ್ಣ ಹಾಗೂ ಕನ್ನಡ ಪ್ರಭ ಪತ್ರಿಕೆಯವರು ಕೊಡಮಾಡುವ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರರವರು ಆಯ್ಕೆಯಾಗಿದ್ದಾರೆ. ಶ್ರೀಯುತರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ವಿಶೇಷ ಕೊಡುಗೆಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನವೆಂಬರ್ ,28 ರಂದು ವಿಯೆಟ್ನಾಂ ನಲ್ಲಿ ನಡೆಯಲಿರುವ ಅದ್ದೂರಿಯ ಸಮಾರಂಭದಲ್ಲಿ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ […]
ಬ್ಯಾರಿಸ್ ಪದವಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ
ಕುಂದಾಪುರ (ನ. 27): ಬ್ಯಾರಿಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಸಂವಿಧಾನ ದಿನವನ್ನು ನವೆಂಬರ್,26ರಂದು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶಬೀನಾ. ಎಚ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ದೇಶ ಸುವ್ಯವಸಿತವಾಗಿ ಅಭಿವೃದ್ಧಿಯತ್ತ ಸಾಗುವಲ್ಲಿ ಹಾಗೂ ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ, ಭಾರತೀಯ ಸಂವಿಧಾನ ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದ್ದು ಇತರ ದೇಶಗಳಿಗೆ ಮಾದರಿಯಾಗಿದೆ ಎಂದು ನುಡಿದು ವಿದ್ಯಾರ್ಥಿಗಳಿಗೆ […]
ಪ್ರಾಚ್ಯ ಪ್ರಜ್ಞೆ ಚಿತ್ರಕಲಾ ಸ್ಪರ್ಧೆ : ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ
ಕಾರ್ಕಳ ( ನ .26): ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಉಪ ನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಸಹಯೋಗದೊಂದಿಗೆ ನಡೆದ 2024-25 ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಚ್ಯ ಪ್ರಜ್ಞೆ ಚಿತ್ರಕಲಾ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾದ ಆದಿತ್ಯ ಎನ್. ನಾಯಕ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕಾರ್ಕಳದ ಶ್ರೀ ನಿತ್ಯಾನಂದ […]
ಗಂಗೊಳ್ಳಿ: ನ. 28 ರಂದು ಹೆಚ್ ಭಾಸ್ಕರ ಶೆಟ್ಟಿ ಅವರಿಗೆ ಅಭಿಮಾನದ ಸನ್ಮಾನ
ಗಂಗೊಳ್ಳಿ( ನ ,26): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ಮತ್ತು ಉತ್ತಮ ಕೃಷಿಕರು ಆಗಿರುವ ಹೊಸಾಡು ಭಾಸ್ಕರ ಶೆಟ್ಟಿ ಇವರಿಗೆ ಗಂಗೊಳ್ಳಿಯ ಸ್ನೇಹಿತರ ಬಳಗದಿಂದ ಅಭಿಮಾನದ ಸನ್ಮಾನ ಕಾರ್ಯಕ್ರಮವು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಮೆಂಬರ್ 28ರ ಗುರುವಾರ ಸಂಜೆ ನಡೆಯಲಿದೆ. ಜಿ ಎಸ್ ವಿ ಎಸ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಕಾಶಿನಾಥ್ ಪಿ ಪೈ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದು […]
ಬಿ. ಬಿ. ಹೆಗ್ಡೆ ಕಾಲೇಜು : ‘ಫಿಟ್ನೆಸ್ ಚಾಲೆಂಜ್–2024’
ಕುಂದಾಪುರ (ನ.23): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ಘಟಕ ಮತ್ತು ಹಿಂದಿ ಸಂಘದ ವತಿಯಿಂದ ಕುಂದಾಪುರದ ಲಯನ್ಸ್ ಕ್ಲಬ್ ವೆಯ್ಟ್ ಝೋನ್ ಜಿಮ್ ಫಿಟ್ನೆಸ್ ಕೇಂದ್ರ ಇವರ ಸಹಯೋಗದೊಂದಿಗೆ ‘ಫಿಟ್ನೆಸ್ ಚಾಲೆಂಜ್–2024’ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾದ ಲಯನ್ ರಾಜೀವ್ ಕೋಟ್ಯಾನ್, II ವಿ.ಡಿ.ಜಿ. ಅವರು ವಿದ್ಯಾರ್ಥಿಗಳಿಗೆ ದೈಹಿಕ ಆರೋಗ್ಯದ ಮಹತ್ವದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕುಂದಾಪುರದ ಲಯನ್ಸ್ […]










