ಕೊಲ್ಲೂರು ( ಜು,13): ಇಲ್ಲಿನ ಶ್ರೀ ಮೂಕಾಂಬಿಕ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆ ಇತ್ತೀಚೆಗೆ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ. ಬಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂದರ್ಭದಲ್ಲಿ ಪ್ರಥಮ ಪಿಯುಸಿಯ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಭೂಮಿಕಾ ,ದ್ವಿತೀಯ ಸ್ಥಾನ ತಿಲಕ್ ಪಿ ಸಿ, ತೃತೀಯ ಸ್ಥಾನ ಪಡೆದ ಸುಬ್ರಹ್ಮಣ್ಯ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶಿಶಿರ ,ದ್ವಿತೀಯ ಸ್ಥಾನ ಪಡೆದ ಆಯುಷ್ ತೃತೀಯ ಸ್ಥಾನ ಪಡೆದ ಶಾಲಿನಿ ಹಾಗೂ ಇವರ ಪೋಷಕರನ್ನು ಸನ್ಮಾನಿಸಿ ಗೌರವಿಸಲಾಯಿತು .
ಸಾಸ್ತಾನ ಟೋಲ್ ಗೇಟ್ ಬಳಿ ನೂತನ ಆಡಳಿತದೊಂದಿಗೆ ಶುಭಾರಂಭ ಗೊಂಡಿದೆ. ಶುಚಿ-ರುಚಿಯಾದ ಆಹಾರ
ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ಪ್ರಸ್ತಾಪಿಸಿ ಸ್ವಾಗತಿಸಿದ್ದರು. ಗಣಕ ವಿಜ್ಞಾನ ಉಪನ್ಯಾಸಕ ರಾಮ ನಾಯ್ಕ್ ಕೆ.ಬಿ ವಂದಿಸಿದರು.ಸಮಾಜಶಾಸ್ತ್ರ ಉಪನ್ಯಾಸಕ ನಾಗರಾಜ್ ಅಡಿಗ ನೀಲಾವರ ನಿರೂಪಿಸಿದ್ದರು.