ಕುಂದಾಪುರ(ಮೇ ,23): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ಹಾಗೂ ಎನ್.ಸಿ.ಸಿ. ಘಟಕಗಳ ಸಂಯುಕ್ತ ಆಶ್ರಯದಲ್ಲಿ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ, ಕುಂದಾಪುರ, ಹಾಗೂ ಲಯನ್ಸ್ ಕ್ಲಬ್ ಕುಂದಾಪುರ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಮೇ 23 ರಂದು ಜರಗಿತು.
ಇಂಡಿಯನ್ ರೆಡ್ ಕ್ರಾಸ್ ಕುಂದಾಪುರ ಘಟಕದ ಸಭಾಪತಿ ಶ್ರೀ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದಾನದ ಮಹತ್ವ ಹಾಗೂ ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ರಕ್ತನಿಧಿ ಕೇಂದ್ರದ ಕಾರ್ಯವೈಖರಿಯ ಕುರಿತು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ನ ಅಧ್ಯಕ್ಷ ಶ್ರೀ ಪ್ರಜ್ಞೇಶ ಪ್ರಭು, ಕಾರ್ಯದರ್ಶಿ ಡಾ. ರವೀಂದ್ರ, ಸದಸ್ಯರಾದ ಶ್ರೀ ನವೀನ್ ಶೆಟ್ಟಿ, ಪ್ರೋ. ರಾಧಾಕೃಷ್ಣ ಶೆಟ್ಟಿ, ಡಾ. ಜಯರಾಮ್ ನಂಬಿಯಾರ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಕಾರ್ಯದರ್ಶಿ ಸತ್ಯನಾರಾಯಣ್ ಪುರಾಣಿಕ್, ಖಜಾಂಚಿ ಶಿವರಾಮ್ ಶೆಟ್ಟಿ, ಸದಸ್ಯರಾದ ಸೀತರಾಮ್ ಶೆಟ್ಟಿ, ಎ. ಮುತ್ತಯ್ಯ ಶೆಟ್ಟಿ, ಡಾ. ಸೋನಿ ಡಿ ಕೋಸ್ಟಾ , ಕಾಲೇಜಿನ ಎನ್.ಸಿ. ಸಿ. ಘಟಕದ ಸಂಯೋಜಕರಾಗಿರುವ ಲೆಫ್ಟಿನೆಂಟ್ ಹರೀಶ್ . ಹಾಗೂ ಶರತ್ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಶ್ರೀ ಯೋಗೀಶ್ ಶ್ಯಾನುಭೋಗ್ ಸ್ವಾಗತಿಸಿದರು. ವೈ. ಆರ್. ಸಿ. ಘಟಕದ ಕಾರ್ಯಕ್ರಮಾಧಿಕಾರಿ ಶ್ರೀಮತಿ ಮಾಲತಿ ವಂದಿಸಿ, ಎನ್. ಎಸ್. ಎಸ್. ಘಟಕ ಎರಡರ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಎನ್ ಎಸ್ ಎಸ್ ಸ್ವಯಂಸೇವಕ ಸುಹಾಸ್ ಮಲ್ಯ ಪ್ರಾರ್ಥಿಸಿದರು. ಒಟ್ಟು 121 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.